"ಭರತನಾಟ್ಯ ರಂಗಪ್ರವೇಶ: ಹೆಜ್ಜೆಗೂ ನಾದವಿದೆ, ನಾದಕ್ಕೂ ಭಾವವಿದೆ"

"ಭರತನಾಟ್ಯ ರಂಗಪ್ರವೇಶ: ಹೆಜ್ಜೆಗೂ ನಾದವಿದೆ, ನಾದಕ್ಕೂ ಭಾವವಿದೆ"
ವಿಟ್ಲ: ಭರತನಾಟ್ಯದಲ್ಲಿ ತನ್ನದೇ ಆದ ಪ್ರಭಾವ ಮೂಡಿಸಿರುವ ಕು. ವಿದುಷಿ ಸಿಂಚನಲಕ್ಷ್ಮೀ ಕೊಡಂದೂರ್ ಅವರ ರಂಗಪ್ರವೇಶವು ಏಪ್ರಿಲ್ 24 ರಂದು ವಿಟ್ಲ ಗಾರ್ಡನ್ ಅಡಿಟೋರಿಯಂನಲ್ಲಿ ಸಂಜೆಯ 5 ಗಂಟೆಗೆ ಗಣ್ಯರ ಸಮ್ಮುಖದಲ್ಲಿ ಜರುಗಲಿದೆ.
ಪೆರ್ನಾಜೆ ಸಂದೇಶ**: "ಸುಮ್ಮನೆ ಕುಳಿತವರು ಹೆಜ್ಜೆ ಗುರುತನ್ನು ಮೂಡಿಸಲಾರರು. ಹೆಜ್ಜೆ ಗುರುತು ಮೂಡಿಸಬೇಕೆಂದರೆ ಎದ್ದು ನಡೆಯಲೇಬೇಕು!" ಎನ್ನುವ ವಾಕ್ಯದಂತೆ, ಸಿಂಚನಲಕ್ಷ್ಮೀ ಅವರು ತಮ್ಮ ಕಲಾತ್ಮಕ ಹೆಜ್ಜೆಗಳಿಂದ ಭರತನಾಟ್ಯ ರಂಗಭೂಮಿಗೆ ಪ್ರವೇಶಿಸುತ್ತಿದ್ದಾರೆ.
ಕಿರು ಪರಿಚಯ**: ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ನೃತ್ಯ ವಿಶ್ವವಿದ್ಯಾನಿಲಯದಿಂದ ನಡೆಸಿದ ವಿದ್ವತ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಇವರು, ನಾಟ್ಯ ವಿದ್ಯಾಲಯ (ರಿ) ಕುಂಬಳೆಯ ಡಾ. ವಿದ್ಯಾ ಲಕ್ಷ್ಮಿ ಅವರ ಶಿಷ್ಯೆ. ವಿದುಷಿ ವಿಟ್ಲ ಐಟಿಐ ಸುಪ್ರಜೀತ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಕೆ. ರಘುರಾಮ ಶಾಸ್ತ್ರಿ ಹಾಗೂ ಸಂಗೀತ ಶಿಕ್ಷಕಿ ಸವಿತಾ ಕೊಡಂದೂರ್ ದಂಪತಿಯ ಪುತ್ರಿ. ಈಗ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಡೇಟಾ ಸೈನ್ಸ್ ನಲ್ಲಿ BE ಫೈನಲ್ ಇಯರ್ ವಿದ್ಯಾರ್ಥಿನಿ.
ಇವರ ಪ್ರಗತಿಪಥದಲ್ಲಿ ಧರ್ಮಸ್ಥಳ, ಬೆಂಗಳೂರು ಅರಮನೆ ಮೈದಾನ, ಕುಕ್ಕೆ ಸುಬ್ರಹ್ಮಣ್ಯ, ಇತರೆ ದೇಗುಲಗಳಲ್ಲಿ ಹಲವು ಭರತನಾಟ್ಯ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದು ಇವರಿಗೆ ಪೆರ್ನಾಜೆ ಪ್ರಶಸ್ತಿ, ಗಡಿನಾಡ ದ್ವನಿ ಪ್ರಶಸ್ತಿ, ಸುಮ ಸೌರಭ ಮುಂತಾದ ಅನೇಕ ಪ್ರಶಸ್ತಿಗಳು ದೊರೆತಿವೆ.
ಕಾರ್ಯಕ್ರಮದ ವೈಶಿಷ್ಟ್ಯತೆ**: ವೇದಮೂರ್ತಿ ಅನಂತನಾರಾಯಣ ಭಟ್ ದೀಪ ಪ್ರಜ್ವಲನದಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ವಹಿಸುವವರು ಕರ್ನಾಟಕ ಕಲಾಶ್ರೀ ವಿದ್ವಾನ್ ಕೆ. ಚಂದ್ರಶೇಖರ್ ನಾವಡ. ಮುಖ್ಯ ಅತಿಥಿಗಳಾಗಿ ಡಾ. ವಿ ಆರ್ ನಾರಾಯಣ್ ಪ್ರಕಾಶ್ ಕಲ್ಲಿಕೋಟೆ, ದೀಪಕ್ ಕುಮಾರ್, ಡಾ. ಮಹೇಶ್ ಪ್ರಸನ್ನ, ಕೆ. ಕೃಷ್ಣಯ್ಯ, ಶ್ರೀ ಕೇಶವ ಆರ್.ವಿ ಉಪಸ್ಥಿತರಿರುತ್ತಾರೆ.
ಹಿಮ್ಮೇಳ ಕಲಾವಿದರು**: ನಟುವಾಂಗ - ಡಾ. ವಿದ್ಯಾ ಲಕ್ಷ್ಮಿ, ಗಾಯನ - ಸಿಜು ಕರುಣಾಕರನ್, ಮೃದಂಗ - ಸುರೇಶ್ ಬಾಬು, ಕೊಳಲು - ರಾಹುಲ್ ಪಯ್ಯನೂರ್, ಫ್ರೀಡಂ ಪ್ಯಾಡ್ - ಪ್ರಭಾಕರ್ ಮಲ್ಲ. ನಿರೂಪಣೆ - ಮಲ್ಲಿಕಾ ಸಿದ್ದ ಕಟ್ಟೆ.
ವಿಶೇಷ ಆಹ್ವಾನಿತರು: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾ ನಿರ್ದೇಶಕ, ಬರಹಗಾರ ಶ್ರೀ ಕುಮಾರ್ ಪೆರ್ನಾಜೆ.
ಇಂತಹ ಗ್ರಾಮೀಣ ಪ್ರದೇಶದ ಪ್ರತಿಭಾವಂತರನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ. ಹೆಜ್ಜೆಗೂ ನಾದವಿದೆ, ನಾದಕ್ಕೂ ಭಾವವಿದೆ ಎನ್ನುವಂತೆ, ಕಲೆಯ ಬೆಳಕಿಗೆ ಸಾಕ್ಷಿಯಾದ ಈ ನೃತ್ಯಪ್ರದರ್ಶನವನ್ನು ತಪ್ಪದೆ ಅನುಭವಿಸಬೇಕು.