ಡೆಲ್ಲಿ ಪಬ್ಲಿಕ್ ಸ್ಕೂಲ್ ಬೆಂಗಳೂರು ಉತ್ತರ ವಲಯ CBSE (ಗ್ರೇಡ್ 12) 2024–25 ರ ಫಲಿತಾಂಶ

ಡೆಲ್ಲಿ ಪಬ್ಲಿಕ್ ಸ್ಕೂಲ್ ಬೆಂಗಳೂರು ಉತ್ತರ ವಲಯ
CBSE (ಗ್ರೇಡ್ 12) 2024–25 ರ ಫಲಿತಾಂಶ
CBSE (ಗ್ರೇಡ್ 12) 2024–25 ರ ಫಲಿತಾಂಶದಲ್ಲಿ ನಮ್ಮ ಶಾಲೆಯ ಪ್ರತಿಭಾಶಾಲಿ ವಿದ್ಯಾರ್ಥಿಗಳು ತೋರಿದ ಅದ್ಭುತ ಸಾಧನೆಯೊಂದಿಗೆ ಡೆಲ್ಲಿ ಪಬ್ಲಿಕ್ ಸ್ಕೂಲ್, ಬೆಂಗಳೂರು ಉತ್ತರವು ಉತ್ತಮ ಸಾಧನೆಯ ಮೂಲಕ ಮತ್ತೊಂದು ಯಶೋಗಾಥೆಯನ್ನು ಬರೆಯುವಲ್ಲಿ ಯಶಸ್ವಿಯಾಗಿದೆ. ಈ ಸಾಧನೆಯು ವಿದ್ಯಾರ್ಥಿಗಳ ದೃಢಚಿತ್ತ, ಶ್ರದ್ಧೆ ಮತ್ತು ನಿರಂತರ ಪರಿಶ್ರಮದ ಪ್ರತಿಫಲವಾಗಿದೆ. ಸವಾಲುಗಳಿಂದ ಕೂಡಿದ ಈ ಕಾಲಘಟ್ಟದ ಮಧ್ಯೆಯೂ, ನಮ್ಮ ವಿದ್ಯಾರ್ಥಿಗಳು ತೋರಿದ ಮಾನಸಿಕ ಧೈರ್ಯ ಮತ್ತು ಬದ್ಧತೆ ಇಂದು ಪ್ರತಿಫಲ ನೀಡಿದೆ. ಈ ಯಶಸ್ಸು ತಮ್ಮ ದಿಟ್ಟ ನಿಲುವು ಮತ್ತು ಅಚಲ ಸಂಕಲ್ಪದಿಂದ ಸಾಧ್ಯವಾಯಿತು. ಯಶಸ್ಸಿನ ಮತ್ತೊಂದು ಮೈಲಿಗಲ್ಲಾಗಿ , ಶಾಲೆಯು ತಮ್ಮ ಸಾಧನೆಗಳ ಬಗ್ಗೆ ಅತ್ಯಂತ ಹೆಮ್ಮೆಪಡುವುದರ ಜೊತೆಗೆ, ಅವರ ಭವಿಷ್ಯದ ಎಲ್ಲ ಪ್ರಯತ್ನಗಳಲ್ಲಿ ಅವರು ಇನ್ನಷ್ಟು ಸಾಧನೆ ಮಾಡಲಿ ಎಂದು ಹಾರೈಸುತ್ತದೆ.
ಒಟ್ಟುವಿದ್ಯಾರ್ಥಿಗಳ ಸಂಖ್ಯೆ: 371
ಶಾಲೆಯ ಸರಾಸರಿ ಶೇಕಡಾವಾರು: 85.06
ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು: 328
ಮಾನವಿಕ ಶಾಖೆ (Humanities) ಸರಾಸರಿ: 87.5
ವಾಣಿಜ್ಯ ಶಾಖೆ (Commerce )ಸರಾಸರಿ: 85.57
ವಿಜ್ಞಾನ ಶಾಖೆ (Science ) ಸರಾಸರಿ: 84.00
ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು
ಮಾನವಿಕ ಶಾಖೆ (Humanities)
ಕೋಪಲ್ ಮುಖರ್ಜಿ - 98.4%
ವಾಣಿಜ್ಯ ಶಾಖೆ (Commerce )
ಅಭಿನವ್ ಗೋಯಲ್ - 98.4%
ವಿಜ್ಞಾನ ಶಾಖೆ (Science )
ಇಮಾದ್ ಅಹಮದ್ – 97.8%