ಮುಕ್ಕಣ್ಣ ಕರಿಗಾರರ "ಸಂವಿಧಾನದ ಮೌಲ್ಯಗಳಿಗೆ ಜೀವತುಂಬಿದ ಬಸವಭೂಷಣ ಮುಖ್ಯಮಂತ್ರಿ ಸಿದ್ಧರಾಮಯ್ಯನವರು" ಕೃತಿ ಲೋಕಾರ್ಪಣೆ.
ಮುಕ್ಕಣ್ಣ ಕರಿಗಾರರ "ಸಂವಿಧಾನದ ಮೌಲ್ಯಗಳಿಗೆ ಜೀವತುಂಬಿದ ಬಸವಭೂಷಣ ಮುಖ್ಯಮಂತ್ರಿ ಸಿದ್ಧರಾಮಯ್ಯನವರು" ಕೃತಿ ಲೋಕಾರ್ಪಣೆ.
ದೇವದುರ್ಗ : ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರು ಮತ್ತು ಕರ್ನಾಟಕ ರಾಜ್ಯ ಪ್ರಜಾಪ್ರತಿನಿಧಿಗಳ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರೂ ಆಗಿರುವ ಮುಕ್ಕಣ್ಣ ಕರಿಗಾರ ಅವರ " ಸಂವಿಧಾನದ ಮೌಲ್ಯಗಳಿಗೆ ಜೀವತುಂಬಿದ ಬಸವಭೂಷಣ ಮುಖ್ಯಮಂತ್ರಿ ಸಿದ್ಧರಾಮಯ್ಯನವರು "ಕೃತಿ ಲೋಕಾರ್ಪಣೆ ನಡೆಯಿತು.ಬಳ್ಳಾರಿ ಮುತ್ಯಾ ಎಂದೇ ಪ್ರಸಿದ್ಧರಾಗಿರುವ ಸಿರವಾರ ತಾಲೂಕಿನ ಗಾಯತ್ರಿಚೇತನ ಶಿವಯ್ಯಸ್ವಾಮಿಯವರು ಮಹಾಶೈವ ಧರ್ಮಪೀಠದ ಕ್ಷೇತ್ರೇಶ್ವರ ವಿಶ್ವೇಶ್ವರನ ಸನ್ನಿಧಿಯಲ್ಲಿ ಕೃತಿ ಲೋಕಾರ್ಪಣೆ ಮಾಡಿದರು.ಗೌರಿಹುಣ್ಣಿಮೆಯ ಈ ದಿನವು ಮುಕ್ಕಣ್ಣ ಕರಿಗಾರರ 56 ನೆಯ ಹುಟ್ಟು ಹಬ್ಬ; ಸಿದ್ಧರಾಮಯ್ಯನವರ ಕುರಿತ ಈ ಪುಸ್ತಕ ಮುಕ್ಕಣ್ಣ ಕರಿಗಾರರ 56 ನೆಯ ಪುಸ್ತಕ ಎನ್ನುವುದು ವಿಶೇಷ.
ಇದೇ ಸಂದರ್ಭದಲ್ಲಿ ಮುಕ್ಕಣ್ಣ ಕರಿಗಾರ ಅವರನ್ನು ಅಭಿನಂದಿಸಿ ಮಾತನಾಡಿದ ಕವಿ,ಪತ್ರಕರ್ತ ಬಸವರಾಜ ಶಿಣ್ಣೂರು ಅವರು ಮುಕ್ಕಣ್ಣ ಕರಿಗಾರರ ಅವರ ಜೀವನ ಸಾಧನೆ ನಾಡಿನ ಜನತೆಗೆ ಪರಿಚಯಿಸುವ ಉದ್ದೇಶದಿಂದ ಅವರ ಆತ್ಮೀಯರೂ ಶಿಷ್ಯರೂ ಆಗಿರುವ ನಾವೆಲ್ಲರೂ ಮುಕ್ಕಣ್ಣ ಕರಿಗಾರರ 57 ನೆಯ ಹುಟ್ಟುಹಬ್ಬದಂದು ಅಭಿನಂದನಾ ಗ್ರಂಥ ಹೊರತರೋಣ.ಅದಕ್ಕಾಗಿ ಇಂದಿನಿಂದ ಕಾರ್ಯಪ್ರವೃತ್ತರಾಗೋಣ" ಎಂದು ಹೇಳಿದರು.
ಗಬ್ಬೂರು ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ತಿರುಮಲರೆಡ್ಡಿ, ಹೇಮನಾಳ ಗ್ರಾಮ ಪಂಚಾಯತಿಯ ಪಿಡಿಒ ಲಕ್ಷ್ಮೀರೆಡ್ಡಿ ಮತ್ತು ಎರಡು ಗ್ರಾಮ ಪಂಚಾಯತಿಗಳ ಸಿಬ್ಬಂದಿಯವರು ಮುಕ್ಕಣ್ಣ ಕರಿಗಾರರ ಹುಟ್ಟುಹಬ್ಬ ಹಾಗೂ ಕೃತಿಬಿಡುಗಡೆಯ ಅಂಗವಾಗಿ ಸನ್ಮಾನಿಸಿ ಕೇಕ್ ಕತ್ತರಿಸಿ,ಸಂಭ್ರಮಿಸಿದರು.
ಕೃತಿ ಲೋಕಾರ್ಪಣೆಯ ಸಂದರ್ಭದಲ್ಲಿ ಮಹಾಶೈವ ಧರ್ಮಪೀಠದ ತ್ರಯಂಬಕೇಶ, ಅರ್ಚಕ ದೇವರಾಜ ಕರಿಗಾರ, ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ಶರಣಗೌಡ ಮಾಲಿ ಪಾಟೀಲ್ ಹೊನ್ನಟಗಿ,ಸಾಹಿತಿ ಪತ್ರಕರ್ತರುಗಳಾದ ಬಸವರಾಜ ಶಿಣ್ಣೂರ,ಬಸವರಾಜ ಬ್ಯಾಗವಾಟ್,
ರಮೇಶ ಖಾನಾಪುರ ಏಳುಬಾವೆಪ್ಪಗೌಡ,ಶರಣಪ್ಪ ಬೂದಿನಾಳ,ಬಾಬುಗೌಡ ಯಾದವ್ ಸುಲ್ತಾನಪುರ,ಮೃತ್ಯುಂಜಯ ಯಾದವ್,ರಂಗನಾಥ ಮಸೀದಪುರ,ಶಿಕ್ಷಕ ಬಸವಲಿಂಗ ಕರಿಗಾರ,ಶಿವಾನಂದ, ವೆಂಕಟೇಶ,ಶ್ರೀಶೈಲ ಕರಿಗಾರ,
ವಿರುಪಾಕ್ಷಿ ಗುತ್ತೆದಾರ,ರಾಮಕೃಷ್ಣ ಯಾದವ,ಬೂದಿಬಸವ ಕರಿಗಾರ,ಮಾಣಿಕರೆಡ್ಡಿ ಬಸವಕಲ್ಯಾಣ,ಶಿವಕುಮಾರ ವಸ್ತಾರ,ಯುವಕವಿ ಮೋಹನಕುಮಾರ ಸಿಂಗ್ರಿ ಸೇರಿದಂತೆ ಮಹಾಶೈವ ಧರ್ಮಪೀಠದ ಭಕ್ತರುಗಳು ಉಪಸ್ಥಿತರಿದ್ದರು
