ಇಟಗಾ ಕೆ.ಗ್ರಾಮದಲ್ಲಿ ಸ್ಮಶಾನ ಭೂಮಿಗೆ ತಾಂಡಾ ರೈತರ ವಿರೋಧ
ಕಲಬುರಗಿ:
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಎದುರುಗಡೆ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ವತಿಯಿಂದ ಬೃಹತ್ ಪ್ರತಿಭಟನೆಯಲ್ಲಿ ವಿಶ್ವನಾಥ್ ಸಿಂಗೆ ಅವರು ಮಾತನಾಡಿದರು .
ಕಲಬುರಗಿ ತಾಲೂಕಿನ ಇಟಗಾ ಕೆ ಗ್ರಾಮ ತಾಂಡಾದ ರೈತರು ಸುಮಾರು 70 ವರ್ಷಗಳಿಂದಲೂ ಸರ್ವೆ ನಂ. 42 ರಲ್ಲಿ ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಈ ಎಲ್ಲಾ ರೈತರಿಗೆ ಇದೇ ಭೂಮಿಯೇ ಜೀವನಕ್ಕೆ ಆಧಾರವಾಗಿದೆ. ಹೀಗಾಗಿ ತಲೆತಲಾಂತರಗಳಿಂದ ಸಾಗುವಳಿ ಮಾಡುತ್ತಾ ಇಲ್ಲೇ ಜೀವನವನ್ನು ಸಾಗಿಸುತ್ತಿದ್ದಾರೆ. ಆದರೆ ಮೊನ್ನೆಯವರೆಗೂ ಗ್ರಾಮಸ್ಥರಿಗೂ ತಿಳಿಯದಂತೆ ಸದರಿ ಸರ್ವೆ ನಂಬರ್ ಜಮೀನನಲ್ಲಿ ನಾಲ್ಕು ಎಕರೆ ಸ್ಮಶಾನಕ್ಕೆ ಗೊತ್ತುಮಾಡಲಾಗಿದೆ ಎಂದು ಅಧಿಕಾರಿಗಳಿಂದ ತಿಳಿಸಿದರು ಬಂದಿದೆ ಗ್ರಾಮದ ರೈತರು ಆತಂಕವನ್ನೂ ಎದುರಿಸುತ್ತಿದ್ದಾರೆ. ಎಂದರು
ಇದೇ ಸಂದರ್ಭದಲ್ಲಿ ರಮೇಶ್ ಎಸ್ ,ಬಿ ಶಿವರಾಮ ರಾಠೋಡ್ ,ಪಾಂಡು ರಾಠೋಡ್ , ರೈತ ಸಂಘದ ಪದಾಧಿಕಾರಿಗಳು ಉಸ್ಥಿತರಿದ್ದರು