ಧರ್ಮ,ಸಂಸ್ಕೃತಿ,ಉಳುವಿಗೆ ಮಠ ಮಾನ್ಯಗಳ ಕೊಡುಗೆ ಅಪಾರ - ರಂಭಾಪುರಿ ಶ್ರೀಗಳು.
ಧರ್ಮ,ಸಂಸ್ಕೃತಿ,ಉಳುವಿಗೆ ಮಠ ಮಾನ್ಯಗಳ ಕೊಡುಗೆ ಅಪಾರ - ರಂಭಾಪುರಿ ಶ್ರೀಗಳು.
ಶಹಾಪುರ : ನಮ್ಮ ಭಾರತೀಯ ಸಂಸ್ಕೃತಿ,ಧರ್ಮ,ಪರಂಪರೆಯನ್ನು ಉಳಿಸಿ,ಸಮಾಜದಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಈ ನಾಡಿಗೆ ಮಠಮಾನ್ಯಗಳ ಕೊಡುಗೆ ಅಪಾರವಾಗಿದೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಮಠದ ಡಾ: ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ತಾಲೂಕಿನ ಸಗರ ಗ್ರಾಮದ ನಾಗಠಾಣ ಹಿರೇಮಠದಲ್ಲಿ ಆಯೋಜಿಸಿದ ಶ್ರೀ ಉದಯ ಮಾಂತೇಶ್ವರರ ಜಾತ್ರಾ ಮಹೋತ್ಸವ ಹಾಗೂ ಸೋಮೇಶ್ವರ ಶಿವಾಚಾರ್ಯ ಗುರು ಪಟ್ಟಾಧಿಕಾರ ದ್ವಾದಶ ವರ್ಧಂತಿ ಮಹೋತ್ಸವ ಮತ್ತು ನೂತನ ಕಟ್ಟಡ ಕಾಮಗಾರಿಗಳ ಉದ್ಘಾಟನಾ ಜೊತೆಗೆ ಜನಜಾಗ್ರತಿ ಧರ್ಮ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮನುಕುಲದ ಉದ್ಧಾರಕ್ಕಾಗಿ ಸಮಾಜದಲ್ಲಿ ಧಾರ್ಮಿಕ,ನಂಬಿಕೆ,ಹಾಗೂ ಸುಸಂಸ್ಕೃತಿಯನ್ನು ಬಿತ್ತಿ,ನಾಡಿನ ಭಕ್ತರ ಬದುಕಿಗೆ ಬೆಳಕನ್ನು ನೀಡುತ್ತಿರುವ ಶ್ರೀ ಮಠದ ಪೂಜ್ಯ ಶ್ರೀ ಸೋಮೇಶ್ವರ ಶಿವಾಚಾರ್ಯರ ಕಾರ್ಯ ನಿಜಕ್ಕೂ ಶ್ಲಾಘನೀಯವಾದದ್ದು ಎಂದು ಅವರ ಕಾರ್ಯವೈಖರಿಯ ಕುರಿತು ಬಣ್ಣಿಸಿದರು.
ಶ್ರೀ ಮಠದ ಸೋಮೇಶ್ವರ ಶಿವಾಚಾರ್ಯರು ಮಾತನಾಡಿ ಸನಾತನ ಧರ್ಮ ಹಾಗೂ ಸನಾತನ ಸಂಸ್ಕೃತಿಯ ಧರ್ಮದ ಮೂಲ ತತ್ವಗಳು ನಿಸರ್ಗದ ನಿಯಮಕ್ಕೆ ಅನುಗುಣವಾಗಿವೆ,ಆದ್ದರಿಂದ ಹಿಂದೂ ಧರ್ಮವು ತನ್ನ ವೈಶಿಷ್ಟ್ಯತೆಗಳಿಂದ ಕೂಡಿರುವುದರಿಂದ ಇದರ ಉಳಿವಿಗಾಗಿ ನಾವು ನೀವೆಲ್ಲರೂ ಶ್ರಮಿಸುವುದು ಅತ್ಯಗತ್ಯವಾಗಿದೆ ಎಂದು ನುಡಿದರು.
ಈ ಸಮಾರಂಭದ ವೇದಿಕೆಯ ಮೇಲೆ, ಎಮ್ಮಿಗನೂರು ಶ್ರೀಗಳು, ಅಲಮೇಲ ಶ್ರೀಗಳು,ಸಂಗೊಳ್ಳಿ ಶ್ರೀಗಳು,ಗುರುಮಠಕಲ್ ಶಾಸಕರಾದ ಶರಣಗೌಡ ಕಂದುಕುರ,ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಸನಗೌಡ ಮಾಲಿ ಪಾಟೀಲ್, ಮಹಾಂತಗೌಡ ಸುಬೇದಾರ,ಅಮೀನ್ ರೆಡ್ಡಿ ಮಲ್ಲೇದ,ತಾಲೂಕು ವೀರಶೈವ ಘಟಕ ಸಮಾಜದ ಅಧ್ಯಕ್ಷ ಸಿದ್ದು ಸಾಹು ಆರಬೋಳ,ಶಂಕರಪ್ಪ ಪಾಗದ ಸೇರಿದಂತೆ ಸಾವಿರಾರು ಗ್ರಾಮದ ಭಕ್ತರು ಹಾಜರಿದ್ದರು.
