ರಾಘವೇಂದ್ರ ಎಸ್ ಹೋಳ್ಕರ್ ಅವರಿಗೆ ಸನ್ಮಾನ

ರಾಘವೇಂದ್ರ ಎಸ್ ಹೋಳ್ಕರ್ ಅವರಿಗೆ  ಸನ್ಮಾನ

ರಾಘವೇಂದ್ರ ಎಸ್ ಹೋಳ್ಕರ್ ಅವರಿಗೆ ಸನ್ಮಾನ

ಕಲಬುರಗಿ: ಶರಣ್ ಡೋರ್ ಕಕ್ಕಯ್ಯ ದೇವಸ್ಥಾನಕ್ಕೆ ಕಲಬುರ್ಗಿಯ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ ದಲ್ಲಿ (ಸಿಬ್ಬಂದಿ ಮತ್ತು ಆಡಳಿತ ಇಲಾಖೆ) ಯೋಜನಾ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿರುವ ರಾಘವೇಂದ್ರ ಎಸ್ ಹೋಳ್ಕರ್ ಇವರು ಭೇಟಿ ನೀಡಿದರು.

ಕುಲಗುರು ಆರಾಧ್ಯ ದೈವ ಕಕ್ಕಯ್ಯನವರ ದರ್ಶನ ಪಡೆದು ಮಂದಿರ ನಿರ್ಮಾಣ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಮಂದಿರ ಅಭಿವೃದ್ಧಿ ಕಾರ್ಯ ಮುಂದುವರೆಸಲು ಉದಾರವಾದ ದೇಣಿಗೆಯನ್ನು ನೀಡಿ ಸಂತಸ ವ್ಯಕ್ತಪಡಿಸಿದರು. ಅವರ ಅಭಿಮಾನಕ್ಕೆ ಟ್ರಸ್ಟೀನ್ ವತಿಯಿಂದ ಶಾಲು ಹೊದಿಸಿ ಪುಷ್ಪ ಮಾಲೆಯೊಂದಿಗೆ ಸತ್ಕರಿಸಿ ಸನ್ಮಾನ ಮಾಡಲಾಯಿತು.  

ಈ ಶುಭ ಸಂದರ್ಭದಲ್ಲಿ ಅಧ್ಯಕ್ಷರಾದ ಸಾಯಬಣ್ಣ ಹೋಳ್ಕರ್, ಉಪಾಧ್ಯಕ್ಷರಾದ ಲಿಂಗೋಜಿ ಗಾಜರೆ, ಪ್ರಧಾನ ಕಾರ್ಯದರ್ಶಿಗಳಾದ ಮೋತಿಲಾಲ ಕಟಕೆ, ಖಜಾಂಚಿಗಳಾದ ರಮೇಶ ಗಾಯದನ್ ಕರ, ನಿರ್ದೇಶಕರಾದ ಬಾಬುರಾವ ಕಟಕೆ, ಅನಿಲಕುಮಾರ ಸಾವಳಕರ, ಅಶೋಕ ಖರಟಮಲ, ಅರ್ಜುನ ಸೋನಕವಡೆ, ಸುಭಾಷ್ ಚಂದ್ರ ತ್ರಿಮೂಖೆ, ದೇವಿಂದ್ರ ಧಡಕೆ, ಸೂರ್ಯಕಾಂತ ಸಾವಳಕರ, ಲಕ್ಷ್ಮಣ್ ಇಂಗಳೇ ಮುಂತಾದವರು ಭಾಗವಹಿಸಿದರು.