ಮಳೆಯಿಂದ ಬೆಳೆ ಹಾನಿ ಕೂಡಲೇ ರೈತರಿಗೆ ರಾಜ್ಯ ಸರ್ಕಾರ ಪರಿಹಾರ ಧನ ವಿತರಿಸಬೇಕು ಭರತ್ ಎಮ್ ದೊರೆ ಅಗ್ರಹ...

ಮಳೆಯಿಂದ ಬೆಳೆ ಹಾನಿ ಕೂಡಲೇ ರೈತರಿಗೆ ರಾಜ್ಯ ಸರ್ಕಾರ ಪರಿಹಾರ ಧನ ವಿತರಿಸಬೇಕು ಭರತ್ ಎಮ್ ದೊರೆ ಅಗ್ರಹ...
ಜೈ ಕನ್ನಡಿಗರ ಸೇನೆ ತಾಲೂಕಾ ಸಮಿತಿಯ ವತಿಯಿಂದ ಕಲಬುರಗಿ ಜಿಲ್ಲೆಯ ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನಲ್ಲಿ ಮಳೆ ಹಾನಿಯಿಂದ ಬೆಳೆ ಹಾನಿಯಾಗಿ ರೈತರು ಬೆಳೆದಂತಹ ಎಲ್ಲಾ ಬೆಳೆಗಳು ಸಂಪೂರ್ಣ ಕುಳಿತು ಹೋಗಿವೆ ಹೀಗಾಗಿ
ಅವಳಿ ತಾಲೂಕುಗಳ ರೈತರು ಅತ್ಯಂತ ಸಂಕಷ್ಟಕ್ಕೆ ಸಿಲುಕಿದ್ದಾರೆ ಹಾಗಾಗಿ ಅವರ ನೆರವಿಗೆ ಕೂಡಲೇ ರಾಜ್ಯ ಸರ್ಕಾರದ ವತಿಯಿಂದ ಎಲ್ಲಾ ರೈತರಿಗೆ ಬೆಳೆ ನಷ್ಟ ಪರಿಹಾರವನ್ನು ಶೀಘ್ರದಲ್ಲೇ ರೈತರ ಖಾತೆಗೆ ಜಮಾ ಮಾಡಬೇಕೆಂದು ಯಡ್ರಾಮಿ ತಾಲೂಕಾ ದಂಡಾಧಿಕಾರಿಗಳ ಮುಖಾಂತರವಾಗಿ ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಪತ್ರವನ್ನು ನೀಡಲಾಯಿತು ಇದೇ ಸಂದರ್ಭದಲ್ಲಿ ಜೈ ಕನ್ನಡಿಗರ ಸೇನೆಯ ತಾಲೂಕಾ ಅಧ್ಯಕ್ಷರಾದ ಭರತ್ ಎಂ ದೊರೆ ,ಹಾಗು
ಗೌರವ ಸಲಹೆಗಾರರಾದ ಗಂಗಾಧರ್ ಎಸ್ ಕರಕಹಳ್ಳಿ , ಕಾರ್ಯದರ್ಶಿಗಳಾದ ಆನಂದ್ ದೊಡಮನಿ , ನಾಗು ಬಡಿಗೇರ್ ಯತ್ನಾಳ್ , ಮಲ್ಲಿಕಾರ್ಜುನ್ ಕೊಠಾರ್ ಇನ್ನಿತರರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು
ವರದಿ ಜಟ್ಟಪ್ಪ ಎಸ್ ಪೂಜಾರಿ