ಮನುಷ್ಯನ ಜೀವನಾಡಿ ಈ ಮರಗಳು : ಲರ್ನಿಂಗ್ ಲಿಂಕ್ಸ್ ಪೌಂಡೇಶನ್

ಮನುಷ್ಯನ ಜೀವನಾಡಿ ಈ ಮರಗಳು : ಲರ್ನಿಂಗ್ ಲಿಂಕ್ಸ್ ಪೌಂಡೇಶನ್

ಮನುಷ್ಯನ ಜೀವನಾಡಿ ಈ ಮರಗಳು : ಲರ್ನಿಂಗ್ ಲಿಂಕ್ಸ್ ಪೌಂಡೇಶನ್ 

ನಾಲವಾರ : ಸಮೀಪದ ತರಕಸಪೇಟೆ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ದಿನಾಂಕ : 30-06-2025 ರಂದು ಎಲ್. ಎಲ್. ಎಫ್ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. 

ಹೇಳಿಕೆ : ನಾವು ಪರಿಸರವನ್ನು ನಾಶ ಮಾಡಿದರೆ ನಮಗೆ ಸಮಾಜವೇ ಉಳಿಯುವುದಿಲ್ಲ ಪರಿಸರವು ಯಾರೋ ಆಸ್ತಿಅಲ್ಲ ಅದನ್ನು ಪರಿಸರವನ್ನು ರಕ್ಷಿಸುವುದೇ ಪ್ರತಿಯೊಬ್ಬ ಮಾನವನ ಜವಾಬ್ದಾರಿಯಾಗಿದೆ : ಸಂಪನ್ಮೂಲ ಶಿಕ್ಷಕ ಶಶಿಕುಮಾರ ಬಡಿಗೇರ

ಕಾಡು ಬೆಳೆಸಿ ನಾಡು ಉಳಿಸಿ ಎಂಬ ಮಾತಿನಂತೆ ನಮ್ಮ ಶಾಲೆಯ ಆವರಣದಲ್ಲಿ ಎಲ್ ಎಲ್ ಎಫ್ ಸಂಸ್ಥೆಯ ಸಹಯೋಗದೊಂದಿಗೆ ಪರಿಸರ ದಿನವನ್ನು ಆಚರಿಸಲಾಯಿತು ಆಧುನಿಕ ಜಗತ್ತಿನಲ್ಲಿ ಪರಿಸರ ಮಾಲಿನ್ಯವಾಗುತ್ತಿರುವುದು ತಮ್ಮೆಲ್ಲರಿಗೆ ತಿಳಿದಿರುವಂತ ಸಂಗತಿ ಇಂದಿನ ದಿನ ಪರಿಸರ ರಕ್ಷಿಸದಿದ್ದರೆ ಮುಂದಿನ ದಿನಗಳಲ್ಲಿ ಬಹಳ ಗಂಡಾಂತರ ಕಾದಿದೆ ಪರಿಸರ ಕಾಳಜಿ ಎಲ್ಲರ ಕರ್ತವ್ಯವಾಗಿದೆ.ತರಕಸಪೇಠ ಶ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದಂತ ಶ್ರೀ ಸೋಮಶೇಖರ್ ಅವರು ಮನೆಗೊಂದು ಮರ ಊರಿಗೊಂದು ವನ ಎಂಬಂತೆ ಪರಿಸರ ಕಾಳಜಿಯ ಅಂಶಗಳು ತಿಳಿಸಿದರು.. ಇಂದಿನ ಸಸಿ ಮುಂದಒಂದಿನ ಹೇಮ್ಮರವಾಗಿ ಬೆಳೆಯಲಿದೆ. ಈ ಒಂದು ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳು ಶ್ರೀ ರಾಜಕುಮಾರ ಹಾಗೂ ಸಹ ಶಿಕ್ಷಕರು ಶ್ರೀ ಮಂಜುನಾಥ ಪಾಟಿಲ್ ಹಾಗೂ sdmc ಅಧ್ಯಕ್ಷರು ರಶಿದ್ ಪಟೇಲ್ ಹಾಗೂ ಮೈಮುದ್ ಆಲಮ್, ಊರಿನ ಶಿಕ್ಷಣ ಪ್ರೇಮಿಗಳಾದ ಶ್ರೀ ಶರಣಯ್ಯ ಸ್ವಾಮಿ ಹಾಗೂ ಭಿಮಾಶಂಕರ್ ಮತ್ತು ಶಾಲೆಯ ಅ.ಶಿಕ್ಷರು ಹಾಗೂ ಎಲ್ ಎಲ್ ಎಫ್ ಸಂಸ್ಥೆಯ ಹಿರಿಯ ಸಂಪನ್ಮೂಲ ಶಿಕ್ಷಕರಾದಂತಹ ಶ್ರೀ ಚಂದ್ರು ಮುಂದಿನಮನಿ ಹಾಗೂ ಶ್ರೀ ಶಿವಾನಂದ ಶಾಲೆಯ ಸಂಪನ್ಮೂಲ ಶಿಕ್ಷಕರಾದ ಶಶಿಕುಮಾರ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು..