ದೇಶಕಂಡ ಮಹಾನಾಯಕ ಮನಮೋಹನ್ ಸಿಂಗ್: ಹಿರಿಯ ಸಾಹಿತಿ ಬಿ ಟಿ ಲಲಿತಾ ನಾಯಕ್

ದೇಶಕಂಡ ಮಹಾನಾಯಕ ಮನಮೋಹನ್ ಸಿಂಗ್: ಹಿರಿಯ ಸಾಹಿತಿ ಬಿ ಟಿ ಲಲಿತಾ ನಾಯಕ್

ದೇಶಕಂಡ ಮಹಾನಾಯಕ ಮನಮೋಹನ್ ಸಿಂಗ್: ಹಿರಿಯ ಸಾಹಿತಿ ಬಿ ಟಿ ಲಲಿತಾ ನಾಯಕ್

ಶಹಾಬಾದ್: ದೇಶದ ಆರ್ಥಿಕತೆಗೆ ಅಷ್ಟೇ ಅಲ್ಲದೆ ಅನೇಕ ದೇಶಗಳಿಗೆ ಆರ್ಥಿಕ ಸಲಹೆ ಸೂಚನೆ ನೀಡುವ ಮೂಲಕ ಪ್ರಸಿದ್ಧಿ ಹೊಂದಿದ, ದೇಶಕಂಡ ಮಹಾನಾಯಕ ಮನಮೋಹನ್ ಸಿಂಗ್ ಎಂದು ಹಿರಿಯ ಸಾಹಿತಿ ಬಿ ಟಿ ಲಲಿತಾ ನಾಯಕ್ ಹೇಳಿದರು.

ಶುಕ್ರವಾರ ನಡೆಯಬೇಕಿದ್ದ ಶಹಾಬಾದ ಕನ್ನಡ ಸಾಹಿತ್ಯ ಸಮ್ಮೇಳನ ಜನೇವರಿ 4ರಂದು ಮುಂದೂಡಲಾಗಿದೆ. ಕಾರ್ಯಕ್ರಮಕ್ಕೆ ಬಂದಿರು ಹಿರಿಯ ಸಾಹಿತಿ ಹಾಗೂ ಮಾಜಿ ಸಚಿವರಾದ ಬಿ ಟಿ ಲಲಿತಾ ನಾಯಕ್ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನದ ಹಿನ್ನೆಲೆಯಲ್ಲಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.

ಮುಂದು ವರೆದು ಮಾತನಾಡಿ ಸಿಂಗ್ ಅವರು ವಿವಾದ ರಹಿತವಾಗಿ ಬೆಳೆದವರು ಕುಟುಂಬ ದೇಶದ ಜನರು ಸ್ವಾವಲಂಬಿಯಾಗಿ ಬೆಳೆಯಲು, ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಅಪಾರವಾದ ಕೊಡುಗೆಗಳನ್ನು ನೀಡಿದ್ದಾರೆ, ಅವರ ಆಗಲಿಕ್ಕೆ ಇಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.

ಕಸಾಪ ಅಧ್ಯಕ್ಷ ಶರಣಬಸಪ್ಪ ಕೋಬಾಳ ವೇದಿಕೆ ಮೇಲೆ ಉಪಸ್ಥಿತರಿದ್ದರು ಸಂಚಾಲಕ ಮತ್ತು ಸಲಹೆಗಾರರಾದ ಮರಿಯಪ್ಪ ಹಳ್ಳಿ ಮಾತನಾಡಿದರು. 

ಶ್ರದ್ಧಾಂಜಲಿ ಸಭೆಯಲ್ಲಿ ಅಣವೀರ ಇಂಗಿನಶೆಟ್ಟಿ, ಶರಣಗೌಡ ಪೊಲೀಸ್ ಪಾಟೀಲ್, ಪ್ರದೀಪ್ ಬಿರಾಳ, ಹಸನ್ ಖಾನ್, ಅಹಮದ್ ಪಟೇಲ್, ಪ್ರಶಾಂತ ಮರಗೋಳ, ಮೊಹಮ್ಮದ್ ಬಾಕ್ರುದ್ದೀನ್, ಪೂಜಪ್ಪ ಮೇತ್ರಿ, ಬಾಬುರಾವ ಪಂಚಾಳ, ಕನಕಪ್ಪ ದಂಡಗೋಲ್ಕರ್, ರಾಜೇಶ್ ಯಾನಗುಂಟಿಕರ್, ಮಲ್ಕಪ್ಪ ಮುದ್ದ, ರಾಜು ಕೋಬಾಳ, ನಾಗಣ್ಣ ರಾಂಪುರ , ಅಜಿಂ ಸೆಟ್, ವಿಶ್ವ ರಾಜ ಫಿರೋಜಬಾದ್ ಯಲ್ಲಾಲಿಂಗ ಹೈಯಾಳಕರ ಸಿರಿದಂತೆ ಅನೇಕರು ಭಾಗವಹಿಸಿದರು.

ಕಸಾಪ ನಿಕಟಪೂರ್ವ ಅಧ್ಯಕ್ಷ ಮೃತ್ಯುಂಜಯ ಸ್ವಾಮಿ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತ ರಮೇಶ್ ಭಟ್ಟ ವಂದಿಸಿದರು.

ಶಹಾಬಾದ:-ಸುದ್ದಿ ನಾಗರಾಜ್ ದಂಡಾವತಿ