ವಿಶ್ವನಾಥ ಎಸ್. ಸಾಹುಕಾರ ಅವರ ತಂದೆ ಸಪ್ಪಣ್ಣ ಸಾಹೂ ನಿಧನ

ವಿಶ್ವನಾಥ ಎಸ್. ಸಾಹುಕಾರ ಅವರ ತಂದೆ ಸಪ್ಪಣ್ಣ ಸಾಹೂ ನಿಧನ
ಕಲಬುರಗಿ: ಗ್ರಾಮಾಂತರ ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿಗಳು ಹಾಗೂ ಸಾಂಸ್ಕೃತಿಕ ಪ್ರಕೋಷ್ಠದ ಜಿಲ್ಲಾ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ವಿಶ್ವನಾಥ ಎಸ್. ಸಾಹುಕಾರ ತಿಳಗೂಳ ಅವರ ತಂದೆಯವರಾದ ದಿ. ಶ್ರೀ ಸಪ್ಪಣ್ಣ ತಂದೆ ಬಸವಂತರಾಯ ಸಾಹು ತಿಳಗೂಳ ರವರು ಇಂದು ನಿಧನರಾಗಿದ್ದಾರೆ.
ಅವರು ತಮ್ಮ ಜೀವನದಲ್ಲಿ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜನರ ಮೆಚ್ಚುಗೆ ಪಡೆದಿದ್ದರು.
ಸಪ್ಪಣ್ಣ ಸಾಹೂ ಅವರ ಅಂತ್ಯಕ್ರಿಯೆ ನಾಳೆ, ದಿನಾಂಕ 05-07-2025 (ಶನಿವಾರ) ಬೆಳಿಗ್ಗೆ 11:30 ಗಂಟೆಗೆ, ಕಲಬುರಗಿ ತಾಲೂಕಿನ ತಿಳಗೂಳ ಗ್ರಾಮದ ಅವರ ಸ್ವಂತ ಹೊಲದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ
.