ಮಲ್ಲಣಪ್ಪ ಮಹಾಸ್ವಾಮಿಗಳ ಜನ್ಮದಿನ ಭಕ್ತರು ಸಂಭ್ರಮದಿಂದ ಆಚರಿಸಿದರು.
ಮಲ್ಲಣಪ್ಪ ಮಹಾಸ್ವಾಮಿಗಳ ಜನ್ಮದಿನ ಭಕ್ತರು ಸಂಭ್ರಮದಿಂದ ಆಚರಿಸಿದರು.
ಶಹಾಬಾದ್ : ಮನುಷ್ಯರೆಲ್ಲರೂ ದೈವ ಆಗದುವುದಿಲ್ಲ, ಅಂತಹ ಶಕ್ತಿ ಕೆಲವೊಬ್ಬರಿಗೆ ಇರುತ್ತದೆ, ಅಂತವರೆ ಪುಣ್ಯ ಪುರುಷರು, ಸಾಧಕರು, ಸಂತರು ಆಗಿ, ಮನುಷ್ಯ ಕುಲದ ಉದ್ಧಾರಕ್ಕಾಗಿ ಪರೋಪಕಾರಿ ಕೆಲಸವನ್ನು ಮಾಡಲು ಹುಟ್ಟಿ ಇತಿಹಾಸವನ್ನು ರಚಿಸುವಂತವರು ಆಗಿರುತ್ತಾರೆ, ಎಂದು ಸುರುಗೇಶ್ವರ ಸಂಸ್ಥಾನ ಮಠ ನೂಲ ಮಹಾರಾಷ್ಟ್ರದ ಗುರುಸಿದ್ದೇಶ್ವರ ಶಿವಾಚಾರ್ಯರು ಹೇಳಿದರು.
ಡಾ. ಮಲ್ಲಣ್ಣಪ್ಪ ಮಹಾಸ್ವಾಮಿಗಳ 63ನೇ ಜನ್ಮದಿನೋತ್ಸವ ಹಾಗೂ ದತ್ತಾತ್ರೇಯ ವಿಶ್ವಕರ್ಮ ಸಾಹಿತಿ ರಚಿಸಿದ ಜ್ಞಾನಯೋಗಿ ಪೊಜ್ಯರ ಪರಿಚಯ ಗ್ರಂಥ ಲೋಕಾರ್ಪಣೆ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ವಿಧಾನ ಪರಿಷತ್ತು ಸದಸ್ಯರಾದ ಪುಟ್ಟಣ್ಣಪ್ಪ ಕಮಕೂರು ಮಾತನಾಡಿ, ಮಲ್ಲಣಪ್ಪ ಮಹಾಸ್ವಾಮಿಗಳು ಕೇವಲ ಕೋಳಿ ಸಮಾಜಕ್ಕೆ ಸೀಮಿತವಾಗದೆ ಅನ್ಯ ಜಾತಿಗಳಿಗೆ ಧರ್ಮಗಳಿಗೆ ಒಗ್ಗೂಡಿಸುವ ಭಾವೈಕ್ಯತೆಯ ಸಂಕೇತದ ಹರಿಕಾರಕರಾದ ಪೂಜ್ಯರಿಗೆ ನೂರಾರು ಕಾಲ ಆಯಸ್ಸು ನೀಡಲಿ ಎಂದು ಹಾರೈಸಿದರು.
ಮಾಜಿ ಕೃಷ್ಣಾ ಕಾಡಾ ಅಧ್ಯಕ್ಷರಾದ ಶರಣಪ್ಪ ತಳವಾರ ಮಾತನಾಡಿ, ರಾಜಕೀಯ ಹಿಡಿದು ವಿವಿಧ ಕ್ಷೇತ್ರದಲ್ಲಿ ಅನೇಕ ಜನರು ಸಾಧನೆ ಮಾಡಲು ಮಹಾಸ್ವಾಮಿಗಳ ಆಶೀರ್ವಾದ ಮಾಡಿದ್ದಾರೆ, ಅವರಲ್ಲಿ ನಾನೊಬ್ಬ ಎಂದು ಹೇಳಿದಳು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶಿವಾನಂದ ಮಹಾಸ್ವಾಮಿಗಳು ವಿರಕ್ತಮಠ ಸೊನ್ನ, ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಕಂಬಳೇಶ್ವರ ಮಠ ಚಿತ್ತಾಪುರ, ಸಿದ್ದಲಿಂಗ ಮಹಾಸ್ವಾಮಿಗಳು ಸಿದ್ದಲಿಂಗೇಶ್ವರ ಸಂಸ್ಥಾನ ವಿರಕ್ತಮಠ ಪೇಠಶಿರೂರ, ಚನ್ನರುದ್ರಮುನಿ ಶಿವಾಚಾರ್ಯರು ಶ್ರೀ ಗುರು ರುದ್ರಮುನೇಶ್ವರ ಹಿರೇಮಠ ಸೂಗೂರು ಕೆ ಸ್ವಾಮಿಗಳು ವಹಿಸಿದರು.
ವೇದಿಕೆ ಮೇಲೆ ಸೌರಭ ಸ್ವಾಮಿಜಿಗಳು, ಶರಣಪ್ಪ ತಳವಾರ, ರಾಜು ಮೇಸ್ತ್ರಿ, ನಿಂಗಣಗೌಡ ಮಾಲಿಪಾಟೀಲ, ನಿಂಗಣ್ಣ ಹುಡುಗೋಳ್ಕರ್, ಶಂಕರ ತಳವಾರ, ಮಹದೇವ ಬಂದಳ್ಳಿ, ದೇವೇಂದ್ರ ತಳವಾರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನೇಕರಿಗೆ ಸೇವೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪೊಲೀಸ್ ಪಾಟೀಲ್ ಪರಿವಾರ ಬಿಬ್ಬಳ್ಳಿಯಿಂದ ಮಹಾಸ್ವಾಮಿಗಳ ತುಲಾಭಾರ ಸೇವೆ ಮಾಡಿದರು, ಮಲ್ಲಮ್ಮ ವೀರಣ್ಣ ಮದ್ರಿಕಿ ತೊನುಸನಹಳ್ಳಿ ಅವರು ಮಹಾಪ್ರಸಾದ ಸೇವೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೀಮಣ್ಣ ಸಾಲಿ ವಹಿಸಿದ್ದರು, ಭಗವಂತರಾಯ ಬೆಣ್ಣೂರು ಸ್ವಾಗತಿಸಿದರು, ಈಶ್ವರ ಮುಗುಳನಾಗಾಂವ ನಿರೂಪಿಸಿದರು, ಬಸವರಾಜ ಮಾಸ್ಟರ್ ಹೇರೂರು ವಂದಿಸಿದರು.
ಶಹಾಬಾದ ಸುದ್ದಿ ನಾಗರಾಜ್ ದಂಡಾವತಿ