ಶ್ರೀ ಮಾಣಿಕ ಮಹಾಶಿವಯೋಗಿಗಳವರ 12ನೇ ವರ್ಷದ ಆರಾಧನಾ ಮಹೋತ್ಸವ.
ಶ್ರೀ ಮಾಣಿಕ ಮಹಾಶಿವಯೋಗಿಗಳವರ 12ನೇ ವರ್ಷದ ಆರಾಧನಾ ಮಹೋತ್ಸವ.
ನಾಗರಾಜ್ ದಂಡಾವತಿ ವರದಿ ಕಲಬುರಗಿ: ತಾಲೂಕಿನ ಸುಕ್ಷೇತ್ರ ಗಣಜಲಖೇಡ ಗ್ರಾಮದಲ್ಲಿ ಕಳೆದ ಸೋಮವಾರದಂದು ಶ್ರೀ ಜಗದ್ಗುರು ಮೌನೇಶ್ವರರ ವರಪುತ್ರರಾದ ಪೂಜ್ಯ.ಲಿಂ. ಶ್ರೀ ಮಾಣಿಕ ಮಹಾಶಿವಯೋಗಿಗಳವರ 12 ನೇ ವರ್ಷದ ಆರಾಧನಾ ಮಹೋತ್ಸವ ಪರಮ ಪೂಜ್ಯ ಶ್ರೀ ನಾಗೇಶ ಮಾಣಿಕ ಮುತ್ಯಾ ಅವರ ಸಾನಿಧ್ಯದಲ್ಲಿ ಅದ್ದೂರಿಯಾಗಿ ಜರುಗಿತು. ನಂತರ ಪೂಜ್ಯ.ಲಿಂ. ಶ್ರೀ ಮಾಣಿಕ ಮಹಾಶಿವಯೋಗಿಗಳವರ ಭಾವಚಿತ್ರದೊಂದಿಗೆ ಪಲ್ಲಕ್ಕಿ ಉತ್ಸವ ಉರಿನ ಪ್ರಮುಖ ಬಿದಿಗಳಲ್ಲಿ ಪುರವಂತರ ಸೇವೆಯೊಂದಿಗೆ, ವಾದ್ಯ ವೈಭವಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ಪರಮ ಪೂಜ್ಯಶ್ರೀ ನಾಗೇಶ ಮುತ್ಯಾ ಅವರ 'ತುಲಾಭಾರ' ಕಾರ್ಯಕ್ರಮ ಕೂಡ ಭಕ್ತರ ಸಮುಖದಲ್ಲಿ ಜರುಗಿತು. ಧರ್ಮ ಸಭೆ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ಕಲಾವಿದರಾದ ಯುಟುಬ್ ಖ್ಯಾತಿಯ ಯಶವಂತ ಬಡಿಗೇರ ಅವರು ಸಂಗೀತ ಸೇವೆಯನ್ನು ನಡೆಸಿಕೊಟ್ಟರು. ಇದೆ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮದ ಭಕ್ತರು ಸೇರಿದಂತೆ ಅನೇಕರು ಭಾಗಿಯಾಗಿದ್ದರು.
