ನಾರಾಯಣ ಗುರು ಜಯಂತಿ ಅದ್ದೂರಿ ಆಚರಣೆಗೆ ಡಾ. ಪ್ರಣವಾನಂದ ಶ್ರೀ ಕರೆ

,ಡಾ. ವಿನಯ್ ಗುತ್ತೇದಾರ್ ಗಾರಂಪಳ್ಳಿ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ
ನಾರಾಯಣ ಗುರು ಜಯಂತಿ ಅದ್ದೂರಿ ಆಚರಣೆಗೆ ಡಾ. ಪ್ರಣವಾನಂದ ಶ್ರೀ ಕರೆ
ಕಲಬುರಗಿ: ಸಮಾಜ ಸುಧಾರಕರಾದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಸೆಪ್ಟೆಂಬರ್ 16ರಂದು ಕಲಬುರಗಿಯಲ್ಲಿ ಅದ್ದೂರಿಯಾಗಿ ಆಚರಿಸಿ ಗುರುಗಳ ತತ್ವ ಪ್ರಸಾರವನ್ನು ಮಾಡಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಆರ್ಯ ಈಡಿಗ ಸಮಾಜದ ಗುರುಗಳು ಹಾಗೂ ಚಿತ್ತಾಪುರ ತಾಲೂಕು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪೂಜ್ಯ ಡಾ. ಪ್ರಣವಾನಂದ ಶ್ರೀಗಳು ಕರೆ ನೀಡಿದರು.
ಕಲಬುರಗಿ ಜಿಲ್ಲಾ ಆರ್ಯ ಈಡಿಗ ಸಮಾಜದ ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರುಗಳು ಹಾಗೂ ಮುಖಂಡರ ಸಭೆಯು ನಗರದ ಆಮಂತ್ರಣ ಹೋಟೆಲ್ ಸಭಾಂಗಣದಲ್ಲಿ ಆಗಸ್ಟ್ 10 ರಂದು ಉದ್ಘಾಟನೆ ಮಾಡಿ ಮಾತನಾಡಿದ ಅವರು ಈ ಬಾರಿಯ ನಾರಾಯಣ ಗುರು ಜಯಂತಿ ಉತ್ಸವ ಸೆಪ್ಟೆಂಬರ್ 7ರಂದು ರಾಜ್ಯಾದ್ಯಂತ ನಡೆಯಲಿದ್ದು ಕಲಬುರಗಿ ಜಿಲ್ಲೆಯಲ್ಲಿ ಸೆಪ್ಟಂಬರ್ 16 ರಂದು ಆಚರಣೆ ಆಚರಣೆ ಮಾಡುತ್ತಿದ್ದು ಜಯಂತೋತ್ಸವ ಸಮಿತಿಯ ಅಧ್ಯಕ್ಷರಾಗಿ ಸಮಾಜದ ಹಿರಿಯ ಮುಖಂಡರು ಕಾರ್ಮಿಕ ನಾಯಕರಾದ ಬಸಯ್ಯ ಗುತ್ತೇದಾರ್ ಗಾರಂಪಳ್ಳಿ ಅವರ ಪುತ್ರರಾದ ಡಾ. ವಿನಯ್ ಗುತ್ತೇದಾರ್ ಗಾರಂಪಳ್ಳಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಸ್ವಾಮೀಜಿ ಘೋಷಣೆ ಮಾಡಿದರು. ಜೊತೆಗೆ ಉತ್ಸವದ ಯಶಸ್ವಿಗಾಗಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮತ್ತು ಸಿ ನಾರಾಯಣ ಗುರುಗಳ ತತ್ವ ಸಂದೇಶವನ್ನು ಸಮಾಜಕ್ಕೆ ಸಾರಲು ಎಲ್ಲರೂ ಪ್ರಯತ್ನಿಸಬೇಕು. ಗುರುಗಳ ಸಂದೇಶದ ಬಗ್ಗೆ ಉಪನ್ಯಾಸ ನೀಡಲು ಉತ್ತಮ ವಾಗ್ಮಿಗಳನ್ನು ಆಹ್ವಾನಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಲಹೆ ನೀಡಿದರು. ಸಮಾಜದ ಯುವ ಮುಖಂಡರು ಹಾಗೂ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಬಾಲರಾಜ್ ಗುತ್ತೇದಾರ್ ಮಾತನಾಡಿ ಪೂಜ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಸಮಾಜವು ಅನೇಕ ಉತ್ತಮ ಕೆಲಸಗಳನ್ನು ಮಾಡಿ ಆದರ್ಶಪ್ರಾಯವಾಗಿದೆ ಜಯಂತಿ ಉತ್ಸವವನ್ನು ಜಿಲ್ಲೆಯಲ್ಲಿ ಮಾದರಿಯಾಗಿ ನಡೆಸಲು ಸರ್ವರ ಸಹಕಾರ ಅಗತ್ಯ ಎಂದು ಹೇಳಿದರು. ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ಗುತ್ತೇದಾರ್ ಮಾತನಾಡಿ ನಾರಾಯಣ ಗುರುಗಳ ಜಯಂತಿ ಆಚರಣೆಯು ಆದರ್ಶಪ್ರಾಯವಾಗಿ ಮಾಡಿ ಸಮಾಜದ ಒಗ್ಗಟ್ಟಿಗೆ ಪೂರಕವಾಗುವಂತೆ ಎಲ್ಲರೂ ಕೈಜೋಡಿಸಬೇಕಾಗಿದೆ. ಜಯಂತಿ ಉತ್ಸವದ ಕಾರ್ಯಕ್ರಮಕ್ಕೆ ತನು ಮನ ಧನದಿಂದ ಎಲ್ಲರೂ ಸಹಕಾರ ನೀಡಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಲಬುರಗಿ ಜಿಲ್ಲಾ ಆರ್ಯ ಈಡಿಗ ಸಮಾಜದ ಅಧ್ಯಕ್ಷರಾದ ರಾಜೇಶ್ ಜಗದೇವ ಗುತ್ತೇದಾರ್ ಮಾತನಾಡಿ ನಾರಾಯಣ ಗುರುಗಳ ತತ್ವ ಸಂದೇಶಗಳು ಮನೆಮನೆಗೆ ಮುಟ್ಟಲು ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಜಯಂತಿ ಕಾರ್ಯಕ್ರಮವನ್ನು ರಜೆಯಿಂದ ಎಲ್ಲರೂ ಒಟ್ಟಾಗಿ ಮಾಡಬೇಕಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಮಂತ್ರಿಗಳನ್ನು ಹಾಗೂ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು. ನಾರಾಯಣ ಗುರುಗಳ ಸಭಾಭವನ ಸೇರಿದಂತೆ ತಾಲೂಕು ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸರಕಾರದ ನೆರವನ್ನು ಪಡೆದುಕೊಳ್ಳಲು ಎಲ್ಲ ರೀತಿಯ ನೆರವು ನೀಡಲಾಗುವುದು ಕಲಬುರಗಿಯಲ್ಲಿ ಸುಮಾರು ಎಕರೆ ಜಾಗವನ್ನು ಗುರುತಿಸಲಾಗಿದ್ದು ಶೀಘ್ರದಲ್ಲಿ ಅದಕ್ಕೆ ಶೀಲನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಈಗಾಗಲೇ ಆರ್ಯದಿಕ ಸಮಾಜದ ಸ್ಮಶಾನಭೂಮಿಗೆ 10 ಲಕ್ಷ ರೂಪಾಯಿಯನ್ನು ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ್ ಶಾಸಕ ನಿಧಿಯಿಂದ ಬಿಡುಗಡೆ ಮಾಡಲಾಗಿದೆ ಇಡೀ ಜಿಲ್ಲೆಯಲ್ಲಿ ಅನೇಕ ಸಮುದಾಯ ಭವನಗಳಿಗೆ ಈಗಾಗಲೇ 40 ಲಕ್ಷದಷ್ಟು ರೂಪಾಯಿಯನ್ನು ನೀಡಲಾಗಿದ್ದು ನಾರಾಯಣ ಗುರುಗಳ ತತ್ವ ಆದರ್ಶಗಳನ್ನು ಪಸರಿಸಲು ಇಂತಹ ಯೋಜನೆಗಳು ಅತ್ಯಂತ ಪ್ರಮುಖವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ, ಶಂಕರ್ ಲೀಡರ್, ಚಿತ್ತಾಪುರ ದೇವೇಂದ್ರಪ್ಪ ಜೇವರ್ಗಿ ನಾಗಯ್ಯ ಗುತ್ತೇದಾರ್ ಚಿತ್ತಾಪುರ, ಸರಕಾರಿ ಈಡಿಗರ ನೌಕರರ ಸಂಘದ ಅಧ್ಯಕ್ಷರಾದ ರಾಜಕುಮಾರ್ ಗುತ್ತೇದಾರ್, ವೆಂಕಟಯ್ಯ ಗೌಡ ಸೇಡಂ ಭೀಮಯ್ಯ ಶಹಬಾದ್ ಮಲ್ಲಿಕಾರ್ಜುನ ಕುಕ್ಕುಂದಿ ಕಲಬುರಗಿ, ಜಗದೇವ ಗುತ್ತೇದಾರ್ ಕಲ್ ಬೇನೂರು, ಅಶೋಕ್ ಭೀಮಳ್ಳಿ ಶಶಿಧರ ಮುಖ್ಯದಾರ ಮತ್ತಿತರು ಮಾತನಾಡಿ ಸೂಕ್ತ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಜಯಂತೋತ್ಸವ ಆಚರಣೆಯ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ನಡೆಯಿತು. ಕಲಬುರ್ಗಿ ಜಿಲ್ಲಾ ಆರ್ಯ ಈಡಿಗ ಸಮಾಜದ ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ವೆಂಕಟೇಶ ಕಡೇಚೂರ್, ಕಲ್ಯಾಣ ಕರ್ನಾಟಕ ಹಾರೇಡಿಗೆ ಹೋರಾಟ ಸಮಿತಿಯ ಉಪಾಧ್ಯಕ್ಷರಾದ ಮಹಾದೇವ ಗುತ್ತೇದಾರ್ ಮತ್ತಿತರ ಪ್ರಮುಖರು ಭಾಗವಹಿಸಿದ್ದರು. ಕಲಬುರಗಿ ಜಿಲ್ಲೆಯ ಎಲ್ಲ ತಾಲೂಕುಗಳ ಸಮಾಜದ ಮುಖಂಡರು ಹಾಗೂ ಪದಾಧಿಕಾರಿಗಳು ಸೇರಿದಂತೆ ನೂರಕ್ಕೂ ಹೆಚ್ಚು ಭಾಗವಹಿಸಿದ್ದರು.
ಜಯಂತ್ಯೋತ್ಸವದ ನೂತನ ಸಮಿತಿ ರಚನೆ
ಡಾ. ವಿನಯ್ ಗುತ್ತೇದಾರ್ ಗಾರಂಪಳ್ಳಿ (ಅಧ್ಯಕ್ಷರು) ಶಿವರಾಜ್ ಗುತ್ತೇದಾರ್ (ಉಪಾಧ್ಯಕ್ಷರು) ಶಿವಯ್ಯ ಗುತ್ತೇದಾರ್ ಮತ್ತು ಜಗದೇವ ಗುತ್ತೇದಾರ್ (ಕಾರ್ಯದರ್ಶಿಗಳು) ಮಲ್ಲಿಕಾರ್ಜುನ ಕುಕ್ಕುಂದಿ (ಖಜಾಂಚಿ), ಕಾಶಿನಾಥ್ ಗುತ್ತೇದಾರ್ (ಮಾಧ್ಯಮ ಕಾರ್ಯದರ್ಶಿ)