ಯುನೈಟೆಡ್ ಆಸ್ಪತ್ರೆ , ಅಲ್ ಖಮರ ಎಜುಕೇಷನ್ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಯಶಸ್ವಿ

ಯುನೈಟೆಡ್ ಆಸ್ಪತ್ರೆ , ಅಲ್ ಖಮರ ಎಜುಕೇಷನ್  ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಯಶಸ್ವಿ

ಯುನೈಟೆಡ್ ಆಸ್ಪತ್ರೆ , ಅಲ್ ಖಮರ ಎಜುಕೇಷನ್ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಯಶಸ್ವಿ

ಕಲಬುರಗಿ: ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ಅಲ್ಪ ಸಂಖ್ಯಾತರ ನೌಕರರ ಸಂಘದ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಯುನೈಟೆಡ್ ಆಸ್ಪತ್ರೆ ಹಾಗೂ ಅಲ್ ಖಮರ ಎಜುಕೇಷನ್ ಹಾಗೂ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ತಾಜನಗರ ಮುಸ್ಲಿಂ ಸಂಘದಲ್ಲಿರುವ ಸರಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೋಳ್ಳಲಾಯಿತು. ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ ಇದೇ ತರಹದ ಹೆಲ್ತ್ ಕ್ಯಾಂಪಗಳು ಇನ್ನು ಹೆಚ್ಚು ಹೆಚ್ಚಿನ ಸಂಖ್ಯೆಗಳಲ್ಲಿ ನಗರದ ಎಲ್ಲಾ ಓಣ ಗಳಲ್ಲಿ ಆಯೋಜಿಸಬೇಕು ನಡೆಯುತ್ತಿರುವ ಕ್ಯಾಂಪಿನ ಕುರಿತು ತುಂಬ ಸಂತೋಷ ವ್ಯಕ್ತ ಪಡಿಸಿರುತ್ತಾರೆ. 

ಮತ್ತು ನಗರದ ಪ್ರತಿಷ್ಠ ಗಣ್ಣತಿ ಗಣ್ಯ ವ್ಯಕ್ತಿಗಳು ಹಾಜರಾಗಿ ಆಯೋಜಿಸಿದ ಕ್ಯಾಂಪನ್ನು ಪರಿಶೀಲಿಸಿ ಆ ಕ್ಯಾಂಪಿನಲ್ಲಿ ಜನ ಸಾಮಾನ್ಯರಿಗೆ ಉಚಿತ್ ಔಷೋಧಪಚಾರ ಹಾಗೂ ಎಲ್ಲಾ ತರಹದ ರೋಗಗಳಿಗೆ ಚಿಕಿತ್ಸೆ ನೀಡುತ್ತಿರುವ ಬಗ್ಗೆ ನೋಡಿ ಹರ್ಷ ವ್ಯಕ್ತ ಪಡಿಸಿ ಸಂಘದವರು ಆಯೋಜಿಸಿದ ಕ್ಯಾಂಪನ ಕುರಿತು ಶುಭ ಹಾರೈಸಿ ಇನ್ನು ಮುಂದೆ ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ಅಲ್ಪ ಸಂಖ್ಯಾತರ ನೌಕರರ ಸಂಘದವರು ಇನ್ನೂ ಹೆಚ್ಚಿನ ಕ್ಯಾಂಪಗಳು ನಡೆಸಬೇಕೆಂದು ತಿಳಿಸಿದರು.

ಯುನೈಟೆಡ್ ಆಸ್ಪತ್ರೆಯ ವೈದ್ಯರಾದ ಡಾ. ಮೇರಾಜ, ಡಾ. ಝನಬ್, ಡಾ. ರಚನಾ, ಮಹಾನಗರ ಪಾಲಿಕೆ ಸದಸ್ಯೆ ಪುತಲಿ ಬೇಗಂ, ನಿವೃತ್ತ ಜಂಟಿ ಆಯುಕ್ತ ಅಸದ ಅಲಿ ಅನ್ಸಾರಿ, ಈ ಕ್ಯಾಂಪಿನಲ್ಲಿ ಸಂಘದ ಅಧ್ಯಕ್ಷ ಸೈಯ್ಯದ ನಜೀರೊದ್ದಿನ ಮುತವಲ್ಲ, ಕಾರ್ಯಧ್ಯಕ್ಷ ಅಸದ್ ಅಲಿ ಅನ್ಸಾರಿ, ಗೌರವ ಅಧ್ಯಕ್ಷ ಡಾ. ಎಂ.ಎಂ. ಬೇಗ್, ಪ್ರಧಾನ ಉಪಾಧ್ಯಕ್ಷ ಡಾ. ಅಸಲಂ ಸೈಯೀದ್, ಖಜಾಂಚಿ ಎಸ್.ಎಂ. ಖಾದ್ರಿ, ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಗಿರದಾರ, ಜಂಟಿ ಕಾರ್ಯದರ್ಶಿ ಅಬ್ದುಲ ಖದೀರ ಮತ್ತು ನಿವೃತ್ತ ಅಧೀಕ್ಷರಾದ ಮಹುಮ್ಮದ ಇಸ್ಮಾಯಿಲ ಇನಾಮದಾರ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.

 ವಿಶೇಷವಾಗಿ ಡಾ. ವಿಕ್ರಮ ಸಿದ್ದಾರೆಡ್ಡಿ ಮ್ಯಾನೇಜಿಂಗ ಡೈರೆಕ್ಟರ ಹಾಗೂ ಮಹುಮ್ಮದ ದಾವೂದ ಅಲಿ ಆಡಳಿತ ಅಧಿಕಾರಿ ಮತ್ತು ಅರಿಫ್ ಅಹ್ಮದ ಖಾನ್ ಪ್ರಧಾನ ಕಾರ್ಯದರ್ಶಿಗಳು ಅಲ್ ಖಮರ ಸಂಸ್ಥೆ, ಕಲಬುರಗಿ ಇವರುಗಳು ತಮ್ಮ ಅಧೀನದಲ್ಲಿದ್ದ ಎಲ್ಲಾ ಸಿಬ್ಬಂಧಿಗಳನ್ನು ನಮ್ಮ ಉಚಿತ ಹೆಲ್ತ್ ಕ್ಯಾಂಪಿಗೆ ನಿಯೋಜಿಸಿ ಈ ಕ್ಯಾಂಪನ್ನು ಯಶಸ್ವಿಗೊಳಿಸಲು ಕಾರಣ ಭೂತರಾಗಿರುವುದರಿಂದ ಅವರಿಗೆ ನಮ್ಮ ಸಂಘದ ವತಿಯಿಂದ ಹೃತಪೂರ್ವಕ ಅಭಿನಂದನೆಗಳು. ಹೆಲ್ತ್ ಕ್ಯಾಂಪಿನ ಕಾರ್ಯಕ್ರಮವನ್ನು ಬೆಳಿಗ್ಗೆಯಿಂದ ಸಾಯಂಕಾಲದವರೆ ಶ್ರೀ ನವಾಬ ಖಾನ್ ಕಾರ್ಯದರ್ಶಿ ಇವರು ನಡೆಯಿಸಿಕೊಂಡು ಹೋಗಿರುತ್ತಾರೆ.

ಮತ್ತು ವರ್ಕಿಂಗ ಅಧ್ಯಕ್ಷರು ಇವರುಗಳಿಂದ ಮಾಡಿಸಲಾಯಿತು. ಸದರಿ ದಿವಸ ಬೆಳಗ್ಗೆಯಿಂದಲೆ ಧಾರಾಕಾರವಾಗಿ ಮಳೆ ಬರುತಿತ್ತು ಅಂತಹ ಮಳೆಯಲ್ಲಿ ನಮ್ಮ ಕ್ಯಾಂಪಿಗೋಸ್ಕರ ಯುನೈಟೆಡ್ ಆಸ್ಪತ್ರೆಯ ಸಮಸ್ತ ವೈದ್ಯಕಿಯ ಸಿಬ್ಬಂಧಿಯವರು ಹಾಗೂ ಅಲ್ ಖಮರ ನರ್ಸಿಂಗ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪ್ರಾಂಶುಪಾಲ ಇವರುಗಳು ಆಗಮಸಿ ಕ್ಯಾಂಪಿನ ಯಶಸ್ವಿಗಾಗಿ ಕಾರಣಿ ಭೂತರಾಗಿದ್ದಾರೆ. ಮತ್ತು ಧಾರಾಕಾರ ಮಳೆಯನ್ನು ಲೆಕ್ಕಿಸದೆ ಜನಸಾಮಾನ್ಯರು ಮಕ್ಕಳು ಹಾಗೂ ಮಹಿಳೆಯರು ಹೆಲ್ತ ಕ್ಯಾಂಪಿಗೆ ಚಿಕಿತ್ಸೆ ಕುರಿತು ಹಾಜರಾಗಿರುತ್ತಾರೆ. ಸದರಿ ಕ್ಯಾಂಪಿನಲ್ಲಿ ಸುಮಾರು ೧೮೦ ರಷ್ಟು ಜನರು ನೊಂದಣಿ ಮಾಡಿಸಿ ಚಿಕಿತ್ಸೆ ಪಡೆದಿರುತ್ತಾರೆ. ಎಂದು ಸಂಘದ ಅಧ್ಯಕ್ಷ ಸೈಯ್ಯದ ನಜೀರೊದ್ದಿನ ಮುತವಲ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.