ಫೆ.16 ರಂದು ಸಗರ ಕರಿಬಸವೇಶ್ವರ ಜಾತ್ರಾ ಮಹೋತ್ಸವ
ಫೆ.16 ರಂದು ಸಗರ ಕರಿಬಸವೇಶ್ವರ ಜಾತ್ರಾ ಮಹೋತ್ಸವ.
ಶಹಪುರ : ತಾಲೂಕಿನ ಸಗರ ಗ್ರಾಮದ ಒಕ್ಕಲಿಗರ ಹಿರೇಮಠದ ಶ್ರೀ ಕರಿಬಸವೇಶ್ವರ ಜಾತ್ರಾ ಮಹೋತ್ಸವ ಇದೇ ತಿಂಗಳು ಫೆಬ್ರವರಿ 16 ರಂದು ಜರಗುವದು ಎಂದು ಮಠದ ಶ್ರೀಗಳಾದ ಶ್ರೀ ಮರುಳ ಮಹಾಂತ ಶಿವಾಚಾರ್ಯರು ಸ್ವಾಮಿಗಳು ಪ್ರಕಟಣೆಗೆ ತಿಳಿಸಿದ್ದಾರೆ.
ಫೆಬ್ರವರಿ 5 ರಿಂದ 15 ನೇ ತಾರೀಖಿನವರೆಗೆ ಪ್ರತಿದಿನ ಸಾಯಂಕಾಲ 7:00 ಘಂ. ಸಂತ ಶ್ರೀ ಶಿಶುನಾಳ ಶರೀಫರ ಪುರಾಣ ಪ್ರವಚನ ಹಮ್ಮಿಕೊಳ್ಳಲಾಗಿದ್ದು, ಫೆಬ್ರವರಿ 13 ರಂದು ಸಾಯಂಕಾಲ ಮಠದ ಶ್ರೀಗಳಾದ ಶ್ರೀ ಮರುಳ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳ ತುಲಾಭಾರ ಸೇವೆ ಜರುಗುವುದು,
ಫೆಬ್ರವರಿ 15 ರಂದು ರವಿವಾರ ರಾತ್ರಿ 8 ಗಂಟೆಗೆ ಪುರಾಣ ಮಹಾಮಂಗಲ ಹಾಗೂ ಧರ್ಮಸಭೆ,ರಾತ್ರಿ,ನಾದ ರಾತ್ರಿ, ಶಿವರಾತ್ರಿ ಭಜನೆ ಹಾಗೂ ಸಾಂಸ್ಕೃತಿಕ ಮತ್ತು ಸಂಗೀತ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗುವವು.
ಫೆಬ್ರುವರಿ 16 ರಂದು ಸಾಯಂಕಾಲ 6 ಗಂಟೆಗೆ ಶ್ರೀ ಕರಿಬಸವೇಶ್ವರ ಭವ್ಯ ರಥೋತ್ಸವ ಜರಗುವದು, ನಂತರ ಭಾರ ಎತ್ತುವ ಸ್ಪರ್ಧೆ ಏರ್ಪಡಿಸಲಾಗಿದ್ದು,ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬೆಳ್ಳಿ ಕಡಗ ಬಹುಮಾನವಾಗಿ ನೀಡಲಾಗುವುದು ಎಂದು ಮಠದ ಪರಮಪೂಜ್ಯರು ತಿಳಿಸಿದ್ದಾರೆ.ಈ ಗ್ರಾಮದ ಸುತ್ತಮುತ್ತಲಿನ ಸದ್ಭಕ್ತರು
ಶ್ರೀ ಕರಿಬಸವೇಶ್ವರ ದರ್ಶನ ಪಡೆದು ಪುನೀತರಾಗಬೇಕೆಂದು ತಿಳಿಸಿದರು.
