ಕೊರೋನಾ ಸಮಯದಲ್ಲಿ ಬಡವರಿಗೆ ನೆರವಾದ ಡಾ ಅವಿನಾಶ ದೇವನೂರ

ಕೊರೋನಾ ಸಮಯದಲ್ಲಿ ಬಡವರಿಗೆ ನೆರವಾದ ಡಾ ಅವಿನಾಶ ದೇವನೂರ
ಕೋವಿಡ್-19 ಕೋರೋನಾ ಮಹಾಮಾರಿ ರೋಗ ದೇಶದೆಲ್ಲೆಡೆ ಹರಡಿತ್ತು ಲಾಕಡೌನ್ ಮಾಡಲಾಯಿತು. ಎಲ್ಲರನ್ನು ಕಂಗೆಡಿಸಿತ್ತು ಆರ್ಥಿಕತೆ ಎಂಬ ಹಸಿವು ಬೆನ್ನಲ್ಲೇ ಕಾಡುತ್ತಿತ್ತು. ಯಾರು ಕೂಡ ಯಾರಿಗೂ ಮುಟ್ಟದಂತೆ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೋವಿಡ್ ಅಲೆ ನಮ್ಮ ಮನೆ ಮನೆಯಲ್ಲಿ ಅಪ್ಪಳಿಸಿತು. ಕೊಡಲಹಂಗರ್ಗಾ ಗ್ರಾಮದಲ್ಲಿ ಒಂದು ವಾರದಲ್ಲಿ ಕೊರೋನಾದಿಂದ 8ಜನ ಪ್ರಾಣ ಕಳೆದುಕೊಂಡರು ಎದೆಗುಂದದೆ ಒಂದು ದಿನವು ಬಿಡುವಿಲ್ಲದೆ ಚಿಕಿತ್ಸೆ ನೀಡಿದರು. ನಂತರ ಬಹಳಷ್ಟು ಬದಲಾವಣೆ ಆದವು ಇಂತಹ ಭಯಾನಕ ಪರಿಸ್ಥಿತಿಯಲ್ಲಿ ಡಾ. ಅವಿನಾಶ್ ದೇವನೂರು ಅವರು ಸಾವು ಮತ್ತು ಬದುಕಿನ ಮಧ್ಯದಲ್ಲಿ ಹೋರಾಡಿ ಮನೆಮನೆಗೆ ತೆರಳಿ ಜನರಿಗೆ ಚಿಕಿತ್ಸೆ ನೀಡಿ ಹೊಸ ಜೀವ ನಿಡಿದ್ದಾರೆ. ಅವರಿಂದ ಎಷ್ಟೊ ಜೀವಗಳು ಇಂದು ನಗುನಗುತ್ತಾ ಜೀವನ ಸಾಗಿಸುತ್ತಿದ್ದಾರೆ ಕೊರೋನಾ ರೋಗ ಹರಡುವಿಕೆಯಿಂದ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರಬಹುದು.
ನಿಮ್ಮೆಲ್ಲರ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಇರಲಿ ಎಂದು ಎಲ್ಲರಿಗೂ ಜಾಗೃತಿಮೂಡಿಸಿದ್ದಾರೆ
ಇಂದಿಗೂ ಸಹ ಸಾಮಾನ್ಯವಾಗಿ ಮೊದಲಿನಂತೆ ಬಡವರಿಗೆ ಅನಕ್ಷರಸ್ಥರಿಗೆ ತಿಳಿಹೇಳಿ ಅಪಾಯದ ಸಂದರ್ಭದಲ್ಲಿ ಅವರು ನೆರವಾಗಿದ್ದಾರೆ. ಮುಂದೆಯೂ ಕೂಡ ಇದೇ ರೀತಿ ಸೇವೆ ನೀಡಲೆಂದು ಹಾರೈಸುವೆ.
✍️ ಮಹೇಶ ವ್ಹಿ ಕಾಂಬಳೆ ಶಿಕ್ಷಕರು