ಕುದ್ರೋಳಿ ಗಣೇಶ್ "ಮೈಂಡ್ ಮ್ಯಾಜಿಕ್" ಮಾತೃಶ್ರೀ ದಾಕ್ಷಾಯಿಣಿ ಅಪ್ಪ ಬಿತ್ತಿ ಪತ್ರ ಬಿಡುಗಡೆ

ಕುದ್ರೋಳಿ ಗಣೇಶ್ "ಮೈಂಡ್ ಮ್ಯಾಜಿಕ್" ಮಾತೃಶ್ರೀ ದಾಕ್ಷಾಯಿಣಿ ಅಪ್ಪ ಬಿತ್ತಿ ಪತ್ರ ಬಿಡುಗಡೆ

ಕುದ್ರೋಳಿ ಗಣೇಶ್ "ಮೈಂಡ್ ಮ್ಯಾಜಿಕ್" ಮಾತೃಶ್ರೀ ದಾಕ್ಷಾಯಿಣಿ ಅಪ್ಪ ಬಿತ್ತಿ ಪತ್ರ ಬಿಡುಗಡೆ

ಕಲಬುರಗಿ: ಅಂತಾರಾಷ್ಟ್ರೀಯ ಖ್ಯಾತಿಯ ಜಾದೂಗಾರ ಕುದ್ರೋಳಿ ಗಣೇಶ್ ಅವರು ಜಾದೂನಲ್ಲಿ ಅತ್ಯಂತ ವಿನೂತನವಾದ ಆವಿಷ್ಕಾರಗಳ "ಮೈಂಡ್ ಮ್ಯಾಜಿಕ್" ಪ್ರದರ್ಶನವನ್ನು ಜುಲೈ 6 ರಂದು ಭಾನುವಾರ ಸಾಯಂಕಾಲ 6 ಗಂಟೆಗೆ ಕಲಬುರಗಿಯ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಸ್ಯಾಕ್ ಸಭಾಂಗಣದಲ್ಲಿ ನಡೆಸಿಕೊಡಲಿದ್ದಾರೆ. ಇದರ ಪೋಸ್ಟರ್ ಅನ್ನು ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ಮಾತೋಶ್ರೀ ದಾಕ್ಷಾಯಿಣಿ ಅಪ್ಪ ಹಾಗೂ ಎಂಟನೇ ಪೀಠಾಧಿಪತಿಗಳಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಬಿಡುಗಡೆ ಮಾಡಿದರು.

   ಕಲಬುರಗಿಯ ಶ್ರೀ ಶರಣಬಸವೇಶ್ವರ ಸಂಸ್ಥಾನದಲ್ಲಿ ಜೂನ್ 30ರಂದು ನಡೆದ ಸರಳ ಸಮಾರಂಭದಲ್ಲಿ ಪೋಸ್ಟರ್ ಬಿಡುಗಡೆ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಸ್ಟ್ರೇಲಿಯ, ಕೊಲ್ಲಿ ರಾಷ್ಟ್ರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡ ಮೈಂಡ್ ಮ್ಯಾಜಿಕ್ ನ್ನು ಕಲಬುರಗಿಯಲ್ಲಿ ಪ್ರದರ್ಶನ ವ್ಯವಸ್ಥೆ ಮಾಡಿರುವುದು ಸಂತಸದ ಸಂಗತಿಯಾಗಿದೆ. ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಪ್ರೋತ್ಸಾಹ ನೀಡಿ ಜಗದ್ವಿಖ್ಯಾತ ಕಲಾವಿದನಿಗೆ ಈ ಭಾಗದ ಗೌರವ ಸಲ್ಲಿಸಬೇಕು ಎಂದು ಈ ಸಂದರ್ಭದಲ್ಲಿ ಮಾತೋಶ್ರೀ ದಾಕ್ಷಾಯಿಣಿ ಅಪ್ಪ ಕಾರ್ಯಕ್ರಮಕ್ಕೆ ಶುಭ ಕೋರಿದರು.

  ಕಲಬುರಗಿ ಜಿಲ್ಲಾ ದಕ್ಷಿಣ ಕನ್ನಡ ಸಂಘ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹೋಟೆಲ್, ಬೇಕರಿ ವಸತಿ ಗೃಹ ಮಾಲೀಕರ ಸಂಘ ಹಾಗೂ ನಾಲ್ಕು ಚಕ್ರ ಚಾರಿಟಬಲ್ ಟ್ರಸ್ಟ್ ನ ಜಂಟಿ ಸಹಯೋಗದಲ್ಲಿ ಮೈಂಡ್ ಮ್ಯಾಜಿಕ್ ಪ್ರದರ್ಶನ ಏರ್ಪಡಿಸಲಾಗಿದೆ. 

   ಅಂತಾರಾಷ್ಟ್ರೀಯ ಜಾದೂ ಗಾರ ಕುದ್ರೋಳಿ ಗಣೇಶ್ ಅವರನ್ನು ಸಂಸ್ಥಾನದ ವತಿಯಿಂದ ವಿಶೇಷವಾಗಿ ಶಾಲು ಹಾಗೂ ಸ್ಮರಣಿಕೆ ನೀಡಿ ವಿಶೇಷವಾಗಿ ಗೌರವಿಸಲಾಯಿತು. ಸಂಸ್ಥಾನದ ಡಾ. ಅಲ್ಲಮ ಪ್ರಭು ದೇಶಮುಖ್, ದಕ್ಷಿಣ ಕನ್ನಡ ಸಂಘದ ಗೌರವಾಧ್ಯಕ್ಷರಾದ ಪ್ರಶಾಂತ ಶೆಟ್ಟಿ ಇನ್ನಾ, ಮಾಜಿ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ, ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್ ನ ಮುಖ್ಯಸ್ಥರಾದ ಮಾಲಾ ಕಣ್ಣಿ, ಹೋಟೆಲ್ ಉದ್ಯಮಿ ಶರಣಬಸಪ್ಪ ಪಾಟೀಲ್ ಸಪ್ತಗಿರಿ, ಅನಿಲ್ ಸಿಂಧಗಿ ಮತ್ತಿತರರು ಹಾಜರಿದ್ದರು.