ಕಮಲನಗರದಲ್ಲಿಂದು ಕಸಾಪದಿಂದ ಸೌಂದರ್ಯ ಮೀಮಾಂಸೆ ಉಪನ್ಯಾಸ
ಪ್ರಶಾಂತ ಮಠಪತಿ, ಕಮಲನಗರ ಕಸಾಪ, ಅಧ್ಯಕ್ಷರು.
ಕಮಲನಗರದಲ್ಲಿಂದು ಕಸಾಪದಿಂದ ಸೌಂದರ್ಯ ಮೀಮಾಂಸೆ ಉಪನ್ಯಾಸ
ಕಮಲನಗರ: ಜಿ.ಎಸ್ ಶಿವರುದ್ರಪ್ಪ ಅವರ ಕನ್ನಡ ಸಾಹಿತ್ಯದಲ್ಲಿ ಸೌದಂರ್ಯ ಮೀಮಾಂಸೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ-12 ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ಕಮಲನಗರ ತಾಲ್ಲೂಕು ಘಟಕ ಅಧ್ಯಕ್ಷ ಪ್ರಶಾಂತ ಮಠಪತಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.
ಪಟ್ಟಣದ ಡಾ. ಚನ್ನಬಸವ ಪಟ್ಟದ್ದೇವರು ಪ್ರೌಢ ಶಾಲೆ ಸಭಾಂಗಣದಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ ಬೀದರ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಕಮಲನಗರ ಘಟಕ ಸಹಯೋಗದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಸಾನಿಧ್ಯ ಅನುಭವ ಮಂಟಪ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು, ನೇತೃತ್ವ ಗುರುಬಸವ ಪಟ್ಟದ್ದೇವರು, ತಹಶೀಲ್ದಾರ್ ಅಮಿತಕುಮಾರ ಕುಲಕರ್ಣಿ, ಅಧ್ಯಕ್ಷತೆ ಚನ್ನಬಸವ ಘಾಳೆ, ಕಸಾಪ ಅಧ್ಯಕ್ಷ ಕಾಸಪ ಅಧ್ಯಕ್ಷ ಪ್ರಶಾಂತ ಮಠಪತಿ ಪ್ರಾಸ್ತವಿಕವಾಗಿ ಮಾತನಾಡಲಿದ್ದಾರೆ.
ಡಾ, ರಮೇಶ ಹೆಚ್ ಮೂಲಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿ ಇಒ ಹಣಮಂತರಾವ ಕೌಟಗೆ, ಸಿಪಿಐ ಶ್ರೀಕಾಂತ ಅಲ್ಲಾಪುರೆ, ಗೌರವ ಅಧ್ಯಕ್ಷರು ಎಸ್.ಎನ್.ಶಿವಣಕರ್, ಉಪಸ್ಥಿತಿ ಡಾ. ಚಂದ್ರಕಲಾ ಬಿದರಿ, ಜಿಲ್ಲಾ ಸಂಚಾಲಕಿ ಡಾ.ಮುಕ್ತುಂಬಿ ಎಂ, ವಹಿಸಲಿದ್ದಾರೆ. ಮಡಿವಾಳಪ್ಪ ಮಹಾಜನ ನಿರೂಪಿಸಲಿದ್ದಾರೆ ಎಂದು ಪ್ರಕಟಣೆಗೆ ತಿಳಿಸಿದ್ದಾರೆ.
ಹೀಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರು, ಸಾಹಿತಿಗಳು, ಕನ್ನಡ ಸಹೃದಯಿ ಮನಸ್ಸುಗಳಲ್ಲಿ ಸವಿನಯ ಕೋರಿಕೆ ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.
