ಜಯನಗರ ಶಿವಮಂದಿರದಲ್ಲಿ ಮಹಿಳಾ ದಿನಾಚರಣೆ ಆಚರಣೆ.

ಜಯನಗರ ಶಿವಮಂದಿರದಲ್ಲಿ ಮಹಿಳಾ ದಿನಾಚರಣೆ ಆಚರಣೆ.

 ಜಯನಗರ ಶಿವಮಂದಿರದಲ್ಲಿ ಮಹಿಳಾ ದಿನಾಚರಣೆ ಆಚರಣೆ. 

             ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಭಾನುವಾರ ಸಂಜೆ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಮಹಿಳಾ ಘಟಕದ ವತಿಯಿಂದ ಇಂದು ಶಿವಮಂದಿರದಲ್ಲಿ ಮಹಿಳಾ ದಿನಾಚರಣೆಯನ್ನು ಕೆಕ್ ಕತ್ತರಿಸುವ ಮೂಲಕ ಅದ್ದೂರಿಯಾಗಿ ಆಚರಿಸಲಾಯಿತು.ನಂತರ ವಿವಿಧ ಕಲಾ ಹಾಗೂ ನೃತ್ಯ ಸ್ಪರ್ಧೆ ಎರ್ಪಡಿಸಲಾಯಿತು.ಇದರಲ್ಲಿ ಅನೇಕ ಮಹಿಳೆಯರು ಭಾಗವಹಿಸಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದರು.ದಿನಾಚರಣೆಯ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಮಹಿಳಾ ಕಾರ್ಯದರ್ಶಿ ಅನುರಾಧಾ ಕುಮಾರಸ್ವಾಮಿ ಒಬ್ಬ ಮಹಿಳೆ ಪುರುಷರಿಗೆ ಸಮಾನವಾಗಿ ನಿಲ್ಲಬಲ್ಲಳು.ಇತಿಹಾಸ ನೋಡಿದಾಗ ನಮ್ನ ಭರತ ಭೂಮಿಯಲ್ಲಿ ವೀರ ವನಿತೆಯರು ತಮ್ಮ ದಿಟ್ಟತನದ ಸಾಹಸ ಇಡೀ ಜಗತ್ತಿಗೆ ತೋರಿಸಿದವರು.ಹೆಣ್ಣು ಅಬಲೆಯಲ್ಲ,ಸಬಲಳು ಎಂದು ಹೇಳಿದರು.ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ವಾಲಿ,ಪದಾಧಿಕಾರಿಗಳಾದ ಸುಷ್ಮಾ ಮಾಗಿ,ಸುರೇಖಾ ಬಾಲಕೊಂದೆ,ಲತಾ ತುಪ್ಪದ,ಶೈಲಜಾ ಬೊಮ್ಮಣ,ಗಂಗಾ ಅನ್ವರಕರ ಸದಸ್ಯರಾದ ವಿಜಯಲಕ್ಷೀ ಪುರ್ಮಾ,ಪಾರ್ವತಿ ಶೆಟ್ಟಿ,ಪಾರ್ವತಿ ರಠಕಲ,ಗೀತಾ ಹುಡುಗಿ,ಸರೋಜಾ,ಗೀತಾ ಸಿರಗಾಪೂರ,ನಿಲೋಚನಾ ಬಿಡಪ್ ಸೇರಿದಂತೆ ನೂರಾರು ಮಹಿಳೆಯರು ಉಪಸ್ಥಿತರಿದ್ದರು.