ಕಲಬುರಗಿ ನಗರ, ಕನ್ನಡ ಜಾಗೃತಿ ಸಮಿತಿಗೆ ವಿಶ್ವನಾಥ, ಭಕರೆ, ಡಾ ಕರುಣಾ ಜಮದಾರಖಾನಿ ಡಾ ಶ್ರೀ ಶೈಲ ನಾಗರಾಳ ಸೇರಿದಂತೆ 6 ಜನರಿಗೆ ನೇಮಕ

ಕಲಬುರಗಿ ನಗರ, ಕನ್ನಡ ಜಾಗೃತಿ ಸಮಿತಿಗೆ ವಿಶ್ವನಾಥ, ಭಕರೆ, ಡಾ ಕರುಣಾ ಜಮದಾರಖಾನಿ ಡಾ ಶ್ರೀ ಶೈಲ ನಾಗರಾಳ ಸೇರಿದಂತೆ 6 ಜನರಿಗೆ ನೇಮಕ
ಕಲಬುರಗಿ : ಕರ್ನಾಟಕ ರಾಜ್ಯದಲ್ಲಿ ಕನ್ನಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ,ಕನ್ನಡ ಜಾಗೃತಿ ಸಮಿತಿ ಕಲಬುರಗಿ ನಗರ ಸದಸ್ಯರನ್ನಾಗಿ
ವಿಶ್ವನಾಥ, ಭಕರೆ, ಡಾ ಕರುಣಾ ಜಮದಾರಖಾನಿ ಡಾ ಶ್ರೀ ಶೈಲ ನಾಗರಾಳ ಸೇರಿದಂತೆ 6 ಜನರನ್ನು
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ,ಸರಕಾರದ ಅಧೀನ ಕಾರ್ಯದರ್ಶಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೆ.ಆರ್.ರಮೇಶ್ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಕಲಬುರಗಿ ನಗರದ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕನ್ನಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಕನ್ನಡ ಜಾಗೃತಿ ಸಮಿತಿಗೆ ಅಧಿಕಾರೇತರ ಸದಸ್ಯರನ್ನಾಗಿ
ವಿಶ್ವನಾಥ, ಭಕರೆ, ಡಾ ಕರುಣಾ ಜಮದಾರಖಾನಿ ಡಾ ಶ್ರೀ ಶೈಲ ನಾಗರಾಳ, ಸುನೀಲ ಮಾನ್ಪಡೆ, ಸೈಯದ್ ಸೂಫೀಯಾ, ಮಹಾದೇವಿ ಸೇರಿದಂತೆ 6 ಜನರನ್ನು ನಾಮನಿರ್ದೇಶನ ಮಾಡಿ ಆದೇಶವನ್ನು ಹೊರಡಿಸಿದ್ದಾರೆ.