ಸೇ.08.ರಂದು ಪ್ರತಿಭಾ ಪುರಸ್ಕಾರ
ಸೇ.08.ರಂದು ಪ್ರತಿಭಾ ಪುರಸ್ಕಾರ
ಕಲಬುರಗಿ: ಆ.ಸ(ಹಿ/ಕಿ) ನೌ.ಪ.ಸ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಎನ್.ಡಿ. ಕಾಚಾಪೂರ ರವರ ಅಧ್ಯಕ್ಷತೆಯಲ್ಲಿ ದಿನಾಂಕ 08-09-2024 ರಂದು ಸಮಯ 11:00 ಗಂಟೆಗೆ ಸ್ಥಳ ಯಾತ್ರಿಕ ನಿವಾಸ ಪಬ್ಲಿಕ ಗಾರ್ಡನ ಕಲಬುರಗಿಯಲ್ಲಿ ಜರಗುವ ಸರ್ವಸದಸ್ಯರ ಸಭೆಯಲ್ಲಿ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಸಹಾಯಕ/ಸಹಾಯಕಿ ವೃಂದದ ಮಕ್ಕಳಿಗೆ 2023-24 ನೇ ಸಾಲಿನಲ್ಲಿ 85% ಕ್ಕಿಂತ ಹೆಚ್ಚಿನ ಅಂಕ ಪಡೆದ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ತರಗತಿಗಳಲ್ಲಿ ತೇಗರ್ಡೆ ಹೊಂದಿರುವ ಹಾಗೂ ನೀಟ್ ಪರೀಕ್ಷೆಯಲ್ಲಿ ಉತೀರ್ಣರಾದವರಿಗೆ ತಮ್ಮ ವೈಯಕ್ತಿಕ ಖರ್ಚಿನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಆದ್ದರಿಂದ ಪ್ರತಿಭಾಂತ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ತರಗತಿಗಳಲ್ಲಿ ಪ್ರಥಮ ಬಹುಮಾನ ರೂ.2000/- ದ್ವೀತಿಯ ಬಹುಮಾನ ರೂ.1500/- ತೃತಿಯ ಬಹುಮಾನ ರೂ.1000/- ನೀಡಿ ಪುರಸ್ಕರಿಸಲಾಗುವುದು, ಉಳಿದವರಿಗೆ ಸಮಾದಾನಕರ ಬಹುಮಾನ ನೀಡಲಾಗುವುದು. ಪ್ರಯುಕ್ತ ಸದರಿ ಆರೋಗ್ಯ ಸಹಾಯಕ ವೃಂದವರು 85% ಕ್ಕಿಂತ ಹೆಚ್ಚಿನ ಅಂಕ ಪಡೆದ ಅಂಕಪಟ್ಟಿಯ ನೇರಳು ಪ್ರತಿ ಹಾಗೂ ಎರಡು ಭಾವ ಚಿತ್ರಗಳನ್ನು ದಿನಾಂಕ 05-09-2024 ರಂದು ಸಾಯಂಕಾಲ 05:00 ಗಂಟೆಯ ಒಳಗಾಗಿ ಸಂಘದ ಕಛೇರಿಗೆ ತಲುಪಿಸುವಂತೆ ಅಧ್ಯಕ್ಷರಾದ ಶ್ರೀ ಎನ್.ಡಿ.ಕಾಚಾಪೂರ ರವರು ತಿಳಿಸಿರುತ್ತಾರೆ. ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿ ವಿದ್ಯಾರ್ಥಿಗಳ ಹಿತಾಶಕ್ತಿ ಕಾಪಾಡಬೇಕೆಂದು ಕೋರಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಮೋ.ನಂ. 9480462958 - 8970746498 ಸಂಪರ್ಕಿಸಿ
.