ವಸ್ತುಗಳ ಮರುಬಳಕೆಯಿಂದ ಪರಿಸರ ರಕ್ಷಣೆ ಸಾಧ್ಯ : ಕೆ. ಐ. ಬಡಿಗೇರ್.

ವಸ್ತುಗಳ ಮರುಬಳಕೆಯಿಂದ ಪರಿಸರ ರಕ್ಷಣೆ ಸಾಧ್ಯ : ಕೆ. ಐ. ಬಡಿಗೇರ್.

ವಸ್ತುಗಳ ಮರುಬಳಕೆಯಿಂದ ಪರಿಸರ ರಕ್ಷಣೆ ಸಾಧ್ಯ : ಕೆ. ಐ. ಬಡಿಗೇರ್.

ಭೂಮಿಯ ಮೇಲೆ ನಾವು ಬಿಸಾಡುವ ತ್ಯಾಜ್ಯದ ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದ ಪರಿಸರದ ಮೇಲೆ ದುಷ್ಟರಿಣಾಮ ಬೀರುತ್ತಿದೆ. ನಾವು ಬಿಸಾಡುವ ವಸ್ತುಗಳನ್ನು ಪುನರ್ಬಳಕೆ ಮಾಡಿದರೆ ಪರಿಸರ ರಕ್ಷಣೆ ಸಾಧ್ಯವೆಂದು ಶ್ರೀ ಸಚ್ಚಿದಾನಂದ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಕೆ. ಐ. ಬಡಿಗೇರ್ ಹೇಳಿದರು.

ಅವರು ರಾವೂರ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ ಪ್ರಾಥಮಿಕ ಮತ್ತು ಪ್ರೌಢ ವಿಭಾಗದ ಮಕ್ಕಳಿಂದ ಇಕೋ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಕಸದಿಂದ ರಸ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. 

ಪರಿಸರ ಸಂರಕ್ಷಣೆ ನಮ್ಮೇಲ್ಲರ ಆದ್ಯತೆಯಾಗಬೇಕು. ಪರಿಸರ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ. ಪರಿಸರವನ್ನು ಉಳಿಸಲು ಮತ್ತು ತ್ಯಾಜ್ಯ ಕಡಿಮೆ ಮಾಡಲು ವಸ್ತುಗಳ ಪುನರ್ಬಳಕೆ, ಕಡಿಮೆ ಬಳಸುವುದು, ಪುನಃ ಭರ್ತಿ ಮಾಡುವುದು ಹೀಗೆ ಹಲವು ಕ್ರಮಗಳನ್ನು ಅನುಸರಿಸಿ ಪರಿಸರ ಸಂರಕ್ಷಣೆ ಮಾಡಬಹುದಾಗಿದೆ. ಮಕ್ಕಳಲ್ಲಿ ವಿಭಿನ್ನ ಆಲೋಚನೆ ಮುಡಲು, ಕ್ರಿಯಾಶೀಲತೆ ಮತ್ತು ಸೃಜನಶೀಲತೆ ಬೆಳೆಸಲು ಕಸದಿಂದ ರಸ ದಂತಹ ಚಟುವಟಿಕೆಗಳು ಅನುಕೂಲವಾಗುತ್ತವೆ ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಸಿದ್ದಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. 

ಪ್ರಾಥಮಿಕ ವಿಭಾಗದಿಂದ: ಅಂಜಲಿ, ಪದ್ಮಾವತಿ, ಪ್ರಶಾಂತ, ಭಾಗ್ಯಶ್ರೀ, ವಿಶಾಲ್ ಬಹುಮಾನವನ್ನು ಪಡೆದರು.

ಪ್ರೌಢ ವಿಭಾಗದಿಂದ ನೀತಿನ್, ಶರಣ್ ಮತ್ತು ಸಂತೋಷ ಬಹುಮಾನವನ್ನು ಪಡೆದರು.

100ಕ್ಕೂ ಹೆಚ್ಚು ಮಕ್ಕಳು ಒಬ್ಬರಿಗಿಂತ ಒಬ್ಬರು ಉತ್ಸಾಹದಿಂದ, ಉತ್ತಮ ರೀತಿಯಲ್ಲಿ ವಸ್ತುಗಳನ್ನು ತಯ್ಯಾರಿಸಿದರು. ಬಿಸಾಡುವ ವಸ್ತುಗಳು ಬಳಕೆಯ ವಸ್ತುಗಳಾಗಿದ್ದನ್ನು ಅತಿಥಿಗಳು ಮತ್ತು ಶಿಕ್ಷಕರು ಮೆಚ್ಚಿ ಅಭಿನಂದಿಸಿದರು.

ಶಿಕ್ಷಕ ಸಿದ್ದಲಿಂಗ ಬಾಳಿ ಮಾತನಾಡಿದರು. ಇಕೋ ಕ್ಲಬ್ ಸಂಯೋಜಕಿ ಸುಗುಣಾ ಕೊಳಕೂರ, ವಿಜಯಲಕ್ಷ್ಮಿ ಬಮ್ಮನಳ್ಳಿ, ಗೀತಾ ಜಮಾದಾರ,ರವಿ ಕಾಣೆಕರ್, ಅನುಸೂಯ ಹೂಗಾರ, ಈರಣ್ಣ ಹಳ್ಳಿ, ಬಸವರಾಜ ರಾಠೋಡ, ಬಾಬು ಕಣ್ಣೂರ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.