ಕಾಯಕ-ದಾಸೋಹಕ್ಕೆ ದ್ಯೋತಕ ಬಬಲಾದಿಮಠ

ಕಾಯಕ-ದಾಸೋಹಕ್ಕೆ ದ್ಯೋತಕ ಬಬಲಾದಿಮಠ

ಸಿದ್ಧಬಸವೇಶ್ವರರ 71 ನೇ ಜಾತ್ರಾಮಹೋತ್ಸವ 

ಕಾಯಕ-ದಾಸೋಹಕ್ಕೆ ದ್ಯೋತಕ ಬಬಲಾದಿಮಠ

ಕಮಲಾಪುರ: ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನ ಹಾಗೂ ಬಬಲಾದಿಯ ಚನ್ನವೀರ ಶಿವಯೋಗಿಗಳ ವಿರಕ್ತ ಮಠ ಶರಣರ ಕಾಯಕ-ದಾಸೋಹ ತತ್ವಕ್ಕೆ ದ್ಯೋತಕವಾಗಿವೆ ಎಂದು ಹಿರಿಯ ಸಾಹಿತಿ ಅಪ್ಪಾರಾವ ಅಕ್ಕೋಣಿ ತಿಳಿಸಿದರು.

ಬಬಲಾದ ಸಿದ್ಧಬಸವೇಶ್ವರರ 71 ನೇ ಜಾತ್ರಾಮಹೋತ್ಸವದ ಧಾರ್ಮಿಕ ಸಮಾರಂಭದಲ್ಲಿ ಅವರು ಮಾತನಾಡಿದರು.

ಲಿಂಗೈಕ್ಯ ಚೆನ್ನವೀರ ಶಿವಯೋಗಿಗಳು ದಾಸೋಹ ಆರಂಭಿಸಿದರು. ಸದ್ಯ ಗುರುಲಿಂಗ ಶಿವಯೋಗಿಗಳು ಕೃಷಿ ಕಾಯಕ ಕೈಗೊಂಡು ಅಪಾರ ಖ್ಯಾತಿಗಳಿಸಿದರು. ಕೃಷಿಯಲ್ಲಿ ನಮ್ಮಕ ಪ್ರದೇಶಕ್ಕೆ ಪರಿಚಿತವಿರದ ಅನೇಕ ವಿಧದ ಬೆಳೆಗಳನ್ನು ಪರಿಚಯಿಸಿದರು. ಸಾವಯವದ ಜೊತೆಗೆ ವೈಜ್ಞಾನಿಕ ಕೃಷಿ ಅಳವಡಿಸಿಕೊಂಡು ಮಾದರಿಯಾದರು. ಗ್ರಾಮೀಣ ಪ್ರದೇಶದಲ್ಲಿ ಕೃಷಿಯಿಂದ ವಿಮುಖರಾಗುತ್ತಿದ್ದ ಅನೇಕರಿಗೆ ಕೈ ಹಿಡಿದು ತಂದು ಅನ್ನ ಅರಿವೆ ಕೊಟ್ಟು ತಮ್ಮ ತೋಟದಲ್ಲಿ ಕೆಲಸ ಕೊಡಿಸಿದರು. ಕೇವಲ ದೈವ ಭಕ್ತಿಯಷ್ಟೆ ಸಾಲದು ಕಾಯಕ ಶ್ರದ್ಧೆ ಕೂಡ ಅವಶ್ಯಕ ಎಂಬುದನ್ನು ಸ್ವತಃ ಕಾಯಕನಿರತರಾಗಿ ಇತರರಿಗೆ ತಿಳಿಹೇಳಿದರು. ಮಠಗಳು ಸ್ವಾಮೀಜಿಗಳಿಗೆ ಸೀಮಿತವಾಗದೆ ಸಮಾಜ ತಿದ್ದುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಮುತ್ಯನ ಬಬಲಾದಿ ಮಠ ಮುಂಚೂಣಿಯಲ್ಲಿದೆ ಎಂದರು.

ಜಯಶ್ರೀ ಮತ್ತಿಮಡು, ಅಪ್ಪಾರಾವ ಅಕ್ಕೋಣಿ, ಮಲ್ಲಿಕಾರ್ಜುನ ಹಂಗರಗಿ ಅವರನ್ನು ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶಿಕ್ಷಕ, ಸಾಹಿತಿ ಅಂಬಾರಾಯ ಮಡ್ಡೆಯವರ ವೃಕ್ಷದ ಬೇರು ಪುಸ್ತಕ ಲೋಕಾರ್ಪಣೆಗೊಳಿಸಲಾಯಿತು. 

ನಂದಿಕೋಲು ಮೆರವಣಿಗೆ, ವಿವಿಧ ಭಜನಾತಂಡಗಳಿಂದೆ ಭಜನೆ, ಸಂಗೀತ ಕಾರ್ಯಕ್ರಮಗಳು ಜರುಗಿದವು.

ಬಬಲಾದನ ಗುರುಪಾದಲಿಂಗ ಮಹಾಶಿಯೋಗಿ, ಪಾಳಾದ ಗುರುಮೂರ್ತಿ ಶಿವಾಚಾರ್ಯ, ಫಿರೋಜಾಬಾದ್ ನ ಗುರುಬಸವ ಮಹಾಸ್ವಾಮಿ, ಕಲಬುರಗಿ ಚೌಡಾಪುರಿಯ ರಾಜಶೇಖರ ಶಿವಾಚಾರ್ಯ, ಖೇಳಗಿಯ ಅಭಿನವ ಶಿವಲಿಂಗ ಸ್ವಾಮೀಜಿ, ನಾಗಣಸೂರ ಅಭಿನವ ಬಸವಲಿಂಗ ಮಹ್ಸ್ವಾಮೀಜಿ, ಶಿವಾನಂದ ಮಹಾಸ್ವಾಮೀಜಿ, ಪಹಾಡ ಕೋಹಿನೂರ ಬಿಸ್ಮಿಲ್ಲಾ ಶಹಾ ದರ್ಗಾ, ಶಾಸಕ ಬಸವರಾಜ ಮತ್ತಿಮಡು, ಬಿ.ಜಿ.ಪಾಟೀಲ, ರೇವುನಾಯಕ ಬೆಳಮಗಿ, ನೀಲಕಂಠರಾವ ಮೂಲಗೆ, ಶರಣಬಸಪ್ಪ ಪಾಟೀಲ ಅಷ್ಟಗಿ, ಗ್ರಾ.ಪಂ ಅಧ್ಯಕ್ಷ ಪಾರ್ವತಿ ಜಗನ್ನಾಥ ಹೋಳಕರ್, ಗುರುರಾಜ ಮಾಟೂರ, ಸುರೇಶ ಬಬಲಾದ, ಸಾಹಿತಿ ಡಾ. ಶರಣಬಸಪ್ಪ ವಡ್ಡನಕೇರಿ, ಪತ್ರಕರ್ತ ಡಾ. ತೀರ್ಥಕುಮಾರ ಬೆಳಕೋಟಾ, ಶಿವಕುಮಾರ ಹುಲಿ, ಶಾಂತವೀರ ಕಲಬುರ್ಗಿ ಮತ್ತಿತರರು ಹಾಜರಿದ್ದರು.

ನೊಂದು ಬಂದವರಿಗೆ ಸಾಂತ್ವನ ಹೇಳುವುದರ ಜೊತೆಗೆ ಕಾಯಕ ದಾಸೋಹ ಮಹತ್ವ ಸಾರುವ ಬಬಲಾದಿ ಮಠ ನಮ್ಮ ಭಾಗದ ಮಾದರಿ ಧಾರ್ಮಿಕ ಕೇಂದ್ರವಾಗಿದೆ. ಈ ಮಠಕ್ಕೆ ಅಗತ್ಯ ಅನುದಾನ ನೀಡಲು ಸದಾ ಸಿದ್ಧನಿದ್ದೇನೆ.

ಬಸವರಾಜ ಮತ್ತಿಮಡು ಶಾಸಕ