ವಿದ್ಯಾರ್ಥಿಗಳೆ ದೇವರು,ವಿದ್ಯಾಲಯಗಳೆ ದೇವಾಲಯ ಎಂಬ ಸಿದ್ಧಾಂತವನ್ನು ಪ್ರತಿಪಾದಿಸಿದವರು ಲಿಂಗೈಕ್ಯ ರಾಂಪೂರೆಯವರು ಶಶೀಲ್ ಜಿ ನಮೋಶಿ

ವಿದ್ಯಾರ್ಥಿಗಳೆ ದೇವರು,ವಿದ್ಯಾಲಯಗಳೆ ದೇವಾಲಯ ಎಂಬ ಸಿದ್ಧಾಂತವನ್ನು ಪ್ರತಿಪಾದಿಸಿದವರು ಲಿಂಗೈಕ್ಯ ರಾಂಪೂರೆಯವರು ಶಶೀಲ್ ಜಿ ನಮೋಶಿ
ಕಲಬುರ್ಗಿ: ವಿದ್ಯಾರ್ಥಿಗಳೇ ದೇವರು;ವಿದ್ಯಾಲಯಗಳೇ ದೇವಾಲಯ’ಎಂಬ ಸಿದ್ಧಾಂತ ರೂಪಿಸಿ, ಕಲ್ಯಾಣ ಕರ್ನಾಟಕ ಭಾಗದ ಎಲ್ಲೆಡೆ ಬಡ ಮಕ್ಕಳ ಜ್ಞಾನಾರ್ಜನೆಗಾಗಿ ವಿದ್ಯಾಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಿದ ಪರಮಪೂಜ್ಯ ಲಿಂಗೈಕ್ಯ ಮಹಾದೇವಪ್ಪ ರಾಂಪೂರೆಯವರು ಇಂದಿಗೂ ಅಸಂಖ್ಯಾತ ಬಡ ವಿದ್ಯಾರ್ಥಿಗಳ ಪಾಲಿನ ಹೊಂಬೆಳಕು.ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಹೇಳಿದರು.
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಲಿಂಗೈಕ್ಯ ಮಹಾದೇವಪ್ಪ ರಾಂಪೂರೆಯರ 104 ನೇ ಜಯಂತಿ ಕಾರ್ಯಕ್ರಮದಲ್ಲಿ ಹೇಳಿದರು
ಶೈಕ್ಷಣಿಕವಾಗಿ ಅಂಧಕಾರದಲ್ಲಿದ್ದ ಕಲ್ಯಾಣ ಕರ್ನಾಟಕ ಭಾಗವನ್ನು ಶಿಕ್ಷಣ ಎಂಬ ಜ್ಯೋತಿಯಿಂದ ಬೆಳಗಿದ ಮಹಾನ್ ವ್ಯಕ್ತಿತ್ವ ಇವರದು. ಒಂದು ವೇಳೆ ಮಹಾದೇವಪ್ಪ ರಾಂಪೂರೆಯವರು ಈ ಭಾಗದಲ್ಲಿ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದೆ ಹೋಗಿದ್ದಾರೆ ಇನ್ನೂ ನಮ್ಮ ಭಾಗ ಶೈಕ್ಷಣಿಕ ಕಗ್ಗತ್ತಲೆಯಲ್ಲಿಯೇ ಇರುತಿತ್ತು ಎಂದು ಹೇಳಿದರು.
ಅತ್ಯಂತ ಹಿಂದುಳಿದ ಪ್ರದೇಶವಾದ ಈ ಪ್ರದೇಶದಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ತಾಂತ್ರಿಕ, ಪ್ರಾಥಮಿಕದಿಂದ ಸ್ನಾತಕೋತ್ತರ ಪದವಿಯ ವರೆಗೆ ಮಹಾವಿದ್ಯಾಲಯಗಳನ್ನು ಸ್ಥಾಪಿಸಿ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಜೀವನ ಕಲ್ಯಾಣ ಮಾಡುವುದರ ಜೋತೆಗೆ ಸಾವಿರಾರು ಜನರ ಬಾಳಿಗೆ ಉದ್ಯೋಗದಾತರಾದರು.ಎಂದು ಹೇಳಿದರು
ಈ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ ಜಂಟಿ ಕಾರ್ಯದರ್ಶಿಗಳಾದ ಡಾ ಕೈಲಾಸ ಪಾಟೀಲ್ ಹಾಗೂ ಎಲ್ಲ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು