ವಾಡಿ ಯಲ್ಲಿ ಸಂಕ್ರಾಂತಿ ಸ್ನಾನಕ್ಕೆ ಉಚಿತ ಕಡಲೆ ಹಿಟ್ಟು.

ವಾಡಿ ಯಲ್ಲಿ ಸಂಕ್ರಾಂತಿ ಸ್ನಾನಕ್ಕೆ ಉಚಿತ ಕಡಲೆ ಹಿಟ್ಟು.

ವಾಡಿ ಯಲ್ಲಿ ಸಂಕ್ರಾಂತಿ ಸ್ನಾನಕ್ಕೆ ಉಚಿತ ಕಡಲೆ ಹಿಟ್ಟು.

ವಾಡಿ:ಮಕರ ಸಂಕ್ರಾಂತಿಯಂದು ಸಾವಿರಾರು ಜನ ಪಟ್ಟಣದ ಪಕ್ಕದ ಭೀಮಾ-ಕಾಗಿಣ ಸಂಗಮದಲ್ಲಿ ಪುಣ್ಯಸ್ನಾನ ಮಾಡಲು ಆಗಮಿಸುತ್ತಾರೆ. ಇವರಿಗೆ ನದಿಯ ಪಾವಿತ್ರೃ ಮತ್ತು ಶುದ್ಧತೆ ಬಗ್ಗೆ ಅರಿವು ಮೂಡಿಸಲು ವಿಷಮುಕ್ತ ಪುಣ್ಯಸ್ನಾನ ಅಭಿಯಾನವನ್ನು ವರದಶ್ರೀ ಫೌಂಡೇಶನ್ ಸಂಸ್ಥೆ ಹಮ್ಮಿಕೊಂಡಿದೆ‌ ಎಂದು ಸಂಸ್ಥೆಯ ಸದಸ್ಯ ವೀರಣ್ಣ ಯಾರಿ ಹೇಳಿದ್ದಾರೆ.

ಬುಧವಾರ ಮತ್ತು ಗುರುವಾರ ಕುಂದನೂರಿನ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿನ ಸಂಗಮದಲ್ಲಿ

ವಿಷಮುಕ್ತ ಪುಣ್ಯಸ್ನಾನ ಅಭಿಯಾನವನ್ನು ಹಮ್ಮಿಕೊಂಡಿದ್ದು, ನದಿ ನೀರಿಗೆ ಶಾಂಪೂ, ಸಾಬೂನು ಮುಂತಾದ ರಾಸಾಯನಿಕಗಳನ್ನು ಸೇರಿಸದೆ ಪುಣ್ಯಸ್ನಾನ ಮಾಡುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ನದಿಯ ನೀರನ್ನು ಕಾಪಾಡೊವ ಪಣ ನಾವೆಲ್ಲರೂ ತೊಡಬೇಕಾಗಿದೆ ಎಂದು ಹೇಳಿದರು. ವರದಶ್ರೀ ಫೌಂಡೇಶನ್‌ ಸಂಸ್ಥಾಪಕರಾದ ಮಲ್ಲಿಕಾರ್ಜುನ ರಡ್ಡೇರ ಅವರು ಪಟ್ಟಣದ ಸುತ್ತಮುತ್ತಲಿನ ನದಿಗಳಲ್ಲಿ ಪುಣ್ಯಸ್ನಾನ 

 ಕೈಗೊಳ್ಳುವ ಜನರಿಗೆ ಕಡಲೆ ಹಿಟ್ಟಿನ 10 ಸಾವಿರ ಪ್ಯಾಕ್‌ಗಳನ್ನು ಉಚಿತವಾಗಿ ಕಳಿಸಿದ್ದಾರೆ ಆದ್ದರಿಂದ ಜನರು ಇದರ ಮಹತ್ವವನ್ನು ಅರಿತು ಎಲ್ಲರಿಗೂ ವಿಷಯುಕ್ತ ಪುಣ್ಯಸ್ನಾನದ ಅರಿವು ಮೂಡಿಸಬೇಕಾಗಿದೆ ಎಂದು ಹೇಳಿದರು.