ನಾರಾಯಣ ಗುರು ಚಿಂತನೆಯಿಂದ ಈಡಿಗ ಬಿಲ್ಲವರು ಒಗ್ಗಟ್ಟಾಗೋಣ: ವಿಖ್ಯಾತಾನಂದಶ್ರೀ

ನಾರಾಯಣ ಗುರು ಚಿಂತನೆಯಿಂದ ಈಡಿಗ ಬಿಲ್ಲವರು ಒಗ್ಗಟ್ಟಾಗೋಣ: ವಿಖ್ಯಾತಾನಂದಶ್ರೀ

ಯುವ ವೈಭವ 2025 ಕ್ಕೆ ಅದ್ದೂರಿ ಚಾಲನೆ

ನಾರಾಯಣ ಗುರು ಚಿಂತನೆಯಿಂದ ಈಡಿಗ ಬಿಲ್ಲವರು ಒಗ್ಗಟ್ಟಾಗೋಣ: ವಿಖ್ಯಾತಾನಂದಶ್ರೀ

ಬೆಂಗಳೂರು : ರಾಜ್ಯದಲ್ಲಿ ಈಡಿಗ ಬಿಲ್ಲವರು ಸೇರಿದಂತೆ 26 ಪಂಗಡಗಳಲ್ಲಿ ಹರಿದು ಹಂಚಿಹೋದ ಸಮುದಾಯದ ಉಪ ಪಂಗಡಗಳು ಒಗ್ಗಟ್ಟಾಗಿ ಕರುಳ ಬಳ್ಳಿಯ ಸಂಬಂಧವನ್ನು ಗಟ್ಟಿಗೊಳಿಸಬೇಕು ಎಂದು ಸೋಲೂರು ಈಡಿಗ ಮಹಾ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಕರೆ ನೀಡಿದರು. 

    ಬೆಂಗಳೂರಿನ ಮೈಸೂರ್ ಬ್ಯಾಂಕ್ ಸರ್ಕಲ್ ಹತ್ತಿರದ ಶಿಕ್ಷಕರ ಸದನದಲ್ಲಿ ಡಿ.7 ರಂದು ನಡೆದ ರಾಜ್ಯಮಟ್ಟದ ಯುವ ವೈಭವ 2025 ಕಾರ್ಯಕ್ರಮವನ್ನು ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿ ಜಾತಿ ಸಮೀಕ್ಷೆಯ ವೇಳೆ ಈಡಿಗ ಸಮುದಾಯದ ವಿವಿಧ ಪಂಗಡಗಳು ರಾಜ್ಯದಲ್ಲಿ ಒಗ್ಗಟ್ಟಿನ ಕೊರತೆಯಿಂದ ಜಾತಿ ನಮೂದಿಸಲು ಕಷ್ಟಕರವಾಯಿತು. ಭವಿಷ್ಯದಲ್ಲಿ ಎಲ್ಲ ಪಂಗಡಗಳನ್ನು ಒಗ್ಗೂಡಿಸುವ ಕೆಲಸ ಅತ್ಯಂತ ಅಗತ್ಯವಾಗಿದ್ದು ಯುವ ವೈಭವ ಏರ್ಪಡಿಸಿದ ಸಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಎಲ್ಲರ ಮನಸ್ಸು ಗೆದ್ದು ಒಗ್ಗಟ್ಟಿನಿಂದ ಗುರು ಚಿಂತನೆಯಡಿ ಸಮಾಜವನ್ನು ಒಗ್ಗಟ್ಟಿನಿಂದ ಕಟ್ಟಿ ಬೆಳೆಸಬೇಕಾಗಿದೆ.ಯುವವಾಹಿನಿಯ ಅದ್ದೂರಿ ಆಯೋಜನೆಯ ಯುವವೈಭವ ಕಾರ್ಯಕ್ರಮ ಸಮಾಜಕ್ಕೆ ಶಕ್ತಿ ತುಂಬಿದೆ ಮತ್ತು ಎಲ್ಲ ಪಂಗಡಗಳ ಯುವಕರನ್ನು ಒಗ್ಗೂಡಿಸಿದೆ ಎಂದು ಸ್ವಾಮೀಜಿ ಶ್ಲಾಘಿಸಿದರು.

   ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ಸಮುದಾಯವನ್ನು ಶಕ್ತಿಯುತವಾಗಿ ಬೆಳೆಸಿದಾಗ ರಾಜ್ಯದಲ್ಲಿ ಸಂಕುಚಿತ ಮನೋಭಾವ ದೂರವಾಗಿ ಆತ್ಮಬಲ ಹೆಚ್ಚುತ್ತದೆ ಎಂದು ನಾರಾಯಣ ಗುರು ಬ್ರಹ್ಮಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ಹೇಳಿದರು.

   ಈಡಿಗ ,ಬಿಲ್ಲವ ಯುವ ಶಕ್ತಿ ಒಳ್ಳೆಯ ಮನಸ್ಸಿನಿಂದ ಒಗ್ಗಟ್ಟಾಗಿ ಸಮುದಾಯಕ್ಕೆ ಕೀರ್ತಿ ತರಬೇಕು.ಹಸಿವಿಗೆ ಅನ್ನ, ಬಾಯಾರಿಕೆಗೆ ನೀರು,ಮನೆ ಇಲ್ಲದವರಿಗೆ ಮನೆ ನೀಡುವ ಜೊತೆಗೆ ನಾರಾಯಣ ಗುರು ಬೋಧನೆಯಂತೆ ವಿದ್ಯೆಗೆ ಮಹತ್ವ ನೀಡುವುದು ಅಗತ್ಯ ಎಂದು ಉದ್ಯಮಿ ಗೋವಿಂದ ಬಾಬು ಪೂಜಾರಿ ಹೇಳಿದರು. ಭರತನಾಟ್ಯ ಕಲಾವಿದೆ ದೀಕ್ಷಾ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಸತ್ಯನ್ ಪುತ್ತೂರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಗೀತಾಂಜಲಿ ಸುವರ್ಣ, ನ್ಯಾಯವಾದಿ ಶಿಲ್ಪಾ ಗೋಗಿ,ನಳಿನಾಕ್ಷಿ ಸಣ್ಣಪ್ಪ, ಧೀವರ ಸಂಘದ ರಾಜ್ಯಾಧ್ಯಕ್ಷ ಮಂಚೇಗೌಡ, ಲೋಕೇಶ್ ಕೋಟ್ಯಾನ್, ಭವ್ಯಶ್ರೀ ಪೂಜಾರಿ, ಶ್ರುತಿ ಕೆ, ಮೋಹನ್ ಪೂಜಾರಿ, ಸುಧೀರ್ ಪೂಜಾರಿ ಪೆರಾಡಿ, ಕಾರ್ತಿ, ಭಾವನಾ,ಡಿ ದೀಪಾ ನಾಯ್ಕ್ ,ಡಾ. ಉಷಾ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.ಬೆಂಗಳೂರು ಯುವವಾಹಿನಿ ಘಟಕದ ಅಧ್ಯಕ್ಷರಾದ ಶಶಿಧರ ಕೋಟ್ಯಾನ್ ಸ್ವಾಗತಿಸಿದರು. ಸಂತೋಷ್ ಪೂಜಾರಿ ಪಣಪಿಲ ಧನ್ಯವಾದವಿತ್ತರು. ರಾಜ್ಯದ ಮೂಲೆ ಮೂಲೆಗಳಿಂದ ಬಂದ ಯುವಕ ಯುವತಿಯರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿಯುವ ವೈಭವ ಕಾರ್ಯಕ್ರಮಕ್ಕೆ ಉತ್ಸವದ ಕಳೆ ತುಂಬಿತ್ತು. 

ಕಾರ್ಕಳ ಯುವವಾಹಿನಿಗೆ ಸಮಗ್ರ ಪ್ರಶಸ್ತಿ

ಯುವ ವೈಭವ ರಾಜ್ಯ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಸಮಗ್ರ ಪ್ರಶಸ್ತಿಯನ್ನು ಕಾರ್ಕಳ ಯುವವಾಹಿನಿ ಘಟಕ ಮಡಿಗೇರಿಸಿಕೊಂಡಿದೆ. ದ್ವಿತೀಯ ಸ್ಥಾನವನ್ನು ಬೆಳ್ತಂಗಡಿ ಯುವವಾಹಿನಿ ಘಟಕ ಪಡೆದುಕೊಂಡಿದೆ.

  ಭಾಷಣ ಸ್ಪರ್ಧೆಯಲ್ಲಿ ಬೆಳ್ತಂಗಡಿ ಘಟಕದ ಆಕಾಶ್ (ಪ್ರಥಮ), ಹೊಸಮಾರು ಬಲ್ಯೊಟ್ಟು ಮಠದ ನಿರೀಕ್ಷಾ( ದ್ವಿತೀಯ), ರಂಗೋಲಿ ಸ್ಪರ್ಧೆಯಲ್ಲಿ ಕಾರ್ಕಳ ಘಟಕ ಪ್ರಥಮ ಬಜಪೆ ಘಟಕ ದ್ವಿತೀಯ ಚಿತ್ರಕಲಾ ಸ್ಪರ್ಧೆಯಲ್ಲಿ ಕಾರ್ಕಳ ಪ್ರಥಮ ಬೆಳ್ತಂಗಡಿ (ದ್ವಿತೀಯ) ಗೀತ ಗಾಯನ ಸ್ಪರ್ಧೆಯಲ್ಲಿ ಕಾರ್ಕಳ ಘಟಕ(ಪ್ರಥಮ) ಬಜಪೆ ಘಟಕ ( ದ್ವಿತೀಯ) ನೃತ್ಯ ಸ್ಪರ್ಧೆಯಲ್ಲಿ ಬೆಳ್ತಂಗಡಿ (ಘಟಕ) ಪ್ರಥಮ ಹೊಸಮಾರು ಬಲ್ಯೊಟ್ಟು ಮಠ (ದ್ವಿತೀಯ) ರಸಪ್ರಶ್ನೆ ಸ್ಪರ್ಧೆಯಲ್ಲಿ ಹೊಸಮಾರು ಬಲ್ಯೋಟ್ಟು ಮಠ,ಕೊಲ್ಯ ಘಟಕ( ದ್ವಿತೀಯ) ಸ್ಥಾನ ಪಡೆದಿದೆ. ವೀಡಿಯೋ ಸ್ಪರ್ಧೆಯಲ್ಲಿ ಬೆಳ್ತಂಗಡಿ ಘಟಕ (ಪ್ರಥಮ) ಕಾರ್ಕಳ ಘಟಕ (ದ್ವಿತೀಯ) ಹಾಗೂ ಕೃಷ್ಣ, ಮಾಲಿನಿ ಚಂದ್ರಪ್ಪ ಮತ್ತಿತರರು ಭಾಗವಹಿಸಿದ್ದರು.