26 ಸರ್ಕಾರಿ ಶಾಲೆಗಳಿಗೆ ಉಪಯುಕ್ತ ಸಾಮಗ್ರಿ ಹಾಗು ಟ್ರ್ಯಾಕ್ ಸೂಟ್ ವಿತರಣೆ ಬೆಳತೂರು ಎನ್.ಯಲ್ಲಪ್ಪ ರವರ ಸಮಾಜಮುಖಿ ಸೇವಾ ಕಾರ್ಯ

26 ಸರ್ಕಾರಿ ಶಾಲೆಗಳಿಗೆ ಉಪಯುಕ್ತ ಸಾಮಗ್ರಿ ಹಾಗು ಟ್ರ್ಯಾಕ್ ಸೂಟ್ ವಿತರಣೆ
ಬೆಳತೂರು ಎನ್.ಯಲ್ಲಪ್ಪ ರವರ ಸಮಾಜಮುಖಿ ಸೇವಾ ಕಾರ್ಯ
ಬೆಳತೂರು, ಕಾಡುಗೋಡಿ, ಕನ್ನಮಂಗಲ ವ್ಯಾಪ್ತಿಯ 26 ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ 79ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಟ್ರ್ಯಾಕ್ ಸೂಟ್, ಸ್ಟೇಷನರಿ, ನೋಟ್ ಪುಸ್ತಕಗಳು, ಬ್ಯಾಂಡ್ ಸೆಟ್ ಹಾಗು ಮಕ್ಕಳಿಗೆ ಪ್ರೋತ್ಸಾಹಧನ ಕಿರಿಯ ಪ್ರಾಥಮಿಕ ಶಾಲೆಗಳಿಗೆ ತಲಾ 5,000/- ಹಿರಿಯ / ಪ್ರೌಢ ಶಾಲೆಗಳಿಗೆ ತಲಾ 10,000/-ಗಳನ್ನು ಜನನಿ ಪಿಯು ಕಾಲೇಜು, ಜನನಿ ಪಬ್ಲಿಕ್ ಸ್ಕೂಲ್, ಕಾಡುಗೋಡಿ, ಎಲ್‌ಸಿಆರ್ ಶಾಲೆ ಯಶವಂತಪುರ, ಗ್ರೇಟ್ ವಿಷನ್ ಅಕಾಡೆಮಿ ಮತ್ತು ಶಬರಿ ಆಶ್ರಯ ಧಾಮ (ಅನಾಥಾಶ್ರಮ ಮತ್ತು ವೃದ್ಧಾಶ್ರಮ) ಬೆಳತೂರು ಇವುಗಳ ಸಂಸ್ಥಾಪಕರಾದ ಬೆಳತೂರು ಎನ್.ಯಲ್ಲಪ್ಪ ರವರು ನೀಡಿದರು.