ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ

ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ

ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ

ಕಲಬುರಗಿ: ವಿಶೇಷ ಭೂಸ್ವಾಧೀನಾಧಿಕಾರಿ ಪಾರ್ವತಿ ರೆಡ್ಡಿ ಎಂಬ ಅಧಿಕಾರಿಗಳು ಸುಮಾರು ಎರಡು ತಿಂಗಳದಿಂದ ಕಛೇರಿಗೆ ಸರಿಯಾಗಿ ಬರದೆ ವಿನಾಕಾರಣ ರೈತರಿಗೆ, ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿದ್ದು, ಕಛೇರಿಯಲ್ಲಿನ ಸಿಬ್ಬಂದಿಯವರು 'ಯಾವುದಾರದರೂ ಕೆಸಲ ಮಾಡಬೇಕಾದರೆ ಅಧಿಕಾರಿಗಳ ರುಜು ಹಾಕಿಸಿಕೊಳ್ಳುವ ಸಲುವಾಗಿ ಬೀದರನಲ್ಲಿ ಇರುವ ಸ್ಥಳಕ್ಕೆ ಹೋಗಿ ಸಹಿ ಹಾಕಿಸಿಕೊಂಡು ಬರುವಂತಹ ಪರಿಸ್ಥಿತಿ ಬಂದಿದೆ. ಇದು ಎಸ್.ಎಲ್.ಎ.ಓ ಕಛೇರಿಯ ಸಿಬ್ಬಂದಿಗಳ ಪರಸ್ಥತಿ ಇರುವದಾಗಿದೆ. ಇನ್ನು ರೈತರ ಹಾಗೂ ಸಾರ್ವಜನಿಕರಿಗೆ ಯಾವ ರೀತಿಯಾಗಿ ತೊಂದರೆ ಆಗುತ್ತಿದೆ ಎಂದು ವಿಚಾರ ಮಾಡುವಂತಹ ವಿಷಯ, ಸಮಯಕ್ಕೆ ಸರಿಯಾಗಿ ಕಛೇರಿಗೆ ಬರದ ಅಧಿಕಾರಿಯ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು, ಸದರಿ ಎಸ್.ಎಲ್.ಎ.ಓ ರವರಿಗೆ ವಹಿಸಿಕೊಟ್ಟ ಹೆಚ್ಚುವರಿ ಪ್ರಭಾರವನ್ನು ರದ್ದು ಪಡಿಸಿ ಅಥವಾ ಬೇರೆ ಅಧಿಕಾರಿಗಳಿಗೆ ನೇಮಿಸಿ ಕಲಬುರಗಿ ಜಿಲ್ಲೆಯಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿಗಳು ಎಂದು ಮುಂದು ವರೆಸಲು ಅನುವು ಮಾಡಿಕೊಟ್ಟಲ್ಲಿ ಮೇಲೆ ತಿಳಿಸಿದ ಎಲ್ಲಾ ರೈತರಿಗೂ ಹಾಗೂ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ. ಎಂದು ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

ಕಾರಣ ದಯಮಾಡಿ ಕಲಬುರಗಿ ವಿಶೇಷ ಭೂಸ್ವಾಧೀನಾಧಿಕಾರಿಗಳ ಬೇರೆಯವರಿಗೆ ನೇಮಿಸಬೇಕು ಇಲ್ಲವಾದರೇ ಮುಂಬರುವ ದಿನಗಳಲ್ಲಿ ಕಲ್ಯಾಣ ಕರ್ನಾಟಕ ರಕ್ಷಣ ವತಿಯಿಂದ ರೈತ ಹಾಗೂ ಸಾರ್ವಜನಿಕರು ಸೇರಿ ಮುಂಬರುವ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಶೀವಲಿಂಗ ಹಳಿಮನಿ, ಜಿಲ್ಲಾ ಅಧ್ಯಕ್ಷ ಸಂದೀಪ ಪಿ.ಭರಣ ಸೇರಿದಂತೆ ಕಾರ್ಯಕರ್ತರು ಇದ್ದರು

.