ಮರಗೋಳ ಕಾಲೇಜಿನ ಪಕ್ಕದಲ್ಲೇ ಪ್ರಜಾಸೌಧ ನಿರ್ಮಾಣ ಕರಣಿಕ್‌ ಒತ್ತಾಯ

ಮರಗೋಳ ಕಾಲೇಜಿನ ಪಕ್ಕದಲ್ಲೇ ಪ್ರಜಾಸೌಧ ನಿರ್ಮಾಣ ಕರಣಿಕ್‌ ಒತ್ತಾಯ

ಮರಗೋಳ ಕಾಲೇಜಿನ ಪಕ್ಕದಲ್ಲೇ ಪ್ರಜಾಸೌಧ ನಿರ್ಮಾಣ ಕರಣಿಕ್‌ ಒತ್ತಾಯ

ನಾಗರಾಜ್ ದಂಡಾವತಿ ವರದಿ ಕಲ್ಯಾಣ ಕಹಳೆ ಪತ್ರಿಕೆ 

 ಶಹಾಬಾದ :ತಾಲ್ಲೂಕಿನ ಶಹಾಬಾದ ನಗರದ ಮರಗೋಳ ಕಾಲೇಜಿನ ಪಕ್ಕದಲ್ಲೇ ಇರುವ ಸರಕಾರ ಜಾಗದಲ್ಲೇ ಪ್ರಜಾಸೌಧ ನಿರ್ಮಾಣಕ್ಕೆ ಕಟ್ಟು ನಿಟ್ಟಿನ ಕ್ರಮಕೈ ಗೊಳ್ಳಬೇಕೆಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರಿಗೆ ದಸಂಸ ಜಿಲ್ಲಾ ಮುಖಂಡ ಕೃಷ್ಣಪ್ಪ ಕರಣಿಕ್ ಆಗ್ರಹಿಸಿದ್ದಾರೆ.

ಅವರು ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿ,ಜನೇವರಿ 12ರಂದು ಯಡ್ರಾಮಿ ತಾಲೂಕಿನಲ್ಲಿ ಪ್ರಜಾಸೌಧ ಉದ್ಘಾಟನೆ ಕಾರ್ಯ ಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸುತ್ತಿದ್ದಾರೆ. ಅಲ್ಲಿ ಉದ್ಘಾಟನೆ ಮಾಡುವುದು ನಮಗೆಲ್ಲರಿಗೂ ಸಂತಸ ತಂದಿದೆ. ಅಲ್ಲದೇ ರಾಜ್ಯದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಚಿತ್ತಾಪೂರ ತಾಲೂಕನ್ನು ಮೂರು ಭಾಗವಾಗಿ ಮಾಡಿ, ಶಹಾಬಾದ ಕಾಳಗಿ ಹಾಗೂ ಚಿತ್ತಾಪೂರ ಹೊಸ ದಾಗಿ ತಾಲೂಕ ಘೋಷಣೆ ಮಾಡಿ, ಸುಮಾರು ಹತ್ತು ವರ್ಷಗಳ ಕಳೆದುಹೋಗಿವೆ. ಆದರೂ ಇಲ್ಲಿಯವರೆಗೆ ಯಾವುದೇ ಅನುಕೂಲಗಳು ಜನರಿಗೆ ದಕ್ಕಿಲ್ಲ.ಆದ್ದರಿಂದ ತಾವು ಮುಖ್ಯ ಮಂತ್ರಿ ಆದ ಮೇಲೆ ನಮ್ಮ ಕಲಬುರಗಿ ಜಿಲ್ಲೆಯ ವಿಭಜಿತ ನೂತನ ತಾಲೂಕ ಕೇಂದ್ರಗಳಿಗೆ ಪ್ರಜಾಸೌಧ

ನಿರ್ಮಿಸಲು ಮಾನ್ಯ ಜಿಲ್ಲಾಧಿಕಾ ರಿಗಳಿಗೆ ನೀಲಿ ನಕ್ಷೆಯನ್ನು ತಯ್ಯಾ ರಿಸಲು ಆದೇಶ ಹೊರಡಿ ಸಿದ್ದೀರಿ. ಆದರೆ ಸಹಾಬಾದ ತಾಲೂಕಿನ ಪ್ರಜಾಸೌಧ ನಿರ್ಮಿಸಲು ಮರಗೋಳ ಕಾಲೇಜ್ ಪಕ್ಕದಲ್ಲಿ ಇರುವ ಜಮೀ ನನ್ನು ತಾಲೂಕಾಡಳಿತ ಗುರುತಿಸಿದ್ದು ಅದನ್ನು ಹೈದ್ರಬಾದ ಶಿಕ್ಷಣ ಸಂಸ್ಥೆಯ ಎಸ್. ಎಸ್. ಮರಗೋಳ ಕಾಲೇಜಿನವರು ಕೋರ್ಟನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಈ ಸಂಪೂರ್ಣ ಜಾಗ ಸರಕಾರದ್ದು. ಆದರೆ ಅವರು ಬೇನಾಮಿಯಾಗಿ ಬಳಸಿ ಕೊಂಡಿ ದ್ದಾರೆ. ಕೂಡಲೇ ಈ ಬಗ್ಗೆ ಕ್ರಮಕೈಗೊಂಡು ಇದೇ ಸ್ಥಳದಲ್ಲಿಯೇ ಪುಜಾಸೌಧವನ್ನು ನೀರ್ಮಿ ಸಬೇಕು.ಇದರಿಂದ ಜನರಿಗೆ ಸಮೀಪವಾಗು ವುದರಿಂದ ಅನುಕೂಲ ಒದಗಿಸಿಕೊಟ್ಟಂತಾಗುತ್ತದೆ. ಇದನ್ನು ಆದಷ್ಟು ಬೇಗನರ ಇತ್ಯರ್ಥಗೊಳಿಸಿ ಪ್ರಜಾಸೌಧ ನಿರ್ಮಾಣ ಮಾಡಿಕೊಡಬೇಕೆಂದು ಕೃಷ್ಣಪ್ಪ ಕರಣಿಕ್ ಮನವಿ ಮಾಡಿದ್ದಾರೆ.

ದಸಂಸ ತಾ.ಸಂಚಾಲ ಜೈಭೀಮ ರಸ್ತಾಪೂರ, ಪುನೀತ ಹಳ್ಳಿ ತಿಪ್ಪಣ್ಣ ಧನ್ನೇಕರ್,ಸುನೀಲ ಮೆಂಗನ್, ಭೀಮಾಶಂಕರ ಕಾಂಬಳೆ,ರಾಕೇಶ ಜಾಯಿ, ಸುನೀಲ ದೊಡ್ಡಮನಿ, ಮಹಾದೇವ ತರನಳ್ಳಿ ಸೇರಿದಂತೆ ಅನೇಕರು ಇದ್ದರು.