ಸೋಲಾಪುರ–ಹಾಸನ ಬಸವ ಎಕ್ಸ್‌ಪ್ರೆಸ್‌ನಲ್ಲಿ ನೀರಿಲ್ಲದೆ ಪ್ರಯಾಣಿಕರ ಪರದಾಟ ರೈಲ್ವೆ ಅವ್ಯವಸ್ಥೆ ವಿರುದ್ಧ ನರಿಬೋಳ ಆಕ್ರೋಶ
ಸೋಲಾಪುರ–ಹಾಸನ ಬಸವ ಎಕ್ಸ್‌ಪ್ರೆಸ್‌ನಲ್ಲಿ ನೀರಿಲ್ಲದೆ ಪ್ರಯಾಣಿಕರ ಪರದಾಟ
ರೈಲ್ವೆ ಅವ್ಯವಸ್ಥೆ ವಿರುದ್ಧ ನರಿಬೋಳ ಆಕ್ರೋಶ
ಕಲಬುರಗಿ:ಜನಸಂಖ್ಯೆಗೆ ಅನುಗುಣವಾಗಿ ರೈಲು ಸೌಲಭ್ಯಗಳು ಕಲ್ಪಿಸದೆ ರೈಲ್ವೆ ಇಲಾಖೆ ನಿರ್ಲಕ್ಷ್ಯ ತೋರುತ್ತಿರುವುದರಿಂದ ಸೋಲಾಪುರ–ಹಾಸನ ಬಸವ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಯಿತು ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರೈಲಿನ ಎಸ್–4 ಮತ್ತು ಎಸ್–5 ಭೋಗಿಗಳಲ್ಲಿ ನೀರಿನ ವ್ಯವಸ್ಥೆಯೇ ಇರದ ಕಾರಣ ಪ್ರಯಾಣಿಕರು ಶೌಚಾಲಯ ಬಳಸಲು, ಊಟದ ನಂತರ ಕೈತೊಳೆಯಲು ತೀವ್ರ ಪರದಾಟ ನಡೆಸಬೇಕಾಯಿತು. ಕೊನೆಗೆ ಅನಿವಾರ್ಯವಾಗಿ ಕುಡಿಯುವ ನೀರಿನ ಬಾಟಲಿಗಳನ್ನು ಖರೀದಿಸಿ ನಿತ್ಯಕರ್ಮ ಪೂರೈಸುವಂತಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಜನರು ಕೂಡ ಮಾನವರೇ ಆಗಿದ್ದು, ಅವರಿಗೆ ಈ ರೀತಿಯ ಶಿಕ್ಷೆಯಂತಿರುವ ವರ್ತನೆ ಯಾಕೆ ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಅವ್ಯವಸ್ಥೆಯನ್ನು ತೀವ್ರವಾಗಿ ಖಂಡಿಸಿದ ಅವರು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ರೈಲ್ವೆ ಇಲಾಖೆ ತಕ್ಷಣವೇ ವ್ಯವಸ್ಥೆ ಸುಧಾರಿಸಬೇಕು. ಅಲ್ಲದೆ, ಇಂದಿನ ಅವ್ಯವಸ್ಥೆಗೆ ಕಾರಣರಾದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
-
