ಓಂಕಾರ್ ಪಾಟೀಲ್ ಅವರಿಗೆ 2026 ನೇ ಸಾಲಿನ ಗಣರಾಜ್ಯೋತ್ಸವ ಪ್ರಶಸ್ತಿ
ಓಂಕಾರ್ ಪಾಟೀಲ್ ಅವರಿಗೆ 2026 ನೇ ಸಾಲಿನ ಗಣರಾಜ್ಯೋತ್ಸವ ಪ್ರಶಸ್ತಿ
ಬೀದರ್ ತಾಲೂಕಿನ ಕಂಗನಕೋಟೆ ಗ್ರಾಮದ ಸಾಹಿತಿಗಳಾದ ಓಂಕಾರ್ ಪಾಟೀಲ್ ಅವರಿಗೆ 2026 ನೇ ಸಾಲಿನ ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ನೆಹರು ಸ್ಟೇಡಿಯಂ ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಈಶ್ವರ ಖಂಡ್ರೆ ಸರ್ಕಾರದ ವತಿಯಿಂದ ಸನ್ಮಾನ ಮಾಡಿ ಗೌರವಿಸಿದರು.
ಸಾಹಿತಿಗಳಾದ ಓಂಕಾರ್ ಪಾಟೀಲ್ ಅವರು ಓಂಕಾರ್ ಲಹರಿ ಶೀರ್ಷಿಕೆ ಅಡಿಯಲ್ಲಿ ಜಿಲ್ಲೆಯ ವಿವಿಧ ಸಾಹಿತಿಗಳ ಗಣನೀಯ ಸೇವೆಯನ್ನು ಕುರಿತು ಲೇಖನವನ್ನು ಬರೆಯುವುದು, ಪತ್ರಿಕೆಗಳಲ್ಲಿ ಕವನ ಕಥೆಗಳನ್ನು ಬರೆಯುವುದರೊಂದಿಗೆ ಕನ್ನಡ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ ಇವರ ಸೇವೆಯನ್ನು ಗುರುತಿಸಿ ಜಿಲ್ಲಾಡಳಿತವು ಇವರಿಗೆ ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿರುವುದಕ್ಕೆ ಹಿರಿಯ ಸಾಹಿತಿಗಳಾದ ಡಾಕ್ಟರ್ ಎಂಜಿ ದೇಶಪಾಂಡೆ, ವೀರಭದ್ರಪ್ಪ ಉಪ್ಪಿನ್, ಅರವಿಂದ ಕುಲಕರ್ಣಿ, ಜಗದೇವಿ ಮೈ ನಾಳೆ, ಸಿದ್ಧಾರೂಢ ಬಾಲ್ಕೆ, ವೀರಶೆಟ್ಟಿ ಪಾಟೀಲ್, ಡಾ ಸಿ ಆನಂದ್ ರಾವ್ ಮುಂತಾದವರು ಹರ್ಷ ವ್ಯಕ್ತಪಡಿಸಿದರು.
ವರದಿ: ಮಛಂದ್ರನಾಥ ಕಾಂಬಳೆ
