ಸಾಲುಮರದ ತಿಮ್ಮಕ್ಕನ ವೃಕ್ಷ್ಯೋದ್ಯಾನಕ್ಕೆ ಶಾಸಕ ಡಾ. ಅವಿನಾಶ ಜಾಧವ ಭೇಟಿ, ವಿಕ್ಷಣೆ

ಸಾಲುಮರದ ತಿಮ್ಮಕ್ಕನ ವೃಕ್ಷ್ಯೋದ್ಯಾನಕ್ಕೆ ಶಾಸಕ ಡಾ. ಅವಿನಾಶ ಜಾಧವ ಭೇಟಿ, ವಿಕ್ಷಣೆ

ಸಾಲುಮರದ ತಿಮ್ಮಕ್ಕನ ವೃಕ್ಷ್ಯೋದ್ಯಾನಕ್ಕೆ ಶಾಸಕ ಡಾ. ಅವಿನಾಶ ಜಾಧವ ಭೇಟಿ, ವಿಕ್ಷಣೆ

ಮಂಗಳೂರು, ಉಡುಪಿ ಮಾದರಿಯಲ್ಲಿ ವೃಕ್ಷ್ಯೋದ್ಯಾನದ ಅಭಿವೃದ್ದಿಗೆ ಸರಕಾರಕ್ಕೆ 4 ಕೋಟಿ ಅನುದಾನ ಒದಗಿಸಲು ಶಾಸಕರ ಬೇಡಿಕೆ.

ಶಾಸಕ ಡಾ. ಜಾಧವರ ಸಮ್ಮುಖದಲ್ಲಿ ಗುಣಮಟ್ಟದ ಅಭಿವೃದ್ಧಿ ಕಾಮಗಾರಿ ವಿಷಯದಲ್ಲಿ ಅರಣ್ಯ ಸಚಿವರ ಅಧಿಕಾರಿ ಸಂಜೀವಕುಮಾರ ಚವ್ಹಾಣ ಪತ್ರಕರ್ತರಿಗೆ ಆವಾಜ್ ಹಾಕಿದ್ದ. 

ಚಿಂಚೋಳಿ : ಇಲ್ಲಿನ ಪೋಲಕಪ್ಪಳ್ಳಿ ಗ್ರಾ.ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಚಿಂಚೋಳಿ-ಮಹೆಬೂಬ್ ನಗರ ರಾಷ್ಟ್ರೀಯ ಹೆದ್ದಾರಿ ಪಕ್ಕದ ಕಾಯ್ದಿಟ್ಟ ಅರಣ್ಯ ಭೂಮಿಯಲ್ಲಿ 2.34 ಕೋಟಿ ವೆಚ್ಚದಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ವನದ ಸುಂದರ ನೋಟದ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಡಾ. ಅವಿನಾಶ ಜಾಧವ ವಿಕ್ಷಣೆ ಮಾಡಿದರು. 

ಚಿಂಚೋಳಿ ಅರಣ್ಯ ಇಲಾಖೆಯಿಂದ ನಡೆಯುತ್ತಿರುವ ಸಾಲುಮರದ ತಿಮ್ಮಕ್ಕನ ವೃಕ್ಷ್ಯೋದ್ಯನದ ಪ್ರವಾಸಿಗರನ್ನು ಕೈಬಿಸಿ ಕೆರೆಯುವಂತೆ ಸುಂದರ ನೋಟ ರೂಪಗೊಂಡಿದೆ. 20 ಎಕರೆಯಲ್ಲಿ ವನ ನಿರ್ಮಾಣ ಮಾಡಲಾಗಿದೆ. ವಿವಿಧ ಬಗ್ಗೆಯ ಗೋಪುರಗಳು, ಕಲ್ಲಿನಲ್ಲಿ ತಿಮ್ಮಕ್ಕನ ಕಲಾಕೃತಿ ಚಿತ್ರ, ಜಿಂಕೆ, ಚಿರತೆ ಸೇರಿದಂತೆ ಕಾಡು ಪ್ರಾಣಿಗಳ ಶಿಲ್ಪ ಕೆತ್ತೆನೆಯ ಗೋಪುರಗಳು ನಿರ್ಮಾಣ ಮಾಡಲಾಗಿದೆ. ವಿಮಾವಾಕಿ ಅರಳಿ, ಬೇವು, ಕಳ್ಳಿಬಳ್ಳಿ,ಶಿಸು, ಹೊಂಗೆ ಸೇರಿ ವಿವಿಧ ಜಾತಿಗಳ ಔಷಧಿ ಸಸಿಗಳು, ಲೋಟಾಸ್ ಹೂವುಗಳನ್ನು ಹಚ್ಚಲಾಗಿದೆ ಅರಣ್ಯ ಅಧಿಕಾರಿಗಳು ತಿಳಿಸಿದರು. 

ಹೆಚ್ಚಿನ ಅನುದಾನ ಬಿಡುಗಡೆಗೆ ಶಾಸಕ ಡಾ. ಅವಿನಾಶ ಜಾಧವ ಬೇಡಿಕೆ : 

ಚಿಂಚೋಳಿ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನಕ್ಕೆ ಮಂಗಳೂರು, ಉಡುಪಿ ಮಾದರಿಯಲ್ಲಿ ಪ್ರವಾಸಿಗರನ್ನು ಆಕರ್ಷಿಸಿ ಮನಸ್ಸು ಸೆಳೆಯುವಂತಹ ಅಭಿವೃದ್ಧಿ ಕೈಗೊಳ್ಳಲು ಸರಕಾರ ಇನ್ನೂ ಅಂದಾಜು 4 ಕೋಟಿ ಅನುದಾನದ ಅವಶ್ಯಕವಾಗಿದ್ದು ಇದನ್ನು ಒದಗಿಸಲು ಸರಕಾರ ಮತ್ತು ಅರಣ್ಯ ಸಚಿವರು ಮನಸ್ಸು ಮಾಡಬೇಕಾಗಿದೆ ಎಂದು ಶಾಸಕ ಡಾ. ಅವಿನಾಶ ಜಾಧವ ಬೇಡಿಕೆ ಇಟ್ಟಿದ್ದಾರೆ.  

ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಅರಣ್ಯ ಅಧಿಕಾರಿಗಳಿಂದ ಪ್ರತಿಕರ್ತರಿಗೆ ಆವಾಜ್ : 

ಚಿಂಚೋಳಿ ಪತ್ರಕರ್ತರು ಗೊಟ್ಟಂಗೊಟ್ಟ ಸುಂದರ ಅರಣ್ಯ ಪ್ರದೇಶದ ಪರಿಸರವನ್ನು ವಿಕ್ಷಿಸಲು ಬಂದ ಪ್ರವಾಸಿಗರಿಗೆ ತಂಗುದಾಣ ಟೆಂಟ್ ಮತ್ತು ಶೌಚಾಲಯ ನಿರ್ಮಾಣ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಿಂದ ನಡೆಸಲಾಗಿದೆಂಬುದರ ಬಗ್ಗೆ ಶಾಸಕ ಜಾಧವ ಅವರ ಮತ್ತು ಸರಕಾರದ ಗಮನ ಸೆಳೆಯುವ ಸಂದರ್ಭದಲ್ಲಿ ಕುಂಚಾವರಂ ವಲಯ ವನ್ಯಜೀವಿ ಧಾಮದ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ ಮಧ್ಯಪ್ರವೇಶಿಸಿ ಪತ್ರಕರ್ತರಿಗೆ ಆವಾಜ್ ಹಾಕಿದ್ದು ಘಟನೆ ನಡೆಯಿತು. ಈ ಸಮಯದಲ್ಲಿ ಬಿಜೆಪಿ ಹಿರಿಯ ಮುಖಂಡ ಗೋಪಾಲರಾವ ಕಟ್ಟಿಮನಿ ಅವರು ಶಾಸಕರಿಗೆ ಕೇಳಿರುವ ಪ್ರಶ್ನೆಗೆ ಎತ್ತರ ಧ್ವನಿಯಲ್ಲಿ ನೀವು ಯಾಕೇ ಉತ್ತರಿಸಲು ಬರುತ್ತೀರಾ? ಆ ಅಕ್ರಮ ಕಾಮಗಾರಿಯಲ್ಲಿ ನೀವು ಕೂಡ ಪಾಲದಾರರೇ? ಎಂದು ತಾರಾಟೆಗೆ ತೆಗೆದುಕೊಂಡು ಪ್ರಶ್ನಿಸಿದರು. ಈ ಘಟನೆಗೆ ಶಾಸಕ ಡಾ. ಅವಿನಾಶ ಜಾಧವ ಅವರು ಸಾಕ್ಷಿಯಾಗಿದ್ದು, ಸಂಸದ ಸಾಗರ ಖಂಡ್ರೆ ಅವರು ಮತ್ತು ಅರಣ್ಯ ಸಚಿವರು ಇಂತಹ ಅಧಿಕಾರಿಗಳಿಗೆ ಮಣೆ ಹಾಕದೇ ಚಿಂಚೋಳಿ ಪರಿಸ್ಥಿಯ ಕಡೆಗೆ ಗಮನ ಹರಿಸಬೇಕಾಗಿದೆ. 

ಈ ಸಂದರ್ಭದಲ್ಲಿ ಚಿಂಚೋಳಿ ವಲಯ ಅರಣ್ಯಾಧಿಕಾರಿ ಜಗನ್ನಾಥ ಕೊರಳ್ಳಿ, ವಕೀಲ ಶ್ರೀಮಂತ ಕಟ್ಟಿಮನಿ, ಅಶೋಕ ಚವ್ಹಾಣ, ಜಗದೀಶಸಿಂಗ್ ಠಾಕೂರ್, ರಾಜು ಪವಾರ, ಕೆ.ಎಂ.ಬಾರಿ, ಗಿರಿರಾಜ ನಾಟೀಕಾರ, ಲೋಕೇಶ ಶೆಳಗ್ಗಿ, ಮಲ್ಲಿಕಾರ್ಜುನ ಸ್ವಾಮಿ ಯಲ್ಮಡಗಿ ಅವರು ಉಪಸ್ಥಿತರಿದರು.