ಬೀರನೂರ - ಮದರಕಲ್ ರಸ್ತೆ ದುರಸ್ತಿಗೆ ನಿಂಗಣ್ಣ ಕರಡಿ ಆಗ್ರಹ

ಬೀರನೂರ - ಮದರಕಲ್ ರಸ್ತೆ ದುರಸ್ತಿಗೆ ನಿಂಗಣ್ಣ ಕರಡಿ ಆಗ್ರಹ

ಬೀರನೂರ - ಮದರಕಲ್ ರಸ್ತೆ ದುರಸ್ತಿಗೆ ನಿಂಗಣ್ಣ ಕರಡಿ ಆಗ್ರಹ 

ಶಹಪುರ: ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಬೀರನೂರು ಕ್ರಾಸ್ನಿಂದ ಮದರಕಲ್ ಗ್ರಾಮಕ್ಕೆ ಕೂಡುವ ಸಂಪರ್ಕ ರಸ್ತೆ ಹಾಳಾಗಿ ಗುಂಡಿ ಬಿದ್ದು ಸಂಪೂರ್ಣ ಹದಗೆಟ್ಟಿದೆ.ಈ ರಸ್ತೆ ದುರಸ್ತಿ ಮಾಡಬೇಕೆಂದು ಸಾಮಾಜಿಕ ಹೋರಾಟಗಾರ ನಿಂಗಣ್ಣ ಕರಡಿ ಆಗ್ರಹಿಸಿದ್ದಾರೆ. 

ಸುಮಾರು 1 ಕಿಲೋಮೀಟರ್ ವರೆಗೂ ಹದಗೆಟ್ಟಿರುವ ಈ ರಸ್ತೆಯ ಕುರಿತು ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗಮನಕ್ಕೆ ತಂದರು ಪ್ರಯೋಜನೆಯಾಗಿಲ್ಲ,ಅಲ್ಲದೆ 2022 - 23 ನೇ ಸಾಲಿನಲ್ಲಿ ಮದರಕಲ್ ಗ್ರಾಮದಿಂದ ಬೀರೂರು ಕ್ರಾಸ್ ವರೆಗೆ 1 ಕಿಲೋಮೀಟರ್ ಬಿಟ್ಟು 3 ಕಿಲೋಮೀಟರ್ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿದ್ದಾರೆ,ಇನ್ನುಳಿದ 1 ಕಿಲೋಮೀಟರ್ ರಸ್ತೆ ಸಂಪೂರ್ಣ ಹಾಳಾಗಿ,ಹಲವು ಬಾರಿ ಅಪಘಾತಗಳು ಸಂಭವಿಸಿವೆ, ಮುಂದೆ ಸಂಭವಿಸುವ ದುರ್ಘಟನೆಗಳಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೇ ನೇರ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದು ಈ ಸಂದರ್ಭದಲ್ಲಿ ಹೇಳಿದರು. 

ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ, ಗುಂಡಿಗಳು ದಾಟುವಾಗ ಆಯಾ ತಪ್ಪಿದರೆ ಮರಣ ಗ್ಯಾರಂಟಿ,ಮುಂದೆ ಆಗುವ ಅನಾಹುತಗಳು ತಪ್ಪಿಸಬೇಕೆಂದರೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆಮೇಲಿರುವ ಗುಂಡಿಗಳು ಮುಚ್ಚಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡರು.

ಶಹಪುರ ಗ್ರಾಮೀಣಬಸವರಾಜ ಶಿನ್ನೂರ

ಚಿತ್ರ ಬರಹ : ಬೀರನೂರ ಕ್ರಾಸ್ ನಿಂದ ಮದರಕಲ್ ಕೂಡುವ ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿರುವ ದೃಶ್ಯ.