ಪರಿಶಿಷ್ಟರ ಮೀಸಲಾತಿ ವರ್ಗೀಕರಿಸಬಾರದೆಂದು ಗೋರ ಸೇನಾ ಜಿಲ್ಲಾ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ
ಪರಿಶಿಷ್ಟರ ಮೀಸಲಾತಿ ವರ್ಗೀಕರಿಸಬಾರದೆಂದು ಗೋರ ಸೇನಾ ಜಿಲ್ಲಾ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ
ಕಲಬುರಗಿ: ರಾಜ್ಯ ಸರ್ಕಾರವು ಸರಿಯಾದ ಅಧ್ಯಯನ ಇಲ್ಲದೆ ಪರಿಶಿಷ್ಟರ ಮೀಸಲಾತಿಯನ್ನು ವರ್ಗೀಕರಿಸಬಾರದೆಂದು ಒತ್ತಾಯಿಸಿ ಗೋರ ಸೇನಾ ಜಿಲ್ಲಾ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಕರ್ನಾಟಕ ರಾಜ್ಯದ ಬಂಜಾರಾ ಸಮುದಾಯಕ್ಕೆ ಮಾರಕವಾಗಿ ಕಾಡುತ್ತಿರುವ ಒಳಮೀಸಲಾತಿ ಮತ್ತು ವರ್ಗೀಕರಣ ವನ್ನ ವಿರೋಧಿಸಿ, "ಗೋರ್ ಸೇನಾ' ರಾಷ್ಟ್ರೀಯ ಸಂಘಟನೆ, ಕರ್ನಾಟಕ ರಾಜ್ಯ ಘಟಕ, ಇಂದು ದಿನಾಂಕ 02 ಅಕ್ಟೋಬರ್ 2024 ರಂದು ಬೆಂಗಳೂರಿನ' ಫ್ರೀಡಂ ಪಾರ್ಕ್ ನಲ್ಲಿ. ರಾಷ್ಟ್ರಪಿತ ಮಹಾತ್ಮ ಗಾಂಧಿ ರವರ 155 ನೇ ಜಯಂತಿಯ ಸಂದರ್ಭದಲ್ಲಿ, ' ಬಾಬಾಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ರವರು ಸಂವಿಧಾನಾತ್ಮಕವಾಗಿ ನೀಡಿರುವ ಮೀಸಲಾತಿಯನ್ನು ಅಸಂವಿಧೀನಾತ್ಮಕ ಮತ್ತು ಅವೈಜ್ಞಾನಿಕ ವಾಗಿ ವರ್ಗೀಕರಣ ಮಾಡಬಾರದಾಗಿ ಸರ್ಕಾರವನ್ನು ಒತ್ತಾಯಿಸಿ ಒಂದು ದಿನದ ಸತ್ಯಾಗ್ರಹ ವನ್ನ ಸಾಂಕೇತಿಕವಾಗಿ ನೆರವೆರಿರುತ್ತದೆ.
ಸತ್ಯಾಗ್ರಹಕ್ಕೆ ಕರ್ನಾಟಕ ರಾಜ್ಯದ ಬೀದರ್, ಗುಲ್ಬರ್ಗ, ಯಾದಗಿರಿ, ಶಿವಮೊಗ್ಗ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ, ಹಾವೇರಿ, ಬಿಜಾಪುರ, ದಾವಣಗೆರೆ, ತುಮಕೂರು, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು ಮತ್ತು ಬೆಂಗಳೂರು ನಗರ ಜಿಲ್ಲೆಗಳಿಂದ ನೂರಾರು 'ಗೋರ್ ಸೇನಾ' ಕಾರ್ಯಕರ್ತರು ಮತ್ತು ಸ್ವಾಭಿಮಾನಿ ಗೋರ್ ಬಂಜಾರಾ ಜನಾಂಗದ ಹಿತ ಚಿಂತಕರು ಭಾಗವಹಿಸಿರುತ್ತಾರೆ.
ರಾಜ್ಯ ಸರ್ಕಾರವು ' ಸರಿಯಾದ ಅಧ್ಯಯನ ಇಲ್ಲದೆ ಪರಿಶಿಷ್ಟರ ಮೀಸಲಾತಿಯನ್ನು ವರ್ಗೀಕರಿಸಬಾರದೆಂದು ಒತ್ತಾಯಿಸಿ ಸತ್ಯಾಗ್ರಹವನ್ನು ಗೋರ್ ಸೇನಾ ಕರ್ಣಾಟ ರಾಜ್ಯ ಘಟಕ ಹಮ್ಮಿಕೊಂಡಿರುತ್ತದೆ. ಗೋರ್ ಸೇನಾ, ಕರ್ನಾಟಕ ರಾಜ್ಯ ಘಟಕ, ರಾಜ್ಯ ಸರ್ಕಾರವನ್ನು ಸತ್ಯಾಗ್ರಹದ ಮೂಲಕ ವಿನಂತಿಸಿಕೊ0ಡಿರುವುದೇನಂದರೆ,
ಮೀಸಲಾತಿ ವರ್ಗೀಕರಣ, ರಾಜ್ಯದಲ್ಲಿ ಇರುವ ಎಲ್ಲ ಸಮುದಾಯಗಳ ಸರಿಯಾದ ಅಧ್ಯಯನ ಇಲ್ಲದೆ ಮತ್ತು ವೈಜ್ಞಾನಿಕವಾಗಿ ದತ್ತಾಂಶವನ್ನು ಸಂಗ್ರಹಿಸದೆ ತರಾತುರಿಯಲ್ಲಿ ಮಾಡಕೂಡದು. ವೈಜ್ಞಾನಿಕವಾಗಿ ಸಂಗ್ರಹಿಸಿದ ದತ್ತಾಂಶದ ಆಧಾರದಲ್ಲೇ ಪರಿಶಿಷ್ಟರ ಹಿಂದುಳಿದಿರುವಿಕೆಯನ್ನು ಗುರುತಿಸಬೇಕು,
ಪರಿಶಿಷ್ಟರ ಜಾತಿಪಟ್ಟಿ ಯಲ್ಲಿರುವ ವಿವಿಧ ಸಮುದಾಯಗಳ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ದೊರಕಿರುವ ಅವಕಾಶಗಳು, ಆರ್ಥಿಕ ಸ್ಥಿತಗಳು, ರಾಜಕೀಯ ಸ್ಥಾನಮಾನ ಮತ್ತು ಸಾಮಾಜಿಕ ವ್ಯವಸ್ಥೆಯ ನಿಖರ ಅಂಕಿ ಅಂಶಗಳನ್ನು ಒಳಗೊಂಡ ದತ್ತಾಂಶವನ್ನು ಆಧರಿಸಿಯೇ ಒಳಮಿಸಲು ಹಂಚಿಕೆ ನಿರ್ಧಾರ ಕೈಗೆತ್ತಿಕೊಳ್ಳಬೇಕು,
ಬಂಜಾರಾ ಸಮುದಾಯದ ಜನರ ಶಿಕ್ಷಣ ಮತ್ತು ಉದ್ಯೋಗದಲ್ಲಿ ದೊರಕಿರುವ ಅವಕಾಶಗಳು, ಆರ್ಥಿಕ ಸ್ಥಿತಗಳು, ರಾಜಕೀಯಸ್ಥಾನಮಾನ ಮತ್ತು ಸಾಮಾಜಿಕ ವ್ಯವಸ್ಥೆಯ ನಿಖರ ಅಂಕಿ ಅಂಶಗಳನ್ನು ಒಳಗೊಂಡ ದತ್ತಾಂಶವನ್ನು ಪ್ರತ್ಯೇಕವಾಗಿ ಪರಿಗಣ ಸಬೇಕು,
2011ರ ನಂತರ ಜನಗಣತಿ ನಡೆದಿರುವುದಿಲ್ಲ. ಜನಸಂಖ್ಯಾ ಮಾಹಿತಿ ಇಲ್ಲದೆ ಮತ್ತು ಜಾತಿ ಜನಗಣತಿ ಆಗದೆ ಒಳಮೀಸಲಾತಿ ಮತ್ತು ವರ್ಗೀಕರಣದ ವಿಚಾರ ಅಥವಾ ಪ್ರಯತ್ನ ಸಮಂಜಸವಾಗಿರುವುದಿಲ್ಲ. ಈ ತಪ್ಪನ್ನ ರಾಜ್ಯ ಸರ್ಕಾರ ಮಾಡಕೂಡದು,
ಬಂಜಾರಾ ಜನಾಂಗದಲ್ಲಿ 'ಗೂಳೆ ಹೋಗುವುದು ' ಒಂದು ಪಿಡಗಾಗಿದ್ದು . ರಾಜ್ಯ ಸರ್ಕಾರವು ರಾಜ್ಯದಲ್ಲಿ ಇರುವ ಎಲ್ಲ ಬಂಜಾರಾ ಜನಾಂಗದ ಜನಗಣತಿಯನ್ನು ಅಚ್ಚುಕಟ್ಟಾಗಿ ಮತ್ತು ಅತಿ ಹೆಚ್ಚಿನ ಕಾಳಜಿವಹಿಸಿ ನಡೆಸಬೇಕು ಮತ್ತು ಅದರ ದತ್ತಾಂಶವನ್ನು ಯಾವುದೇ ಲೋಪವಿಲ್ಲದೆ ಪಾರದರ್ಶಕವಾಗಿ ಬಹಿರಂಗಗೊಳಿಸಬೇಕು,
ಮೀಸಲಾತಿ, ಒಳಮೀಸಲಾತಿ ಮತ್ತು ವರ್ಗೀಕರಣದ ಅಧ್ಯಯನ ಪರಿಶಿಷ್ಟರ ನಡುವೆ ಇರುವ ಐಕ್ಯತೆಗೆ ಯಾವುದೇ ಧಕ್ಕೆ ತರಬಾರದು. ಎಲ್ಲ ಪರಿಶಿಷ್ಟರ ಹಿತವನ್ನ ಕಾಪಾಡಲು ಸರ್ಕಾರ ಸರಿಯಾದ ಕ್ರಮ ವಹಿಸಬೇಕು.
ಪರಿಶಿಷ್ಟ ಸಮುದಾಯಗಳ ನಡುವೆ ಒಳಮಿಸಲಾತಿ ಮತ್ತು ವರ್ಗೀಕರಣದ ವಿಷಯಗಳಲ್ಲಿ ಹುಟ್ಟುತ್ತಿರುವ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಲು ಮತ್ತು ಸಮುದಾಯಗಳ ನಡುವೆ ಯಾವುದೇ ದ್ವೇಷ ಭಾವನೆ ಹುಟ್ಟದೇ ಇರುವ ಹಾಗೆ ರಾಜ್ಯ ಸರ್ಕಾರ ಸರಿಯಾದ ನಿರ್ಧಾರವನ್ನ ತೆಗೆದುಕೊಳ್ಳಬೇಕು.
ಗೋರ ಬಂಜಾರಾ ಸಮುದಾಯವು ರಾಜ್ಯದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣ ಕವಾಗಿ ದುರ್ಬಲ ಸಮುದಾಯ ಆಗಿದ್ದು, ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳನ್ನೊಳಗೊಂಡ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಹುತೇಕ ಹೆಚ್ಚಾಗಿರುವ ಈ ಗೋರ ಬಂಜಾರಾ ಜನರ ಪರಿಸ್ಥಿತಿ ಇನ್ನೂ ಹೀನಾಯ ಸ್ಥಿತಿಯಲ್ಲಿದೆ. ಈ ಭಾಗದ ಗೋರ ಬಂಜಾರಾ ಜನಾಂಗದ ಒಳತಿಗಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ' ಕರ್ನಾಟಕ ತಾಂಡಾ ನಿಗಮ ' ಸ್ಥಾಪಿಸಬೇಕು ಮತ್ತು ಈಗಾಗಲೇ ಇರುವ ತಾಂಡಾ ನಿಗಮಕ್ಕೆ ಹೆಚ್ಚಿನ ಅನುದಾನವನ್ನು ನೀಡಬೇಕು, ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಗೊಳಿಸಲು ತಂದ ಮಸೂದೆಯನ್ನು ರಾಜ್ಯ ಸರ್ಕಾರ ಅಂಗೀಕರಿಸಬೇಕೆAದು.
ಕರ್ನಾಟಕ ರಾಜ್ಯದಲ್ಲಿರುವ ಸುಮಾರು 3500 ತಾಂಡಾಗಳಲ್ಲಿಯೂ ಇರುವ ಗೋರ ಬಂಜಾರಾ ಜನರ ಆರಾಧ್ಯ ದೈವಗಳಾದ ಮಾತಾ ಮರಿಯಮ್ಮ ಮತ್ತು ಸತಗರು ಸೇವಾಲಾಲ ಮಹಾರಾಜರ ದೇವಸ್ಥಾನದಲ್ಲಿ ವಂಶಪಾರಂಪರ್ಯವಾಗಿ ಪೂಜಾ ದೈವಕಾರ್ಯವನ್ನು ಸರ್ವ ತಾಂಡಾವಾಸಿಗಳ ಸಹಾಯದಿಂದ, ಹಾಗೂ ಕೆಲವೊಂದು ತಾಂಡಾಗಳಲ್ಲಿ ಸ್ವಯಂ ಖರ್ಚು ಮಾಡಿಕೊಂಡು ಬರುತ್ತಿರುವ ಭೋಪ್ಯಾ-ಭಗತ ಅಂದರೆ ಗೋರ ಬಂಜಾರಾ ಕುಲದೈವಗಳ ಪೂಜಾರಿಗಳನ್ನು ಗುರುತಿಸಿ ಮುಜರಾಯಿ ಇಲಾಖೆವತಿಯಿಂದ ಗುರುತಿಸಿ ಅವರಿಗೆ ಮಾಸಿಕ| ವೇತನವನ್ನು ರಾಜ್ಯ ಸರ್ಕಾರವು ನಿಗದಿಪಡಿಸಿ, ನಮ್ಮ ರಾಜ್ಯ ಅಷ್ಟೇ ಅಲ್ಲ ದೇಶ ಹಾಗೂ ವಿಶ್ವವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಗೋರ ಬಂಜಾರಾ ಜನರ ವಿಶೇಷ ಬುಡಕಟ್ಟು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ರಾಜ್ಯ ಸರ್ಕಾರವು ದಿಟ್ಟ ಹಾಗೂ ಮಾದರಿ ಹೆಜ್ಜೆ ಇಡಬೇಕೆಂದು ಸಹ ಗೋರಸೇನಾ ಸಂಘಟನೆಯ ರಾಜ್ಯ ಘಟಕ ಒತ್ತಾಯಿಸುತ್ತಿದ್ದು, ರಾಜ್ಯದಲ್ಲಿ ಗೋರ ಪರಂಪರೆ ಸಂಸ್ಕೃತಿಯ ಉಳಿವಿಗಾಗಿ ಹಗಲಿರುಳು ಶ್ರಮಿಸುತ್ತಿರವ ನಮ್ಮ ಸಂಘಟನೆ ಈ ವಿಷಯದಲ್ಲಿ ಸರ್ಕಾರವು ತೆಗೆದುಕೊಳ್ಳಬಹುದಾದ ತೀರ್ಮಾನಕ್ಕೆ ಸಹಕಾರಿಯಾಗಿ ಪೂರಕವಾಗಿ (ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಭಾಗಿಯಾದಂತೆ) ಕಾರ್ಯನಿರ್ವಹಿಸಲು ಸಿದ್ಧವಿದೆ ಎಂದು ತಿಳಿಸಲು ಹರ್ಷಿಸುತ್ತೇವೆ.
"ಗೋರ್ ಸೇನಾ " ರಾಷ್ಟ್ರೀಯ ಸಂಘಟನೆ, ಕರ್ನಾಟಕ ರಾಜ್ಯ ಘಟಕ, ದಿನಾಂಕ 02 ಅಕ್ಟೋಬರ್ 2024 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನೆರವೇರಿದ ಸತ್ಯಾಗ್ರಹದಲ್ಲಿ ಭಾಗವಹಿಸಿದ ಸುಮಾರು 500 ಕ್ಕೂ ಹೆಚ್ಚು ಸತ್ಯಾಗ್ರಹಿಗಳನ್ನ ಸಾಕ್ಷಿಯಾಗಿಸಿ. ಅವರೆಲ್ಲರ ಸಮಕ್ಷಮ ಮನವಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುತ್ತದೆ.
ಬಂಜಾರಾ ಸಮುದಾಯಕ್ಕೆ ಯಾವುದೇ ಅನ್ಯಾಯ ಆಗದ ಹಾಗೆ ಅದರ ರಕ್ಷಣೆಗಾಗಿ, ರಾಷ್ಟ್ರಪಿತ ಮಹಾತ್ಮ ಗಾಂಧಿ ಕಲಿಸಿದ ಸತ್ಯ ಮತ್ತು ಶಾಂತಿಯ ಮಾರ್ಗ ಹಾಗೂ ಡಾ. ಬಾಬಾಸಾಹೇಬ್ ಅಂಬೇಡ್ಕರ್ ತೋರಿಸಿ ಕೊಟ್ಟ ನ್ಯಾಯದ ಮಾರ್ಗ ಅನುಸರಿಸಿ. "ಗೋರ್ ಸೇನಾ" ಕರ್ನಾಟಕ ರಾಜ್ಯ ಘಟಕ ಎಂದೆಂದಿಗೂ ಸಿದ್ದ ಎಂದು ಈ ಮನವಿಯಲ್ಲಿ ತಿಳಿಸಿದ್ದಾರೆ. ಗೋರ ಸೇನಾ ಜಿಲ್ಲಾಧ್ಯಕ್ಷ ಮಾನಸಿಂಗ್ ಚವ್ಹಾಣ, ನಗರ ಅಧ್ಯಕ್ಷ ವಿನೋದ ರಾಠೋಡ, ರಾಜ್ಯ ಸಂ.ಕಾರ್ಯದರ್ಶಿ ಶ್ರೀಧರ ಚವ್ಹಾಣ, ನೇಹರು ಜಾಟೋತ, ರಾಮ ಖೇತಾವತ್ ಸೊಬಲೆ, ತುಕಾರಾಮ ಸಬಾವಟ್, ಪ್ರಕಾಶ ಚವ್ಹಾಣ, ಸಾಗರ ಚವ್ಹಾಣ, ಧರಮರಾಜ ಚವ್ಹಾಣ, ಧರ್ಮರಾಜ ಚವ್ಹಾಣ, ಶಂಕರ ರಾಠೋಡ, ರಾಜು ಪವಾರ, ಅಶೋಕ, ಮನೋಜ ರಾಠೋಡ ಸೇರಿದಂತೆ ಇತರರು ಇದ್ದರು.