ಪ್ರಾಧ್ಯಾಪಕರ ಶ್ರಮ ಮತ್ತು ಉತ್ತಮ ಬೋಧನೆ, ಪರಿಸರದಿಂದ ಕಾಲೇಜಿಗೆ ಹೆಸರು :..

ಪ್ರಾಧ್ಯಾಪಕರ ಶ್ರಮ ಮತ್ತು ಉತ್ತಮ ಬೋಧನೆ, ಪರಿಸರದಿಂದ ಕಾಲೇಜಿಗೆ ಹೆಸರು :..
ಶಹಾಬಾದ : - ೧೯೬೯ ರಿಂದ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಕರ್ಯ ಒದಗಿಸುತ್ತಿರುವ ಈ ಸಂಸ್ಥೆ ಮತ್ತು ಪ್ರಾಧ್ಯಾಪಕರ ಶ್ರಮ ಮತ್ತು ಉತ್ತಮ ಬೋಧನೆಯಿಂದ ಕಾಲೇಜಿಗೆ ಹೆಸರು ಬರುತ್ತಿದೆ ಎಂದು ಹೈ-ಕ ಶಿಕ್ಷಣ ಸಂಸ್ಥೆಯ ಅಜೀವ ಸದಸ್ಯರಾದ ಸುಭಾಷ ಇಂಗಿನಶೆಟ್ಟಿ ಹೇಳಿದರು.
ಅವರು ಮರಗೋಳ ಕಾಲೇಜಿನ ೨೦೨೫-೨೬ ಸಾಲಿನ ಪ್ರಥಮ ಪಿಯುಸಿ ವಿಧ್ಯಾರ್ಥಿಗಳಿಗೆ ಸ್ವಾಗತ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಉದ್ಘಾಟನಾ ಸಮಾರಂಭ ದಲ್ಲಿ ಮಾತನಾಡಿದರು.
ಭಾರತೀಯ ಪರಂಪರೆಯ ಸಂಸ್ಕೃತಿಯಲ್ಲಿ ಅತಿಥಿಗಳಿಗೆ ಸ್ವಾಗತಿಸುವುದು,ಸತ್ಕರಿಸುವದು ಹಾಗೂ ಬೀಳ್ಕೊಡುವ ಪದ್ಧತಿ ಪುರಾತನವಾಗಿದೆ, ಅದರಂತೆ ಪ್ರಥಮ ವರ್ಷಕ್ಕೆ ಬಂದ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ಆತ್ಮೀಯವಾಗಿ ಸ್ವಾಗತಿಸುವ ಕಾರ್ಯ ಶ್ಲಾಘನೀಯ, ವಿದ್ಯಾರ್ಥಿಗಳು ಸತತ ಅಧ್ಯಯನದಲ್ಲಿ ತೊಡಗಿಸಿಕೊಂಡು ಸಾರ್ಥಕ ಬದುಕು ರೂಪಿಸಿಕೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ.ಬಸವರಾಜ ಹಿರೇಮಠ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜಿನಲ್ಲಿರುವ ಗ್ರಂಥಾಲಯದ ಪುಸ್ತಕಗಳನ್ನು, ಕಂಪ್ಯೂಟರ್‌ಗಳ ಸದ್ಬಳಕೆ ಮಾಡಿಕೊಂಡು ಹೆಚ್ಚಿನ ಜ್ಞಾನ ಸಂಪಾದಿಸಬೇಕು, ಈ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಕಾರಣ ವಿದ್ಯಾರ್ಥಿಗಳು ಸಿಕ್ಕ ಅವಕಾಶ ಗಳನ್ನು ಬಳಸಿಕೊಂಡು ಮುಂದೆ ಬರಬೇಕು, ದೇಶದ ಚಿಂತನೆಯನ್ನು ಮಾಡುವಂತಹ ಸತ್ಪ್ರಜೆಯಾಗಿ ಮೂಡಿ ಬನ್ನಿ ಎಂದು ಶುಭ ಹಾರೈಸಿದರು.
ಉಪನ್ಯಾಸಕರಾದ ಡಾ.ವೆಂಕಟರಾಜಪ್ಪ ರಾಷ್ಟ್ರೀಯ ಸೇವಾ ಯೋಜನೆ ಕುರಿತು ಮಾತನಾಡಿದರು.
ವೇದಿಕೆ ಮೇಲೆ ಉಪನ್ಯಾಸಕರಾದ ಚಂದ್ರಕಾಂತ, ರಾಮಣ್ಣ ಇಬ್ರಾಹಿಂಪುರ, ಶಿವಶಂಕರ ಹಿರೇಮಠ, ಪತ್ರಕರ್ತ ನಿಂಗಣ್ಣ ಜಂಬಗಿ ಇದ್ದರು.
ಮಲ್ಲಿಕಾರ್ಜನ ಇಂಗಿನ ಸ್ವಾಗತಿಸಿದರು, ಪ್ರವೀಣ ರಿಂದ ಶೆಟ್ಟಿ ಪ್ರಾರ್ಥನೆ ಗೀತೆ ಹಾಡಿದರು, ಢಶೃತಿ ಪಾಟೀಲ ನಿರೂಪಿಸಿದರು, ಶಿವಶಂಕರ ಹಿರೇಮಠ ವಂದಿಸಿದರು.
ಈ ಸಂದರ್ಭದಲ್ಲಿ ಪ್ರಿಯಾಂಕಾ ವಾಲಿ, ಮಮತಾ ಕೊಡದೂರ, ರಹೇಮತ ಬೀ, ಪಾಯಲ್, ಸಿದ್ರಾಮಪ್ಪ ಬಮ್ಮಶೆಟ್ಟಿ ಸೇರಿದಂತೆ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗ ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
ಶಹಾಬಾದ್ ಸುದ್ದಿ ನಾಗರಾಜ್ ದಂಡಾವತಿ