ವಾಡಿ: ಹುತಾತ್ಮರಿಗೆ ಗೌರವ ಅರ್ಪಿಸಿದ ಬಿಜೆಪಿ ಮುಖಂಡರು

ವಾಡಿ: ಹುತಾತ್ಮರಿಗೆ ಗೌರವ ಅರ್ಪಿಸಿದ ಬಿಜೆಪಿ ಮುಖಂಡರು

ವಾಡಿ: ಹುತಾತ್ಮರಿಗೆ ಗೌರವ ಅರ್ಪಿಸಿದ ಬಿಜೆಪಿ ಮುಖಂಡರು

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಹುತಾತ್ಮರ ದಿನದ ಅಂಗವಾಗಿ ಮುಖಂಡರು,

ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರಿಗೆ ಗೌರವ ಪುಷ್ಪ ನಮನ ಸಲ್ಲಿಸಿದರು.

ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಅವರು ಮಾತನಾಡಿ ಭಗತ್ ಸಿಂಗ್ ಹಾಗೂ ಅವರ ಸಹಚರರಾದ ಶಿವರಾಮ್ ರಾಜಗುರು, ಸುಖದೇವ್ ಥಾಪರ್ , ತಮ್ಮ ಧೈರ್ಯಶಾಲಿ, ತಾಯ್ನಾಡಿನ ಸೇವೆಗಾಗಿನ ಸಾಹಸ ಜೀವನದಿಂದ ಇಡೀ ದೇಶದ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ ಎಂದರು.

 ಏಪ್ರಿಲ್ 8, 1929 ರಂದು, ಅವರು ಇಂಕ್ವಿಲಾಬ್ ಜಿಂದಾಬಾದ್ ಎಂಬ ಘೋಷಣೆಯನ್ನು ಕೂಗುತ್ತಾ ಬ್ರಿಟಿಷ್ ಕೇಂದ್ರ ಶಾಸಕಾಂಗ ಸಭೆಯ ಮೇಲೆ ಬಾಂಬ್‌ಗಳನ್ನು ಎಸೆದರು. ಶೀಘ್ರದಲ್ಲೇ ಅವರನ್ನು ಬಂಧಿಸಲಾಯಿತು ಮತ್ತು ಕೊಲೆ ಆರೋಪ ಹೊರಿಸಲಾಯಿತು. ಮಾರ್ಚ್ 23, 1931 ರಂದು, ಭಗತ್ ಸಿಂಗ್, ಶಿವರಾಮ್ ರಾಜಗುರು ಮತ್ತು ಸುಖದೇವ್ ಥಾಪರ್ ಅವರನ್ನು ಗಲ್ಲಿಗೇರಿಸಲಾಯಿತು.

ಈ ಮೂವರು ಸ್ವಾತಂತ್ರ್ಯ ಹೋರಾಟಗಾರರು ವೀರ ಮರಣಹೊಂದಿ ಒಂಬತ್ತು ದಶಕಗಳು ಕಳೆದಿವೆ. ಅವರ ತ್ಯಾಗ ಮತ್ತು ಬಲಿದಾನ ದಿನವಾದ ಮಾರ್ಚ್ 23ರಂದು 

ಅವರಿಗೆ ಕೃತಜ್ಞತಾ ಪೂರ್ವಕವಾಕ ಗೌರವ ನಮನ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ,ಮುಖಂಡರಾದ ಶರಣಗೌಡ ಚಾಮನೂರ, ಮಲ್ಲಿಕಾರ್ಜುನ ಸಾತಖೇಡ,ಅಶೋಕ ಕಾರಬಾರಿ, ಅಶೋಕ ಪಂಚಾಳ, ಬಸವರಾಜ ಯಲಗಟ್ಟಿ,ಪ್ರೇಮ ಜಾಧವ,ಗುರುರಾಜ ಕುಲಕರ್ಣಿ ಸೇರಿದಂತೆ ಇತರರು ಇದ್ದರು.