ಸೇಡಂನ ಶಿವಶಂಕರೇಶ್ವರ ಮಠದ ಸಾಂಸ್ಕೃತಿಕ ಭವನಕ್ಕೆ 10 ಲಕ್ಷ ನೀಡುವುದಾಗಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಘೋಷಣೆ

ಇಂದು ಸೇಡಂ ಪಟ್ಟಣದ ಪುರಾತನ ಮಠವಾದ ಶ್ರೀ ಶಿವಶಂಕರೇಶ್ವರ ಮಠದ ಷ.ಬ್ರ.ಶ್ರೀ ಶಿವಶಂಕರ ಶಿವಾಚಾರ್ಯ ಪಟ್ಟಾಧಿಕಾರದ ಸುವರ್ಣ ಮಹೋತ್ಸವ ಹಾಗೂ ಸದ್ಗುರು ಶ್ರೀ ಶಿವಶಂಕರೇಶ್ವರ ಮಹಾಪುರಾಣ ಕಾರ್ಯಕ್ರಮದಲ್ಲಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲರು ಭಾಗಿಯಾಗಿ, ಮಾತನಾಡಿದರು.
ಬಸವಾದಿ ಶರಣರು 12 ನೇ ಶತಮಾನದಲ್ಲಿ ವಚನಗಳ ಮೂಲಕ ಸಮಾನತೆಯನ್ನು ಸಾರಿದ್ದಾರೆ. ನಾಡಿನ ಮಠಗಳು, ಅದರಲ್ಲೂ ವೀರಶೈವ ಲಿಂಗಾಯತ ಮಠಗಳು ಅನ್ನ, ಅಕ್ಷರ ದಾಸೋಹಗಳ ಮೂಲಕ ಸಮಾಜವನ್ನು ಕಟ್ಟಲಾಗಿದೆ ಎಂದು ಹೇಳಿದರು.
ಶ್ರೀ ಶಿವಶಂಕರೇಶ್ವರ ಮಠದ ಶ್ರೀ ಶಿವಶಂಕರ ಸ್ವಾಮಿಗಳ ಮಾರ್ಗದರ್ಶನದಲ್ಲಿ ಅನೇಕ ಕಾರ್ಯಕ್ರಮಗಳು, ಲಿಂಗಪೂಜೆ, ಪಾದಪೂಜೆ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳು ಜರುಗುತ್ತಿರುವುದು ಸಂತಸದ ಸಂಗತಿಯಗಿದೆ ಎಂದು ಹರ್ಷ ವ್ಯಕ್ತಪಡಿಸಿದ ಸಚಿವರು ಕಾರ್ಯಕ್ರಮ ವೇದಿಕೆಯ ಮೇಲೆ ಮಠದ ಅಭಿವೃದ್ಧಿ ಕಾರ್ಯಕ್ಕೆ 10 ಲಕ್ಷ ನೀಡುವುದಾಗಿ ಘೋಷಿಸಿದರು.
ವೇದಿಕೆಯ ಮೇಲೆ ಅನೇಕ ಗಣ್ಯರು, ಶ್ರೀಗಳು, ಜನಪ್ರತಿನಿಧಿಗಳು, ಸೇಡಂ ನಾಗರಿಕ ಬಂಧುಗಳು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.