ಬಸವ ಮಂಟಪದಲ್ಲಿ ವಚನ ಭಜನೆಯ ಸಮಾರೋಪ
ಬಸವ ಮಂಟಪದಲ್ಲಿ ವಚನ ಭಜನೆಯ ಸಮಾರೋಪ
ಕಲಬುರಗಿ: ನಗರದ ಬಸವ ಮಂಟಪ ಮಾಕಾ ಲೇಔಟ್ ಜೇವರ್ಗಿ ಕಾಲೋನಿಯಲ್ಲಿ ಜಗಜ್ಯೋತಿ ಬಸವೇಶ್ವರ ಸೇವಾ ಸಮಿತಿ ವತಿಯಿಂದ ಶ್ರಾವಣ ಮಾಸದ ವಚನ ಭಜನೆಯ ಸಮಾರೋಪ ಸಮಾರಂಭವನ್ನು ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ ಹಾಗೂ ಮೇಯರ್ ಯಲ್ಲಪ್ಪ ನಾಯ್ಕೋಡಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಸವ ಮಂಟಪ ಅಧ್ಯಕ್ಷ ಅಯ್ಯಣ್ಣ ನಂದಿ, ಮಲ್ಲಿಕಾರ್ಜುನ್ ಪಾಟೀಲ್, ಅಶೋಕ ಘೂಳಿ, ಭೀಮಸೇನಕರ ವಿಬೂತಿ, ಮಲ್ಲಿಕಾರ್ಜುನ ಜಾಮಗೋಡ, ಅನಿಲಕುಮಾರ, ಧರ್ಮರಾಜ್ ಬಿ ಹೇರೂರ, ರಾಜು ಶಿನ್ನೂರ, ಮಹಾಂತೇಶ ಕಣ್ಣೂರ, ಸಂಗಮೇಶ ಮೂಲಗೆ, ಕೃಷ್ಣ ಸಿಂಧೆ, ಸಂಜುಕುಮಾರ, ಸುಭಾಷ ಡೆಂಕಿ, ವಿಠಲ ಮಡಿವಾಳ, ಲಕ್ಷ್ಮಣ, ಹನಮತ ರೆಡ್ಡಿ, ವಿದ್ಯಾ ಸಾಗರ, ರಮೇಶ, ಸತಿಶಕುಮಾರ, ರವಿ ಪಾಟೀಲ, ಬಾಬುರಾವ ಶೇರಿಕಾರ, ಎನ್.ಸಿ.ಪಾಟೀಲ, ಸಿದ್ದರಾಮಯ್ಯ ವಾಲಿ, ಬಸವರಾಜ, ಹಣಮಂತರಾಯ, ಶಿವಾನಂದ ಡೊಮನಾಳ್, ಸತೀಶ್ ಸಜ್ಜನ, ರಾಜೇಶ್ವರಿ, ರೂಪಾ, ಸ್ವರೂಪಾ, ಶ್ರೀದೇವಿ ಸೇರಿದಂತೆ ಇತರರು ಇದ್ದರು.