ವಿದ್ಯೆಯಿಂದ ಸಮಾಜದ ಪ್ರಗತಿ ಸಾಧ್ಯ: ಡಾ ಅಲ್ಲಮಪ್ರಭು ದೇಶಮುಖ

ವಿದ್ಯೆಯಿಂದ ಸಮಾಜದ ಪ್ರಗತಿ ಸಾಧ್ಯ: ಡಾ ಅಲ್ಲಮಪ್ರಭು ದೇಶಮುಖ

ವಿದ್ಯೆಯಿಂದ ಸಮಾಜದ ಪ್ರಗತಿ ಸಾಧ್ಯ: ಡಾ ಅಲ್ಲಮಪ್ರಭು ದೇಶಮುಖ

ಕಲಬುರಗಿ : ವಿದ್ಯೆಯಿಂದ ಸಮಾಜದ ಪ್ರಗತಿ ಸಾಧ್ಯವಿದ್ದು ,ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಶರಣಬಸವೇಶ್ವರ ಸಂಸ್ಥಾನದ ಆಡಳಿತಾಧಿಕಾರಿ ಹಾಗೂ ಸಮಾಜಮುಖಿ ವೈದ್ಯರಾದ ಡಾ ಅಲ್ಲಮಪ್ರಭು ದೇಶಮುಖ ಅಭಿಪ್ರಾಯ ಪಟ್ಟಿದ್ದಾರೆ.

ನಗರದ ಕಾಕಡೆ ಚೌಕ ಹತ್ತಿರದ ರಾಮೇಶ್ವರ ನಗರದ ಸಂಪತಿ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಸಂಪತಿ ಹಿರಿಯ ಪ್ರಾಥಮಿಕ ಶಾಲೆಯು 35 ನೇ ವರ್ಷ ಪೂರೈಸಿದ ಪ್ರಯುಕ್ತ ನಡೆದ"ಮಕ್ಕಳ ಪ್ರತಿಭಾ ಉತ್ಸವ" ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹೆಚ್ಚಿನ ವಿದ್ಯಾರ್ಥಿಗಳನ್ನು ಹೊಂದಿರುವ ಈ ಶಾಲೆಯು ಕನ್ನಡ ಮಾದ್ಯಮವಾಗಿದ್ದರೂ, ಸಹ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಿಂತ ಕಡಿಮೆಯೆನಿಲ್ಲ. ಬದುಕಿನಲ್ಲಿ ನಾವು ಕೊಟ್ಟು ಹೋಗಬೇಕು.ಇಲ್ಲವೇ ಬಿಟ್ಟು ಹೋಗಬೇಕು ಎಂಬ ಆಶಾಭಾವನೆಯಿಂದ ನಾವು ಬದುಕಬೇಕು.ಮನುಷ್ಯನಲ್ಲಿರುವ ಪರಿಪೂರ್ಣತೆಯನ್ನು ಪ್ರಕಾಶಗೊಳಿಸುವುದೇ ವಿದ್ಯೆ. ವಿದ್ಯೆಯಿಂದ ನಮ್ಮ ಬಾಳು ಮಾತ್ರವಲ್ಲ ಎಲ್ಲರ ಬಾಳು ಬೆಳಗುವಂತಾಗಬೇಕು ಎಂದು ಡಾ ಅಲ್ಲಮಪ್ರಭು ದೇಶಮುಖ ಹೇಳಿದರು.

ಕೃಷಿ ಶ್ರೀ ಪ್ರಶಸ್ತಿ ಪುರಸ್ಕೃತ ಲೇಖಕ ಪ್ರೊ ಯಶವಂತರಾಯ ಅಷ್ಠಗಿ ಮಾತನಾಡಿ, ಕನ್ನಡ ಮಾದ್ಯಮ ಶಾಲೆ ಎಂಬ ಕೀಳರಿಮೆ ಪಾಲಕರಲ್ಲಿ ಹಾಗೂ ಮಕ್ಕಳಲ್ಲಿ ಬೇಡ. ವಿದ್ಯಾರ್ಥಿಗಳು ಇಷ್ಟ ಪಟ್ಟು ಓದಿದರೆ ಯಾವ ಮಾಧ್ಯಮದಲ್ಲಿಯೂ ಸಾಧನೆ ಮಾಡಬಹುದು. ಈ ಶಾಲೆಯು ಸಮಾಜಕ್ಕೆ ಅತ್ಯುತ್ತಮ ನಾಗರೀಕರನ್ನು ಕೊಡುಗೆಯಾಗಿ ನೀಡಿದೆ. ಈ ಪರಂಪರೆ ಹೀಗೆಯೇ ಮುಂದುವರಿಯುತ್ತಿರುವುದು ಶ್ಲಾಘನೀಯ ಎಂದರು.

  ಸಂಪತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸುನಿಲ್ ಸಕ್ಪಾಲ ಮಾತನಾಡಿ, ಅನುದಾನಿತ ಶಾಲೆ ಮತ್ತು ಕನ್ನಡ ಮಾಧ್ಯಮದಲ್ಲಿ ಕಲಿತವರು ಸಮಾಜದಲ್ಲಿ ಹಿಂದೆ ಬಿದ್ದಿಲ್ಲ.ಸಂಸ್ಥೆ ಬೆಳೆಯುವಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಸ್ಥಳೀಯ ಗಣ್ಯರ ಪಾತ್ರ ಮುಖ್ಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಾಜ ಸೇವಕ ಉಮೇಶ್ ಪಾಟೀಲ್, ಕನ್ನಡ ಮಾಧ್ಯಮ ಶಾಲೆಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ಈ ಸಂದರ್ಭದಲ್ಲಿ ಸಂಪತಿ ಹಿರಿಯ ಪ್ರಾಥಮಿಕ ಶಾಲೆಯು ಹೆಚ್ಚಿನ ವಿದ್ಯಾರ್ಥಿಗಳನ್ನು ಹೊಂದಿ, ಮೌಲ್ಯಯುತ ಶಿಕ್ಷಣ ನೀಡುತ್ತಿರುವುದು ಕನ್ನಡ ಮಾದ್ಯಮ ಶಾಲೆಗಳಿಗೆ ಮಾದರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕೃಷಿ ಶ್ರೀ ಪ್ರಶಸ್ತಿ ಪುರಸ್ಕೃತ ಲೇಖಕ ಪ್ರೊ ಯಶವಂತರಾಯ ಅಷ್ಠಗಿ ಹಾಗೂ ಪ್ರಮುಖರಾದ ಪ್ರತಾಪ ಕಾಕಡೆ, ಚೆನ್ನವೀರ ಲಿಂಗನವಾಡಿ, ಶಾಂತಕುಮಾರ್ ದುಧನಿ ಮಾತನಾಡಿದರು.

 ಮಹಾನಗರಪಾಲಿಕೆ ಸದಸ್ಯರಾದ ಸುನಿಲ್ ಮುಚೆಟ್ಟಿ,, ಬಸವರಾಜ ಮುನ್ನಳ್ಳಿ ಬಡಾವಣೆಯ ಪ್ರಮುಖರಾದ ಹಣಮಂತ ಪೂಜಾರಿ, ಸೋಮಶೇಖರ್ ಮಾಲಿಪಾಟೀಲ ತೇಗಲತಿಪ್ಪಿ, ಜಿಲ್ಲಾ ಪತ್ರಕರ್ತರ ಸಂಘದ ಖಜಾಂಚಿ ಅಶೋಕ್ ಕಪನೂರ, ಸಂಪತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಉಷಾ ಸುನಿಲ್ ಸಕ್ಪಾಲ, ಸಂಪತಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಸುಮಿತ್ರಾ ಎ ಸಕ್ಪಾಲ , ರವಿ ಆರ್ ಡೋಣಿ, ಅನಿಲ್ ಭಂಕುರ , ಶೇಖರ ಪೂಜಾರಿ, ಸದಾಶಿವ ಬೆಟ್ಟ ಜೇವರ್ಗಿ ಮುಖ್ಯಗುರುಗಳಾದ ಕೃಷ್ಣಪ್ಪ ನಾಯಕ , ಸೇರಿದಂತೆ ಅನೇಕರು ಉಪಸ್ಥಿತರಿದ್ದರು.