ವಚನ ಬೆಳಗಿ, ಕರ್ಪೂರದಂತೆ ಕರಗಿದ ಡಾ. ಫ.ಗು. ಹಳಕಟ್ಟಿ :ವೀರಣ್ಣ ದಂಡೆ ಅಭಿಮತ

ವಚನ ಬೆಳಗಿ, ಕರ್ಪೂರದಂತೆ ಕರಗಿದ ಡಾ. ಫ.ಗು. ಹಳಕಟ್ಟಿ :ವೀರಣ್ಣ ದಂಡೆ ಅಭಿಮತ
ಕಲಬುರಗಿ, ಜು.2: ಕಲಬುರ್ಗಿ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಡಾ. ಫ.ಗು. ಹಳಕಟ್ಟಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ದಂಡೆಯವರು ಮಾತನಾಡಿ, “ಮರಿಮಾಚಿಯಾಗಿದ್ದ ವಚನ ಸಾಹಿತ್ಯವನ್ನು ಜಗತ್ತಿಗೆ ಪಸರಿಸಿದೆ ಡಾ. ಹಳಕಟ್ಟಿ. ಅವರು ವಿಜಾಪುರದಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವ ಗುರಿಯಿಂದ ಏಳು ಗಂಡು ಮಕ್ಕಳ ಶಾಲೆ ಹಾಗೂ ಮೂರು ಹೆಣ್ಣು ಮಕ್ಕಳ ಶಾಲೆಗಳನ್ನು ಆರಂಭಿಸಿದರು,” ಎಂದು ಹೇಳಿದರು.
ಹಳಕಟ್ಟಿಯವರು ಬಿಎಲ್‌ಡಿ ಸಂಸ್ಥೆ, ಸಿದ್ಧೇಶ್ವರ ಬ್ಯಾಂಕ್, ಒಕ್ಕಲಿಗರ ಸಂಘ, ನೇಕಾರರ ಸಂಘ, ಹತ್ತಿ ಬೆಳೆಗಾರರ ಮಾರಾಟಗಾರರ ಸಂಘ, ಗ್ರಾಮೀಣಾಭಿವೃದ್ಧಿ ಸಂಘ ಹೀಗೆ ಹಲವು ಸಂಸ್ಥೆಗಳ ಸ್ಥಾಪಕರಾಗಿ ಕೆಲಸ ನಿರ್ವಹಿಸಿದರು. ಶಿಷ್ಯವೇತನ ಯೋಜನೆಯ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು.
ಹಳಕಟ್ಟಿ ಅವರು ತಮ್ಮ ಮನೆಯನ್ನೇ ಮಾರಿದು ‘ಹಿತಚಿಂತಕ’ ಮುದ್ರಣಾಲಯ ಸ್ಥಾಪಿಸಿ ವಚನಗಳನ್ನು ಪ್ರಕಟಿಸಿದರೆ, ಬಾಷಲ್ ಮಿಷನ್ ಮುದ್ರಣಾಲಯವು ಕ್ರಿಶ್ಚಿಯನ್ ಧರ್ಮಕ್ಕೆ ತೊಂದರೆಯಾಗಿ ಬರುತ್ತದೆ ಎಂಬ ಕಾರಣದಿಂದ ಮುದ್ರಿಸಲು ನಿರಾಕರಿಸಿತು. ಅವರು ವಚನ ಬೆಳಗಿಸಲು ತಮ್ಮ ಬದುಕನ್ನೇ ಕರ್ಪೂರದಂತೆ ಕರಗಿ ಹಾಕಿದರು.
ವಚನ ಆಷಾಡ ಪ್ರವಚನದ ಹತ್ತನೇ ದಿನದಂದು ಬೆಳಗಾವಿಯ ಶರಣಬಸವ ಸ್ವಾಮಿಗಳು ಮಾತನಾಡಿ, “ಓಲೆ ಮಠಗಳು ಮತ್ತು ಸಂಪಾದನೆ ಮಠಗಳು ವಚನ ಸಾಹಿತ್ಯ ಸಂಗ್ರಹ ಮತ್ತು ಸಂಪಾದನೆಯ ಕೇಂದ್ರಗಳಾಗಿವೆ” ಎಂದು ವಿವರಿಸಿದರು.
ಬಿ.ಆರ್.ಕೇರೂರ ಅವರು ಕೂಡ ಇಂದಿನ ಅನ್ನದಾಸೋಹ ನೆರೆವೇರಿಸಿದ ಪ್ರಯುಕ್ತ ದಂಪತಿಗಳಿಗೆ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ನಾಗರಾಜ್ ಪಾಟೀಲ ಪಾಳಾ ಅವರ ಜನ್ಮದಿನದ ಪ್ರಯುಕ್ತ ಪ್ರಸಾದ ವ್ಯವಸ್ಥೆ ಮಾಡಲಾಯಿತು. ಈ ಸಂದರ್ಭದಲ್ಲಿ ಈರಮ್ಮ ಪಾಟೀಲ ಮತ್ತು ಶರಣಗೌಡ ಪಾಟೀಲ ಪಾಳಾ ದಂಪತಿಗಳನ್ನು ಡಾ. ವಿಲಾಸ್ವತಿ ಖುಬಾ ಅವರು ಗೌರವಿಸಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಬಸವ ಸಮಿತಿಯ ಅಧ್ಯಕ್ಷ ಡಾ. ವಿಲಾಸ್ವತಿ ಖುಬಾ, ಜಯಶ್ರೀ ದಂಡೆ,ಕಾರ್ಯದರ್ಶಿ ಡಾ. ಆನಂದ ಸಿದ್ಧಾಮಣಿ, ಶರಣಗೌಡ ಪಾಟೀಲ ಪಾಳಾ, ಡಾ. ಕೆ.ಎಸ್. ವಾಲಿ, ಡಾ. ಎ.ಎಸ್. ಪಾಟೀಲ, ಬಂಡಪ್ಪ ಕೇಸುರ್ ಉಪಸ್ಥಿತರಿದ್ದರು.