ಭಾರತ ಮಹಿಳಾ ಕ್ರಿಕೆಟ್ ಚಾಂಪಿಯನ್ಸ್ -ಕಲಬುರಗಿಯಲ್ಲಿ ಮಹಿಳಾ ವಿಶ್ವಕಪ್ ಜಯೋತ್ಸವ
ಭಾರತ ಮಹಿಳಾ ಕ್ರಿಕೆಟ್ ಚಾಂಪಿಯನ್ಸ್ -ಕಲಬುರಗಿಯಲ್ಲಿ ಮಹಿಳಾ ವಿಶ್ವಕಪ್ ಜಯೋತ್ಸವ
ಕಲಬುರಗಿ: ಚೊಚ್ಚಲ ಮಹಿಳಾ ವಿಶ್ವಕಪ್ ಕ್ರಿಕೆಟ್ ಸ್ಪರ್ಧೆಯಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ವಿಶ್ವ ಚಾಂಪಿಯನ್ ಪಟ್ಟ ಕೈಸೇರಿಸಿಕೊಂಡಿರುವ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತೀಯ ತಂಡಕ್ಕೆ ನಗರದಲ್ಲಿ ಹೃತ್ಪೂರ್ವಕ ಅಭಿನಂದನೆಗಳು ವ್ಯಕ್ತವಾಗಿವೆ.
ಈ ಐತಿಹಾಸಿಕ ಸಾಧನೆಯ ಸಂಭ್ರಮದ ಅಂಗವಾಗಿ ಕಲಬುರಗಿಯ ನಾಲ್ಕುಚಕ್ರ ತಂಡದ ವತಿಯಿಂದ ಎಸ್.ವಿ.ಪಿ ವೃತ್ತದಲ್ಲಿ ಮಹಿಳಾ ಕ್ರಿಕೆಟ್ ತಂಡದ ಜಯೋತ್ಸವವನ್ನು ಹಮ್ಮಿಕೊಳ್ಳಲಾಯಿತು. ತಂಡದ ವಿಜಯದ ಖುಷಿಯಲ್ಲಿ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ, “ಭಾರತ ಮಹಿಳಾ ಚಾಂಪಿಯನ್ಸ್” ಎಂಬ ಘೋಷಣೆಗಳ ಮಧ್ಯೆ ಉತ್ಸಾಹಭರಿತ ಸಂಭ್ರಮ ನಡೆಯಿತು ಮತ್ತು ಸಿಹಿ ಹಂಚಲಾಯಿತು.
ಈ ಸಂದರ್ಭದಲ್ಲಿ ನಾಲ್ಕುಚಕ್ರ ತಂಡದ ಮುಖ್ಯಸ್ಥರು ಹಾಗೂ ಸದಸ್ಯರಾದ ಮಾಲಾ ಕಣ್ಣಿ, ಜ್ಯೋತಿ ಮರಗೊಳ್, ಸುಮಂಗಲಾ ಚಕ್ರವರ್ತಿ, ಅಂಬುಜಾ ಪ್ರಶಾಂತ್, ಶಿಲಾ ಕಲಬುರಗಿ, ಜಯಶ್ರಿ ಜೈನ್, ಸ್ವಾತಿ ಮಹಾಗಾವ್, ಅಮರ್ಜಾ ದೇಶಪಾಂಡೆ, ನೇಹಾ, ವಿನೋದ್ ಕುಮಾರ ಜೇನವೆರಿ, ಅನಿಲ್ ಬಿದನೂರ್, ಶಿವಲಿಂಗಯ್ಯ ಸ್ವಾಮಿ ಮಠಪತಿ, ವೃಷಭ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ, ಮಾತೆ ದುಗ್ಗಳೆ ಮಹಿಳಾ ಬಳಗವೂ ಕೂಡಾ ಭಾರತೀಯ ಮಹಿಳಾ ಕ್ರಿಕೆಟ್ ತಂಡ, ಇತಿಹಾಸ ಸೃಷ್ಟಿಸಿದ ಈ ಸಾಧನೆಗೆ ನಗರದ ಎಲ್ಲಾ ಕ್ರೀಡಾಭಿಮಾನಿಗಳು ಹಾಗೂ ನಾಗರಿಕರು ಹೆಮ್ಮೆ ವ್ಯಕ್ತಪಡಿಸಿದರು.
