ಸ್ವಾಮಿ ವಿವೇಕಾನಂದರ ಆದರ್ಶಗಳು ಯುವಕರಿಗೆ ಸ್ಪೂರ್ತಿ - ಬಸವರಾಜ ಗೊರ್ಜಿ
ಸ್ವಾಮಿ ವಿವೇಕಾನಂದರ ಆದರ್ಶಗಳು ಯುವಕರಿಗೆ ಸ್ಪೂರ್ತಿ - ಬಸವರಾಜ ಗೊರ್ಜಿ
ತಾಳಿಕೋಟೆ : ವ್ಯಕ್ತಿ ಹಾಗೂ ವ್ಯಕ್ತಿತ್ವ ಬದಲಾವಣೆಗೆ ಸ್ವಾಮಿ ವಿವೇಕಾನಂದರ ಆದರ್ಶ ಹಾಗೂ ಅವರ ಮಾನವೀಯ ಮೌಲ್ಯಗಳು ಮತ್ತು ತತ್ವಗಳು ಪೂರಕವಾಗಿವೆ ಎಂದು ಬಸವರಾಜ ಗೊರ್ಜಿ ಹೇಳಿದರು.
ತಾಲೂಕಿನ ಕೊಡಗಾನೂರ ಹಿರಿಯ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಸಿದ್ಧಬಸವ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿರುವ ಶ್ರೀ ಸ್ವಾಮಿ ವಿವೇಕಾನಂದ ಜಯಂತೋತ್ಸವದ ಅಂಗವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ರೀ ಸ್ವಾಮಿ ವಿವೇಕಾನಂದ ಅವರ ಚಿಂತನೆಗಳು ಹಾಗೂ ಸಾಮಾಜಿಕ ಕೆಲಸಗಳ ಮೂಲಕ ಎಲ್ಲರ ಜನರ ಮನಸ್ಸಿನಲ್ಲಿ ಉಳಿಸಿದ್ದಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಗತಿಪರ ಚಿಂತಕರಾದ ಮಂಜುನಾಥ ಬೇಲಾಳ ಮಾತನಾಡಿ ಸ್ವಾಮಿ ವಿವೇಕಾನಂದ ಅವರ ಜೀವನ ಚರಿತ್ರೆ ಓದಿ ಅರ್ಥೈಸಿಕೊಳ್ಳುವುದರ ಮುಖಾಂತರ ಅವರ ಆದರ್ಶ ತಮ್ಮ ಬದುಕಿನ ದುದ್ದಕ್ಕೂ ಅಳವಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಹಿರಿಯ ಶಿಕ್ಷಕರಾದ ಶ್ರೀಮತಿ ಎಸ್. ಎಂ.ಮಠ ಈ ಕಾರ್ಯಕ್ರಮದ ಘನ ಅಧ್ಯಕ್ಷತೆ ವಹಿಸಿಕೊಂಡಿದ್ದರು
ಈ ಸಮಾರಂಭದ ವೇದಿಕೆಯ ಮೇಲೆ ಶ್ರೀಮತಿ ಎಂ.ಎಂ.ಅವಟಿ, ಬಿ.ಎಸ್.ಕೊಂಡಗೂಳಿ ಪ್ರತಿಷ್ಠಾನದ ಅಧ್ಯಕ್ಷ ಪ್ರಶಾಂತ್ ಭಂಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕುಮಾರಿ ಶಿವಲೀಲಾ ಹಾಗೂ ಸವಿತಾ ಸಂಗಡಿಗರಿಂದ ಪ್ರಾರ್ಥನಾ ಗೀತೆ ನೆರವೇರಿತು.
