ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 15 ಬೇಡಿಕೆ – ಹೋರಾಟ ಸಮಿತಿಯ ಪತ್ರಿಕಾಗೋಷ್ಠಿ”

“ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 15 ಬೇಡಿಕೆ – ಹೋರಾಟ ಸಮಿತಿಯ ಪತ್ರಿಕಾಗೋಷ್ಠಿ”
ಕಲಬುರಗಿ, ದಿನಾಂಕ: 15.09.2025 ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯು ಇಂದು ಪತ್ರಿಕಾಗೋಷ್ಠಿ ನಡೆಸಿ, ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವಾಂಗೀಣ ರಚನಾತ್ಮಕ ಪ್ರಗತಿಗೆ ಸಂಬಂಧಿಸಿದ ಪ್ರಮುಖ ಬೇಡಿಕೆಗಳನ್ನು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ. ಬರುವ ಸೆಪ್ಟೆಂಬರ್ 17ರಂದು ನಡೆಯುವ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ವೇಳೆ ಕಲಬುರಗಿಗೆ ಆಗಮಿಸುವ ಮುಖ್ಯಮಂತ್ರಿ ಕಲ್ಯಾಣದ ಅಭಿವೃದ್ದಿ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕೆಂದು ಸಮಿತಿ ಒತ್ತಾಯಿಸಿದೆ.
ಈ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 16ರಂದು ಜರುಗಲಿರುವ ವಿಶೇಷ ಸಂಪುಟ ಸಭೆಯಲ್ಲಿ ಹೀಗಿರುವ ಬೇಡಿಕೆಗಳನ್ನು ತುರ್ತುವಾಗಿ ಪರಿಗಣಿಸಲು ಸಮಿತಿ ಆಗ್ರಹಿಸಿದೆ:
* ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರಿಗೆ ವೈಜ್ಞಾನಿಕ ಮಾನದಂಡದಂತೆ ಪರಿಹಾರ ನೀಡುವುದು.
* ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಖಾಲಿ ಇರುವ 62 ಸಾವಿರಕ್ಕೂ ಅಧಿಕ ಸರ್ಕಾರಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡುವುದು.
* 21381 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳ ಭರ್ತಿ ಮೂಲಕ ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದು.
* ದೀರ್ಘಕಾಲದಿಂದ ಖಾಲಿ ಇರುವ ದೈಹಿಕ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವುದು.
* ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳ ಗುಣಮಟ್ಟ ಸುಧಾರಣೆಗೆ ವೈಜ್ಞಾನಿಕ ನೀತಿ ರೂಪಿಸುವುದು.
* ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಶಿಕ್ಷಣ ಸಚಿವರನ್ನು ನೇಮಕ ಮಾಡುವುದು.
* ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯವನ್ನು ರಚಿಸುವುದು.
* 371(ಜೆ) ಕಲಂ ಅಡಿಯಲ್ಲಿ ಸಮಸ್ಯೆಗಳ ನಿವಾರಣೆಗೆ ಕಲಬುರಗಿಯಲ್ಲಿ ಪ್ರತ್ಯೇಕ ಟ್ರಿಬ್ಯೂನಲ್ ಸ್ಥಾಪಿಸುವುದು.
* 5 ಅಥವಾ 10 ವರ್ಷದ ದೂರದೃಷ್ಟಿಯ ಅಭಿವೃದ್ಧಿ ಕ್ರೀಯಾ ಯೋಜನೆ ರೂಪಿಸುವುದು.
* ಕೆಕೆಆರ್‌ಡಿಬಿ ಕಾರ್ಯಗಳಿಗೆ ಮೇಲ್ವಿಚಾರಣಾ, ಮೌಲ್ಯಮಾಪನ ಹಾಗೂ ಜಾಗೃತ ದಳಗಳನ್ನು ರಚಿಸುವುದು.
*ನಂಜುಂಡಪ್ಪ ವರದಿ ಮಾದರಿಯಲ್ಲಿ ಹೋಸ ವರದಿ ರಚನೆಗೆ ಪ್ರೊ. ಗೋವಿಂದರಾವ್ ಸಮಿತಿಯ ಪ್ರಾದೇಶಿಕ ಸಮತೋಲನ ನಿವಾರಣಾ ವರದಿಗೆ ಅಂತಿಮಗೊಳಿಸುವ ಮೊದಲು ಚರ್ಚೆ ಮಾಡಲು ಅವಕಾಶ ನೀಡುವುದು.
* ಪ್ರಾರಂಭವಾಗಲಿರುವ 350 ಪಬ್ಲಿಕ್ ಶಾಲೆಗಳೊಂದಿಗೆ ಶಿಕ್ಷಕರು ಹಾಗೂ ಮೂಲಸೌಕರ್ಯಗಳನ್ನು ಕಾಲಮಿತಿಯಲ್ಲಿ ಒದಗಿಸುವುದು.
* 371 ,ಜೆ, ಅಡಿಯಲ್ಲಿ ವೀಶೇಷ ಸ್ಥಾನಮಾನ,ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀತಿ ಅನ್ವಯಿಸಬೇಕು.
* ಕಲ್ಯಾಣ ಕರ್ನಾಟಕ ಉತ್ಸವವನ್ನು ಮೈಸೂರು ದಸರಾ ಮಾದರಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಿ, ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯ ಮಾದರಿಯಲ್ಲಿ ಗೌರವ ನೀಡುವುದು.
* ಕೃಷ್ಣಾ ಜಲಾನಯನ ಯೋಜನೆಗಳನ್ನು ಸಮಯಕ್ಕೆ ಪೂರ್ಣಗೊಳಿಸಿ, ಅದನ್ನು ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವುದು.
ಈ ಸಂದರ್ಭದಲ್ಲಿ ಬಸವರಾಜ ದೇಶಮುಖ, ಗೌರವಾಧ್ಯಕ್ಷರು ಹಾಗೂ ಡಾ. ಲಕ್ಷ್ಮಣ ದಸ್ತಿ, ಸಂಸ್ಥಾಪಕ ಅಧ್ಯಕ್ಷರು ಸಹಿ ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರೊ. ಆರ್.ಕೆ. ಹುಡಗಿ, ಡಾ. ಬಸವರಾಜ ಕುಮನೂರ, ಡಾ. ಬಸವರಾಜ ಗುಲಶೆಟ್ಟಿ, ಮನೀಷ್ ಜಾಜು, ಡಾ. ಮಾಜಿದ್ ದಾಗಿ, ಡಾ. ಗಾಂಧೀಜಿ ಮೋಳಕೆರೆ, ಲಿಂಗರಾಜ ಸಿರಗಾಪೂರ, ಅಸ್ಲಂ ಚೌಂಗೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು