ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಶಿಕ್ಷಕನ ಪಾತ್ರ ಅತ್ಯಂತ ಶ್ರೇಷ್ಠ ಪಿಯು ಕಾಲೇಜಿನ ಪ್ರಾಚಾರ್ಯರಾದ ಬಿಎಚ್ ನಿರಗುಡಿ
ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಶಿಕ್ಷಕನ ಪಾತ್ರ ಅತ್ಯಂತ ಶ್ರೇಷ್ಠ ಪಿಯು ಕಾಲೇಜಿನ ಪ್ರಾಚಾರ್ಯರಾದ ಬಿಎಚ್ ನಿರಗುಡಿ
ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಶಿಕ್ಷಕನ ಪಾತ್ರ ಅತ್ಯಂತ ಶ್ರೇಷ್ಠ ಹಾಗೂ ಗುರುತರವಾಗಿದೆ ಶಿಕ್ಷಕನಿಲ್ಲದ ಶಾಲೆ ದೇವರಿಲ್ಲದ ದೇಗುಲದಂತೆ ಎಂಬ ಹೇಳಿಕೆಯಂತೆ ಮೊದಲು ಗುರುಕುಲಗಳೇ ಶಿಕ್ಷಣದ ಕೇಂದ್ರಗಳಾಗಿದ್ದವು ಗುರು ಶಿಷ್ಯ ಪರಂಪರೆ ತುಂಬಾ ಉತ್ತಮವಾಗಿತ್ತು ಶಿಕ್ಷಕರು ಸಮಯ ಪಾಲನೆ ಶಿಸ್ತು ಆರೋಗ್ಯ ಪ್ರಾಮಾಣಿಕತೆ, ಮೈಗೂಡಿಸಿಕೊಂಡು ಉತ್ತಮವಾದ ಶಿಕ್ಷಣ ನೀಡುವಲ್ಲಿ ಶ್ರಮ ವಹಿಸಬೇಕು ಆಗ ಮಾತ್ರ ಒಬ್ಬ ಉತ್ತಮ ಶಿಷ್ಯನನ್ನು ಪಡೆಯಲು ಸಾಧ್ಯವಾಗುತ್ತೆ ಎಂದು ಸತ್ಯಂ ಪಿಯು ಕಾಲೇಜಿನ ಪ್ರಾಚಾರ್ಯರಾದ ಬಿಎಚ್ ನಿರಗುಡಿ ಹೇಳಿದರು.ನಗರದ ಸತ್ಯಂ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ಕೇಕ್ ಕಟ್ ಮಾಡಿ ಕಾರ್ಯಕ್ರಮದಲ್ಲಿ ಶಿಕ್ಷಕರು ಸತತ್ ಅಭ್ಯಾಸ ಮಾಡಿ ಭೋಧನೆ ಮಾಡಿ ಎಂದು ಶಿಕ್ಷಕರಿಗೆ ಕಿವಿ ಮಾತು ಸಾಹಿತಿ ಬಿ ಎಚ್ ನಿರಗುಡಿ ಹೇಳಿದರು.ಸಂಸ್ಥೆಯ ಉಪನ್ಯಾಸಕರಾದ ಮಹೇಶ್ ಗಡಗಿ, ಸಂತೋಷ್ ಪಿಳ್ಳೆ, ರೂಪಾ ಕುಲಕರ್ಣಿ ,ಡಾ. ಸುಲೋಚನಾ ಅಂಕಲಗಿ, ಸುಚೇತಾ ಸುತಾರ್, ಗೀತಾ ಮೂಲಗೆ, ನಿರ್ಮಲಾ ಜಾವಳಿ ,ಮಂಜುನಾಥ ಕಲಾಲ್ ಅನೇಕ ಉಪನ್ಯಾಸಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಬೀರಪ್ಪ, ಶಾಂತಕುಮಾರ್, ಸೃಷ್ಟಿ, ಕುಸ ಮಾವತಿ, ಹನ್ಸಿಕಾ ,ಮಹೇಶ್, ಮೇಘನಾ ಅನೇಕ ವಿದ್ಯಾರ್ಥಿಗಳು ಶಿಕ್ಷಕ ದಿನಾಚರಣೆ ಕಾರ್ಯಕ್ರಮ ಕುರಿತು ತುಂಬಾ ಉತ್ತಮವಾಗಿ ಮಾತನಾಡಿದರು. ಕಾರ್ಯಕ್ರಮದ ನಿರೂಪಣೆ ಗಾಯತ್ರಿ ಮಾಡಿದರು ಪ್ರಾರ್ಥನೆ ಗಂಗೂಬಾಯಿ, ಸ್ವಾಗತ ಗಿರಿಜಾ , ತ್ರಿಷಾ ವಂದನೆ ಮಾಡಿದರು.