ಗ್ರಾ ಪಂ. ಗಾಂಧಿ ಗ್ರಾಮ ಪುರಸ್ಕಾರಕ್ಕೆ ತೋರಣ ಗ್ರಾಮ ಆಯ್ಕೆ;
ಗ್ರಾ ಪಂ. ಗಾಂಧಿ ಗ್ರಾಮ ಪುರಸ್ಕಾರಕ್ಕೆ ತೋರಣ ಗ್ರಾಮ ಆಯ್ಕೆ;
ಕಮಲನಗರ: ತಾಲೂಕಿನ ತೋರಣ ಗ್ರಾಮ ಪಂಚಾಯತಿಗೆ 2023- 24 ನೇ ಸಾಲಿನ ಮೊದಲ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ.
ಕಮಲನಗರದ ತಾಲೂಕಿನಲ್ಲಿ ಒಟ್ಟು 18 ಗ್ರಾಮ ಪಂಚಾಯತಿಗಳಲ್ಲಿ ತೋರಣ ಗ್ರಾಮ ಪಂಚಾಯತಿ ಒಂದು ತೋರಣಾ, ತೋರಣವಾಡಿ, ಮುಧೋಳ(ಕೆ )ಗ್ರಾಮಗಳು ಸೇರಿದ್ದು ಈ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 15 ಸದಸ್ಯರನ್ನು ಹೊಂದಿದೆ
2017 -18 ನೇ ಸಾಲಿನಲ್ಲಿ ತೋರಣಾ ಗ್ರಾಮ ಬಯಲು ಬಹಿರದಿಸೆ ಮುಕ್ತ ಗ್ರಾಮವಾಗಿದೆ. ವಿದ್ಯುತ್ ದೀಪ ಗ್ರಂಥಾಲಯಗಳು, ಅಂಗನವಾಡಿ ಕಟ್ಟಡ, ಸಮುದಾಯ ಭವನ, ಮಾಸ್ಕದೀಪ, ಸಿಸಿ ಕ್ಯಾಮೆರಾ ವ್ಯವಸ್ಥೆ ಹಾಗೂ ಗ್ರಾಮಗಳಿಗೆ ರಸ್ತೆ ನಿರ್ಮಾಣ ಆಗಲಿ, ಚರಂಡಿ ನಿರ್ಮಾಣ ಸಾರ್ವಜನಿಕರಿಗೆ ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ದನಗಳ ಕೊಠಡಿಗಳು ಶೆಡ್ ಗಳು ನಿರ್ಮಾಣ ದನಗಳ ಕುಡಿಯುವ ನೀರಿನ ತೊಟ್ಟಿ ನಮ್ಮ ಹೊಲ ನಮ್ಮರಸ್ತೆ ಬಾವಿ ತೋಟಗಾರಿಗಳು ಬೆಳೆಗಳು ಅಭಿವೃದ್ಧಿ ಶಾಲಾ ಶೌಚಾಲಯ ನರೇಗಾ ಯೋಜನೆಗಳು ಜನರಿಗೆ ತಂದು ಹೀಗೆ ನಾನಾ ರೀತಿಯ ಸೌಲತ್ತುಗಳಿಂದ ಕೂಡಿದ ಗ್ರಾಮ ಎನ್ನಿಸಿದೆ.
ಸಾರ್ವಜನಿಕ ಸಮಸ್ಯೆಗಳು ಕೂಡಲೇ ಸ್ಪಂದಿಸಿ ಪರಿಹಾರ ನೀಡಿದಕ್ಕಾಗಿ ಈ ಪುರಸ್ಕಾರ ದೊರೆತಿದೆ ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಲ್ಲೇಶ್ ತಿಳಿಸಿದ್ದಾರೆ.
ಉತ್ತಮ ಮಟ್ಟದ ಕಾಮಗಾರಿ ಮಾಡಿದಕ್ಕಾಗಿ ಸರ್ಕಾರದ ಯೋಜನೆಗಳು ಸದ್ಬಳಕೆ ಒಳ್ಳೆಯ ರೀತಿಯಲ್ಲಿ ಕೆಲಸ ಕಾರ್ಯಗಳು ಮಾಡುವಲ್ಲಿ ಯಶಸ್ವಿಯಾಗಿರುವ ಕಾರಣ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಸರ್ಕಾರದ ಸವಲತ್ತುಗಳನ್ನು ದೊರಕಿಸಿ ಕೊಟ್ಟಿದಕ್ಕೋಸ್ಕರ ಸರ್ಕಾರದ ಅಧಿಕಾರಿಗಳು ಗಮನಸೆಳೆದಂತೆ ಮಾಡಿ ತೋರಿಸಿದ್ದು ತಮ್ಮ ಕಾರ್ಯಗಳಿಗೆ ಮೆಚ್ಚಿ ಗಾಂಧಿ ಗ್ರಾಮ ಪುರಸ್ಕಾರ ನೀಡಲಾಗಿದೆ.
ಗ್ರಾಮ ಪಂಚಾಯತಿ ಕಚೇರಿಯ ಕಟ್ಟಡದಲ್ಲಿ ಸುಂದರವಾಗಿ ಬಗೆ ಬಗೆಯ ಹೂವಿನ ಗಿಡಗಳು ಗಿಡಮೂಲಿಗಳು ನೋಡುಗರಿಗೆ ರಮಣೀಯವಾಗಿದೆ ಈ ಕಾರ್ಯಕ್ಕೆ ಪುರಸ್ಕಾರದ ಜೊತೆಗೆ ತೋರಣ ಗ್ರಾಮ ಪಂಚಾಯತಿ ಇನ್ನೂ ಹೆಚ್ಚಿನ ಅಭಿವೃದ್ಧಿಯಾಗಲಿ ಎಂದು 5 ಲಕ್ಷ ನಗದು ಬಹುಮಾನ ದೊರಕ್ಕಿದೆ.
ಈ ಗ್ರಾಮ ಪಂಚಾಯತ್ ಸ್ವಚ್ಛತೆಗೆ ಹೆಚ್ಚು ಆದ್ಯತೆ ಕೊಡುವಲ್ಲಿ ಪುರಸ್ಕಾರಕ್ಕೆ ಆಯ್ಕೆಯಾದಲ್ಲಿ ಇನ್ನಿತರ ಗ್ರಾಮಗಳಿಗೆ ಮಾದರಿಯಾಗಿ ನಿಂತಿದೆ ಎಂದು ಹೇಳಬಹುದು
ಮೊದಲ ಸಲ ನಮ್ಮ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ದೊರೆಯುವುದರಿಂದ ಸಂತಸ ತಂದಿದೆ.
-ಸುನಿಲ್ ಸೀರಿಗೆ ಅಧ್ಯಕ್ಷರು ಗ್ರಾಮ ಪಂಚಾಯತ್ ತೋರ್ಣ
ಎಲ್ಲಾ ಕೆಲಸಗಳಿಗೆ ಸೂಕ್ತ ರೀತಿಯಲ್ಲಿ ಗುಣಮಟ್ಟದ ಕೆಲಸಕ್ಕೆ ದೊರೆತ ಪುರಸ್ಕಾರಕ್ಕೆ ಸಂತೋಷವಾಗಿದೆ.
-ಮಲ್ಲೇಶ್ ಎಂ ವಿಡಿಯೋ ತೋರಣಾ
ತಾಲೂಕಿನ 18 ಗ್ರಾಮ ಪಂಚಾಯತಿಗಳಲ್ಲಿ ತೋರಣ ಗ್ರಾಮಕ್ಕೆ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ಸಿಕ್ಕಿರುವುದು ಹರ್ಷದಾಯಕವಾಗಿದೆ.
-ಮಾಣಿಕರಾವ ಪಾಟೀಲ್ ಕಾರ್ಯನಿರ್ವಾಹಕ ಅಧಿಕಾರಿ ಕಮಲ್ನಗರ್
.