ವಾಡಿ ಯಲ್ಲಿ ಮಡಿವಾಳ ಮಾಚಿದೇವ ಜಯಂತಿ ಆಚರಣೆ

ವಾಡಿ ಯಲ್ಲಿ ಮಡಿವಾಳ ಮಾಚಿದೇವ ಜಯಂತಿ ಆಚರಣೆ

ವಾಡಿ ಯಲ್ಲಿ ಮಡಿವಾಳ ಮಾಚಿದೇವ ಜಯಂತಿ ಆಚರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಶಿವಶರಣರ ಶ್ರೀ ಮಡಿವಾಳ ಮಾಚಿದೇವ ಅವರ ಜಯಂತಿ ಆಚರಿಸಲಾಯಿತು.

ಈ ವೇಳೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಅವರು ಮಡಿವಾಳ ಮಾಚಿದೇವ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಮಡಿವಾಳ ಮಾಚಿದೇವನ ಜೀವನ ಚರಿತ್ರೆ ಇಡೀ ಶರಣ ಸಮುದಾಯದಲ್ಲಿಯೇ ವೈಶಿಷ್ಠ್ಯತೆ ಪಡೆದುಕೊಂಡಿದೆ ಎಂದರು.

ಶರಣರನ್ನು, ಸಮಾಜದ ಜನರನ್ನು ತಿದ್ದುವ ಇವರ ಕಾರ್ಯ ಶ್ಲಾಘನೀಯ. ಅವರ ವಿಚಾರ ಶೀಲತೆ, ಭಕ್ತಿ, ಜ್ಞಾನ, ಅನುಭವ, ಪರಸ್ಪರ ಗೌರವ, ವೃತ್ತಿಗೌರವ, ಸಮಾನತೆ ಮುಂತಾದ ತತ್ವಗಳಿಗೆ ಅವರ ವಚನಗಳು ಮಹತ್ವ ನೀಡಿವೆ. ಅಗಸ ಮುನಿಯುವುದು ಮಲಿನಕ್ಕೆ, ವಸ್ತ್ರಕ್ಕಲ್ಲ. ಶರಣ ಮುನಿಯುವುದು ಅವಗುಣಕ್ಕೆ ಶಿವಭಕ್ತಗಲ್ಲ, ನಾನೆಂಬುದನ್ನು ಮರೆತು ಬಿಡಿ, ಆಗ ಪುಟವಿಟ್ಟ ಚಿನ್ನದಂತೆ ನಿಮ್ಮ ಭಕ್ತಿ ಇನ್ನಷ್ಟು ಥಳಥಳಿಸುತ್ತದೆ ಎಂಬ ಮಾತುಗಳಿಂದ ಇಡೀ ಶರಣರ ಬಳಗವೇ ಮಾಚಯ್ಯನ ವ್ಯಕ್ತಿತ್ವಕ್ಕೆ, ಅನುಭಾವಕ್ಕೆ ಶರಣು-ಶರಣೆಂದಿದೆ,ಆವರ ತತ್ವ ನಮಗೆಲ್ಲಾ ಪ್ರೇರಣೆ ಎಂದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಅರ್ಜುನ ಕಾಳೆಕರ,ಗಿರಿಮಲ್ಲಪ್ಪ ಕಟ್ಟಿಮನಿ,ಆನಂದ ಇಂಗಳಗಿ,

ಅಶೋಕ ಶ್ರಿಪತಿ,,ಪಂಡಿತ ಚೌಕಿ,ಸಿದ್ದುಗೌಡ ಹಲಕರ್ಟಿ,ಕುಮಾರ ಜಾಧವ,ರಾಜಶೇಖರ ಧೂಪದ್,ಮಲ್ಲೇಶಿ ಮಡಿವಾಳ ಸೇರಿದಂತೆ ಇತರರು ಇದ್ದರು.