ಕಲ್ಯಾಣ ಕರ್ನಾಟಕದ ಶಿಕ್ಷಕರ ಧ್ವನಿಯಾಗಿಯೆ ಕಾರ್ಯ ನಿರ್ವಹಿಸುತ್ತಿರುವೆ ಡಾ ನಮೋಶಿ
ಕಲ್ಯಾಣ ಕರ್ನಾಟಕದ ಶಿಕ್ಷಕರ ಧ್ವನಿಯಾಗಿಯೆ ಕಾರ್ಯ ನಿರ್ವಹಿಸುತ್ತಿರುವೆ-ಡಾ ನಮೋಶಿ
ಕಲಬುರ್ಗಿ: ಕಲ್ಯಾಣ ಕರ್ನಾಟಕದ ಸಮಸ್ಯೆಗಳ ಪರಿಹಾರಕ್ಕಾಗಿ ನಿಮ್ಮೆಲ್ಲರ ಧ್ವನಿಯಾಗಿ ಸದನದಲ್ಲಿ ಹೋರಾಡುತ್ತಿರುವೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯೆ ನನ್ನ ಗುರಿ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ ಶಶೀಲ್ ಜಿ ನಮೋಶಿ ಹೇಳಿದರು
ಅವರಿಗೆ ಶರಣಬಸವೇಶ್ವರ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ದೊರೆತ ಹಿನ್ನೆಲೆಯಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಶಾಲಾ ಕಾಲೇಜುಗಳು ನೌಕರರ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು
ಇಂದು ನನಗೆ ದೊರೆತಿರುವ ಈ ಪುರಸ್ಕಾರಕ್ಕೆ ನಿಜವಾಗಲೂ ಕಾರಣರು ಶಿಕ್ಷಕರು, ನನ್ನನ್ನು ಈ ಸ್ಥಾನಕ್ಕೆ ತಂದವರು ಅವರು ಅವರಿಗೆ ಯಾವಾಗಲೂ ನಾನು ಋಣಿಯಾಗಿದ್ದೇನೆ ಎಂದು ಹೇಳಿದರು.
ಹಿಂದಿನಿಂದಲೂ ನಮ್ಮ ಕುಟುಂಬದ ಜೋತೆ ಅನ್ಯೋನ್ಯ ಸಂಬಂಧ ಶರಣಬಸವೇಶ್ವರ ಸಂಸ್ಥಾನ ಹೊಂದಿದೆ ನನ್ನ ಅಜ್ಜನಿಗೂ ನಂತರ ನನಗೂ ಆಡಳಿತ ಮಂಡಳಿಯಲ್ಲಿ ಉನ್ನತ ಸ್ಥಾನ ನೀಡಿದೆ ಅದರಂತೆ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ನನ್ನನ್ನು ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ದಿದೆ ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಈ ಶಿಕ್ಷಣ ಸಂಸ್ಥೆಗಳೆ ನಾನು ಶಿಕ್ಷಕರ ಶೈಕ್ಷಣಿಕ ಸಮಸ್ಯೆಗಳನ್ನು ತಿಳಿಯಲು ಸಹಾಯ ಮಾಡಿದ್ದರಿಂದಲೆ ನಿಮ್ಮ ಸಹಾಯದಿಂದ ವಿಧಾನ ಪರಿಷತ್ ಸದಸ್ಯನಾಗಲೂ ಸಹಾಯಕವಾಯಿತು ಎಂದು ತಿಳಿಸಿದರು ಇಂದು ನನ್ನ ತಂದೆ ತಾಯಿಯ ಸಮಾನವಾಗಿರುವ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯಲ್ಲಿ 3 ನೇ ಬಾರಿ ಅಧ್ಯಕ್ಷನಾಗಿ ಕಾರ್ಯ ಮಾಡುವಾಗಲೇ ಶರಣಬಸವೇಶ್ವರ ವಿಶ್ವ ವಿದ್ಯಾಲಯ ನನಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿರುವದರಿಂದ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ ಎಂದು ಹೇಳಿದರು.
ಚಳಿಗಾಲದ ಅಧಿವೇಶನ ಮುಗಿಯಿತು ಕಲ್ಯಾಣ ಕರ್ನಾಟಕದ ಭಾಗದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ ಎಂದು ಹೇಳುವ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಈ ಬಾರಿ ಬೆಳಗಾವಿಯಲ್ಲಿ ನಡೆದ ಚಳಿಗಾಲ ಅಧಿವೇಶನದಲ್ಲಿ ಪ್ರತಿ ಬಾರಿ ಹೇಳುವಂತೆ ಅದೆ ರಾಗ ಅದೆ ಹಾಡು ಎಂಬಂತೆ ನಮ್ಮ ಭಾಗದ ಗಂಭೀರ ವಿಷಯಗಳ ಚರ್ಚೆಗೆ ಅವಕಾಶ ನೀಡದೆ ಇರುವದು ದುರದೃಷ್ಟಕರ ಎಂದು ಹೇಳಿದರು.
ಪ್ರೋ ಡಿ.ಎಂ.ನಂಜುಂಡಪ್ಪ ವರದಿ ಹಾಗೂ ಇತರೆ ವರದಿಗಳ ಆಧಾರದ ಮೇಲೆ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಹಾಗೂ ಈ ಭಾಗದ ಅನೇಕ ಹೋರಾಟಗಾರರ ಹೋರಾಟದ ಫಲವಾಗಿ 98ನೇ ಸಂವಿಧಾನದ ತಿದ್ದುಪಡಿ ಪ್ರಕಾರ 371 ಜೆ ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣ ಉದ್ಯೋಗ ಅವಕಾಶ ನೀಡಲು 2013ರಲ್ಲಿ ಸರ್ಕಾರ ಜಾರಿ ಮಾಡಿತು, ಆದರೆ ಈಗ ದಶಕಗಳು ಕಳೆದರೂ ಸಮಸ್ಯೆಗಳು ಸಮಸ್ಯೆಗಳಾಗಿಯೆ ಉಳಿದಿವೆ ಎಂದರು.
ಶಿಕ್ಷಣ, ಉದ್ಯೋಗ, ಅನುದಾನ ಮೀಸಲು, ಭಡ್ತಿ ಸೇರಿ ಇನ್ನಿತರ ಕ್ಷೇತ್ರಗಳಲ್ಲಿ ಕಲಂ 371(ಜೆ) ಉಲ್ಲಂಘನೆ ನಿರಂತರವಾಗಿದೆ. ಹೈಕ ಭಾಗದಲ್ಲಿ ಶಿಕ್ಷಣ, ಉದ್ಯೋಗ ಮತ್ತು ಬಡ್ತಿಯಲ್ಲಿ ಶೇ.80 ಮೀಸಲಾತಿ ಅನುಷ್ಠಾನವಾಗಿದೆ. ಬೆಂಗಳೂರು ಸಚಿವಾಲಯ ಸೇರಿ ಖಾಸಗಿ ಶಾಲಾ-ಕಾಲೇಜು ಮತ್ತು ಭಡ್ತಿ ವಿಷಯದಲ್ಲಿ ಸರಕಾರ ಕಲಂ 371(ಜೆ)ಯನ್ನು ಸಮರ್ಪಕವಾಗಿ ಜಾರಿ ಮಾಡಿಲ್ಲ, ಈಗಾಗಲೇ ಶಿಕ್ಷಣ ಸಚವರು 59,000 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಹೇಳಿದ್ದಾರೆ ಅದರಲ್ಲಿ ಬಹುಪಾಲು ಹುದ್ದೆಗಳು ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇವೆ, ಹೀಗಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಈ ಭಾಗ ಹಿಂದುಳಿಯಲು ಕಾರಣ ಎಂದು ಹೇಳಿದರು ಇದೆ ಸಂಧರ್ಭದಲ್ಲಿ ಕಲ್ಯಾಣ ಕರ್ನಾಟಕದ ಶಿಕ್ಷಕರಿಗೆ ಮಿಸಲಾತಿ ಬಡ್ತಿಯಲ್ಲಿ ಅನ್ಯಾಯವಾಗಲೂ ಬಿಡುವುದಿಲ್ಲ ಎಂದು ಹೇಳಿದರು.
ಇದೆ ಸಂಧರ್ಭದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಎಂ ಆರ್ ಎಂ ಸಿ ಸಂಚಾಲಕರಾದ ಡಾ ಶರಣಬಸಪ್ಪ ಹರವಾಳ ಬಸವೇಶ್ವರ ಆಸ್ಪತ್ರೆಯ ಹಿಂದಿನ ವೈದ್ಯಕೀಯ ಅಧೀಕ್ಷಕರಾದ ಡಾ ಆನಂದ ಗಾರಂಪಳ್ಳಿ ಡಾ ನಮೋಶಿಯವ ಕಾರ್ಯ ಚಟುವಟಿಕೆ ಕುರಿತು ಮಾತನಾಡಿ ಅವರ ಗುಣಗಾನ ಮಾಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯಾದರ್ಶಿಗಳಾದ ಡಾ ಕೈಲಾಸ ಪಾಟೀಲ್, ಆಡಳಿತ ಮಂಡಳಿ ಸದಸ್ಯರಾದ ಡಾ ಅನಿಲಕುಮಾರ ಪಟ್ಟಣ, ಡಾ ರಜನೀಶ್ ವಾಲಿ, ನಾಗಣ್ಣ ಘಂಟಿ,ಡಾ ಗುರುಲಿಂಗಪ್ಪ ಪಾಟೀಲ್ ಉಪಸ್ಥಿತರಿದ್ದರು
ವೈದ್ಯಕೀಯ ಕಾಲೇಜಿನ ಡೀನ್ ರಾದ ಡಾ ಶರಣಗೌಡ ಪಾಟೀಲ್ ಸ್ವಾಗತಿಸಿದರು, ಡಾ ಉಮಾ ರೇವೂರ ಪ್ರಾಸ್ತಾವಿಕವಾಗಿ ಮಾತನಾಡಿದರು ಡಾ ಸುಜಾತಾ ಪಾಟೀಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
