ಪೋಲಿಸ್ ಅಧಿಕಾರಿಯ ಜನ್ಮ ದಿನ : ಲೇಖನ ಸಾಮಗ್ರಿ ವಿತರಣೆ
ಪೋಲಿಸ್ ಅಧಿಕಾರಿಯ ಜನ್ಮ ದಿನ : ಲೇಖನ ಸಾಮಗ್ರಿ ವಿತರಣೆ
ಶಹಾಬಾದ : - ನಗರ ಪೋಲಿಸ್ ಠಾಣೆಯ ಸರ್ಕಲ್ ಇನ್ಸಪೆಕ್ಟರ್ ರಾದ ನಟರಾಜ ಲಾಡೆ ಯವರ ಹುಟ್ಟು ಹಬ್ಬವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಳಾ(ಕೆ) ಗ್ರಾಮದಲ್ಲಿ ವಿದ್ಯಾರ್ಥಿಗಳ ಜೊತೆ ಅವರ ಅಭಿಮಾನಿಗಳಾದ ಯಲ್ಲಾಲಿಂಗ ಹೈಯಾಳಕರ ಮತ್ತು ಶಿವಕುಮಾರ ದೊರೆವತಿಯಿಂದ ಆಚರಿಸಲಾಯಿತು.
ವಿದ್ಯಾರ್ಥಿಗಳು, ಅಭಿಮಾನಿಗಳು ಮತ್ತು ಸಿಬ್ಬಂದಿಗಳ ಮಧ್ಯೆ ಕೇಕ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಶಾಲೆಯಲ್ಲಿ ಕಲಿಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಪುಸ್ತಕ, ಪೆನ್ ಮತ್ತು ಕಂಪಾಸ್ ಬಾಕ್ಸ್ ಹಾಗೆ ಲೇಖನ ಸಾಮಗ್ರಿಗಳನ್ನು ವಿತರಿಸಿದರು.
ಈ ಸಂಧರ್ಭದಲ್ಲಿ ಕರವೇ ತಾಲ್ಲೂಕ ಅಧ್ಯಕ್ಷ ಯಲ್ಲಾಲಿಂಗ ಹೈಯಾಳಕರ ಮಾತನಾಡಿ, ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು, ಸಮಯಪ್ರಜ್ಞೆ, ಶಿಸ್ತು, ಸಂಯಮ ಗುಣಗಳನ್ನು ಬೆಳೆಸಿಕೊಂಡು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಬೇಕು. ಆಸಕ್ತಿಯಿಂದ ಪಾಠಗಳನ್ನು ಕಲಿಯಬೇಕು, ಶ್ರದ್ಧೆವಹಿಸಿ ಓದಿ, ಜ್ಞಾನಿಗಳಾಗಿ ಸರ್ಕಲ್ ಇನ್ಸಪೆಕ್ಟರ್ ನಟರಾಜ ಲಾಡೆ ತರಹ ದಕ್ಷ ಮತ್ತು ಪ್ರಮಾಣಿಕ ಅಧಿಕಾರಿಯಾಗಿ ಆಗಬೇಕು, ಉತ್ತಮ ಪ್ರಜೆಗಳಾಗಿ ರೂಪುಗೊಂಡು ಸಮಾಜಮುಖೀ ಕೆಲಸಗಳಲ್ಲಿ ತೊಡಗಿಸಿ ಕೊಳ್ಳಬೇಕೆಂದು ಹೇಳಿದರು.
ಈ ಸಂಧರ್ಭದಲ್ಲಿ ಶಾಲೆಯ ಶಿಕ್ಷಕರಾದ ಶ್ರೀಮತಿ ಕಮಲಾಬಾಯಿ, ರಮಾ, ಅರುಣಾ ಗಣೇಶ ಜಾಯಿ, ಸದಾಫ ಫಾತಿಮಾ, ಗುರುದತ್ತ ಹಾಗೂ ದೈಹಿಕ ಶಿಕ್ಷಕ ಬನ್ನಪ್ಪ, ಮಹೇಶ ಹರ್ಲಕಟ್ಟಿ, ಸುರೇಶ ಹೈಯಾಳಕರ, ಸೋಹೆಲ ಖಾನ ಸೇರಿದಂತೆ ಅನೇಕರು ಇದ್ದರು.
ಶಹಾಬಾದ ಸುದ್ದಿ ನಾಗರಾಜ್ ದಂಡಾವತಿ