ಸಾಹಿತಿ ಭೀಮಸೇನ ಗಾಯಕವಾಡ ಉಪನ್ಯಾಸ-೧೬ ರಂದು
ಸಾಹಿತಿ ಭೀಮಸೇನ ಗಾಯಕವಾಡ ಉಪನ್ಯಾಸ-೧೬ ರಂದು
ಕಲಬುರಗಿ: ಇಲ್ಲಿಯ ಕವಿ,ಸಾಹಿತಿ ಶಿಕ್ಷಕ ಭೀಮಸೇನ ಎಂ.ಗಾಯಕವಾಡ ಅವರ ಬದುಕು- ಬರಹ ಕುರಿತು ಸಾಹಿತ್ಯ ಸಮಾಗಮ ಮಾಲಿಕೆ-೭ ನ್ನು ದಿನಾಂಕ:೧೬-೧೧-೨೦೨೫ ರಂದು ಕುಸನೂರು ರಸ್ತೆಯ ಕೃಷ್ಣಾ ನಗರದ ಪ್ರಜ್ವಲ್ ನಿಲಯದಲ್ಲಿ ಬೆಳ್ಳಿಗ್ಗೆ ೧೦-೩೦ ಗಂಟೆಗೆ ಜಿಲ್ಲಾ ಸಿರಿಗನ್ನಡ ವೇದಿಕೆ ಮತ್ತು ಸಾಕ್ಷಿ ಪ್ರತಿಷ್ಠಾನ ಸಂಯುಕ್ತವಾಗಿ ಏರ್ಪಡಿಸುವ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ- ಸಾಹಿತಿ ಪ್ರಭಾಕರ ಜೋಶಿ ಚಾಲನೆ ನೀಡುವರು.ಕಾವ್ಯ ಕುರಿತು ಡಾ.ಕೈಲಾಸ ಡೋಣಿ,ಶಾಹಿರಿ- ಗಜಲ್ ಕುರಿತು ಡಾ. ಮಲ್ಲಿನಾಥ ತಳವಾರ ಉಪನ್ಯಾಸ ನೀಡುವರು ಜಿಲ್ಲಾಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ ಅಧ್ಯಕ್ಷತೆ ವಹಿಸುವರು ಎಂದು ಸಿರಿಗನ್ನಡ ವೇದಿಕೆ ಪ್ರಧಾನ ಕಾರ್ಯದರ್ಶಿ ಡಾ.ಸಿದ್ದಪ್ಪ ಹೊಸಮನಿ ಮತ್ತು ಕಾರ್ಯದರ್ಶಿ ಡಾ.ಶೀಲಾದೇವಿ ಬಿರಾದಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
