ಸಾಮಾಜಿಕ ಸಾಮರಸ್ಯಕ್ಕಾಗಿ ಸಂಸ್ಕಾರ ಹಿತ ಶಿಕ್ಷಣ ವಿಹಿಂಪ ಗುರಿ: ಗೋಪಾಲ್ ಜೀ
ಸಾಮಾಜಿಕ ಸಾಮರಸ್ಯಕ್ಕಾಗಿ ಸಂಸ್ಕಾರ ಹಿತ ಶಿಕ್ಷಣ ವಿಹಿಂಪ ಗುರಿ: ಗೋಪಾಲ್ ಜೀ
ಕಲಬುರಗಿ: ವಿಶ್ವ ಹಿಂದೂ ಪರಿಷತ್ ಸಾಮಾಜಿಕ ಸಾಮರಸ್ಯ ಬೆಳೆಸಲು ಸಂಸ್ಕಾರವಿತ ಶಿಕ್ಷಣವನ್ನು ಜನಸಾಮಾನ್ಯರಿಗೂ ನೀಡಿ ಕಳೆದ 60 ವರ್ಷಗಳಿಂದ ಅಸಾಮಾನ್ಯ ಸೇವಾ ಕಾರ್ಯ ಮಾಡುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಕಾರ್ಯದರ್ಶಿ (ಕೇಂದ್ರ ಅಯೋಧ್ಯ) ಗೋಪಾಲ್ ಜಿ ಹೇಳಿದರು.
ಕಲಬುರಗಿ ನಗರದಲ್ಲಿ ಅಕ್ಟೋಬರ್ 21ರಂದು ವಿಶ್ವ ಹಿಂದು ಪರಿಷತ್ತು ಉತ್ತರ ಕರ್ನಾಟಕ ಟ್ರಸ್ಟ್ ಹಾಗೂ ನಾರಾಯಣಪ್ಪ ಮಾದಮ ಶೆಟ್ಟಿ ಸ್ಮಾರಕ ಸಂದೀಪನಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಕಲ್ಬುರ್ಗಿಯ ಮೈಲಾರಲಿಂಗೇಶ್ವರ ದೇವಸ್ಥಾನದ ಸಮೀಪ ನೂತನ ಕಟ್ಟಡದ ಭೂಮಿ ಪೂಜೆಯ ನಂತರ ನಡೆದ ಸಮಾರಂಭದಲ್ಲಿ ಮಾತನಾಡುತ್ತ ಸಾಮಾಜಿಕ ಸಾಮರಸ್ಯ ಮತಾಂತರ ತಡೆ ಗೋ ಸೇವೆಯ ಮೂಲಕ ಜನಸೇವೆ ಮಾಡುವ ವಿಶ್ವ ಹಿಂದೂ ಪರಿಷತ್ ಸಂಸ್ಕಾರಹಿತ ಶಿಕ್ಷಣವನ್ನು ನೀಡುವುದರ ಮೂಲಕ ಜನಸಾಮಾನ್ಯರ ಮಕ್ಕಳು ಆದರ್ಶ ಮಕ್ಕಳಾಗಿ ಬೆಳೆಯಲು ಪ್ರಯತ್ನಿಸುತ್ತಿದೆ ಕನ್ನಡ ಮಾಧ್ಯಮ ಶಾಲೆಯ ಮೂಲಕ ಕೊಳಚೆ ಪ್ರದೇಶ ಅಲೆಮಾರಿ ಜನಾಂಗ ಹೀಗೆ ವಿವಿಧ ಹಿಂದುಳಿದ ವರ್ಗದ ಮಕ್ಕಳಿಗೆ ಭಾರತೀಯ ಶಿಕ್ಷಣ ವ್ಯವಸ್ಥೆ ಕಲ್ಪಿಸಿ ಉತ್ತಮ ಪ್ರಜೆಗಳನ್ನಾಗಿಸುವ ಕೆಲಸ ನಿರ್ವಹಿಸುತ್ತಿದೆ. ಶಾಲೆಗಳೆಂದರೆ ಸುಸಜ್ಜಿತ ಕಟ್ಟಡವಿದ್ದರೆ ಉತ್ತಮ ಶಿಕ್ಷಣ ಸಿಗುವುದಿಲ್ಲ. ಸಂಸ್ಕಾರವಿತ ಮೌಲ್ಯ ಹಿತ ಶಿಕ್ಷಣವೇ ಮುಖ್ಯ ಗುರಿಯಾಗಬೇಕು ಜಾತಿ ತೊಲಗಿ ಸಮಸ್ತರು ಒಗ್ಗೂಡಿ ಬಲಿಷ್ಠ ಹಿಂದೂ ಸಮಾಜ ನಿರ್ಮಾಣದ ಸಂಕಲ್ಪ ಹೆಜ್ಜೆ ಹಾಕಬೇಕಾಗಿದೆ ಎಂದರು.
ಅಡಿಗಲ್ಲು ನೆರವೇರಿಸಿದ ಸೇಡಂ ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿಯವರು ಮಾತನಾಡಿ ಇಂಗ್ಲಿಷ್ ಶಾಲೆಗಳು ತಲೆ ಎತ್ತುತ್ತಿರುವ ಭರಾಟೆಯ ನಡುವೆ ಕನ್ನಡದಲ್ಲಿ ಶಿಕ್ಷಣ ನೀಡುವ ಮೂಲಕ ಸಾಂದೀಪನಿ ಶಾಲೆಯು ಉತ್ತಮ ಪ್ರಯತ್ನ ಮಾಡುತ್ತಿರುವುದು ಶ್ಲಾಘನಯ ಎಂದರು. ಶ್ರೀನಿವಾಸ ಸರಡಗಿಯ ಡಾಕ್ಟರ್ ಅಪ್ಪ ರಾವ್ ದೇವಿ ಮುತ್ಯಾ ಮಾತನಾಡಿ ಆರ್ಥಿಕವಾಗಿ ಹಿಂದುಳಿದವರಿಗೆ ವಿಶ್ವ ಹಿಂದೂ ಪರಿಷತ್ ಸಂಸ್ಕಾರವಿತ ಶಿಕ್ಷಣ ನೀಡಿ ಉತ್ತಮ ಪ್ರಜೆಗಳನ್ನಾಗಿಸುತ್ತಿರುವುದು ಪ್ರಶಂಸನೀಯ ಎಂದರು. ಬ್ರಹ್ಮಪುರ ಚೌದಾಪುರಿ ಮಠದ ರಾಜಶೇಖರ್ ಶಿವಾಚಾರ್ಯರು ಮಾತನಾಡಿ ಸಮಾಜದ ಸರ್ವಾಂಗೀಣ ಪ್ರಗತಿಗೆ ವಿಶ್ವ ಹಿಂದೂ ಪರಿಷತ್ ಸೇವಾ ಕಾರ್ಯ ಅನುಕರಣೆಯ ಎಂದರು.
ಶಾಲಾ ನೂತನ ಕಟ್ಟಡಕ್ಕೆ ನೆರವಾದ ದಾನಿಗಳ ಬಗ್ಗೆ ಉತ್ತರ ಪ್ರಾಂತ ಕಾರ್ಯದರ್ಶಿ ಶಿವಕುಮಾರ್, ಬೋಳಶೆಟ್ಟಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸೇವಾಲಾಲ ಆಶ್ರಮ ಗೊಬ್ಬರವಾಡಿಯ ಶ್ರೀ ಬಳಿರಾಮ ಮಹಾರಾಜರು, ವಿಶ್ವ ಹಿಂದೂ ಪರಿಷತ್ತಿನ ಉತ್ತರ ಕರ್ನಾಟಕ ಪ್ರಾಂತ್ಯ ಅಧ್ಯಕ್ಷರಾದ ಡಾ. ಲಿಂಗರಾಜಪ್ಪ ಅಪ್ಪ, ಆರ್ ಎಸ್ ಎಸ್ ನ ಕರ್ನಾಟಕ ಉತ್ತರ ಪ್ರಾಂತ್ಯ ಕಾರ್ಯಕಾರಿಣಿ ಸದಸ್ಯ ಖಗೇಶನ್ ಪಟ್ಟಣಶೆಟ್ಟಿ, ಸಾಂದೀಪನಿ ಶಾಲೆಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಎಂ ಕಡೇಚೂರ್, ವಿಹಿಂಪ ಜಿಲ್ಲಾ ಉಪಾಧ್ಯಕ್ಷರಾದ ಪ್ರಶಾಂತ ಗುಡ್ಡ ಸಾಂದೀಪನಿ ಶಾಸನ ಸಮಿತಿ ಉಪಾಧ್ಯಕ್ಷರಾದ ಲಕ್ಷ್ಮಣ್ ರಾವ್ ಪೊಲೀಸ್ ಪಾಟೀಲ್ ಪ್ರಾಸ್ತಾವಿಕ ಭಾಷಣ ಮಾಡಿದರು. ಕವಿತಾ ಕುಲಕರ್ಣಿ ವೈಯಕ್ತಿಕ ಗೀತೆಯನ್ನು ಹಾಡಿದರು ಹೃಷಿಕೇಶ ಚೌಡಾಪುರ್ ಕರ್ ತನ ಗೀತೆಯನ್ನು ಹಾಡಿದರು ಸಂದೀಪ್ ನಿಶಾಲ ಸಹಕಾರಿದರ್ಶಿ ಶೇಷಾದ್ರಿ ಕುಲಕರ್ಣಿ ನಿರೂಪಿಸಿದರು ಶ್ರೀಮಂತ ನವಲ್ದಿ ಧನ್ಯವಾದವಿತ್ತರು.